ನಾಪೋಕ್ಲು, ಅ. 10: ಸುನ್ನಿಜಂಈಯಾತುಲ್ ಯುಅಲುಮಿನ ಕೊಡಗು ಜಿಲ್ಲಾ ಘಟಕದ ಮಹಾಸಭೆ ಇತ್ತೀಚೆಗೆ ಕೊಂಡಂಗೇರಿಯ ಶಾದಿ ಮಹಲಿನಲ್ಲಿ ಜರುಗಿತು. ಜಿಲ್ಲಾ ಎಸ್‍ಜೆಎಂ ಅಧ್ಯಕ್ಷ ಶಾದುಲಿ ಫೈಜಿ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು.

ಸಯ್ಯದ್ ಕಾತಿಂ ಅಲ್ ಹೈದರುಸಿ ಪ್ರಾರ್ಥನೆಯೊಂದಿಗೆ ನಡೆದ ಮಹಾಸಭೆಯಲ್ಲಿ ವೀಕ್ಷಕರಾಗಿ ಎಸ್‍ಜೆಎಂ ರಾಜ್ಯ ಕಾರ್ಯದರ್ಶಿ ಸುಲೇಮಾನ್ ಸಖಾಫಿ ಪಾಲ್ಗೊಂಡಿದ್ದರು. ಸಭೆಯಲ್ಲಿ ನೂತನ ಜಿಲ್ಲಾ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಮುಸ್ತಾಫಾ ಸಖಾಫಿ, ಕಾರ್ಯದರ್ಶಿಯಾಗಿ ಆಶ್ರಫ್ ಸಖಾಫಿ, ಕೋಶಾಧಿಕಾರಿಯಾಗಿ ಸಯ್ಯದ್ ಖಾತಿಂ ತಂಞಳ್ ಸೇರಿದಂತೆ 20 ಮಂದಿಯನ್ನು ಸದಸ್ಯರನ್ನಾಗಿ ಆರಿಸಲಾಯಿತು.