ಭಾಗಮಂಡಲ, ಅ. 10: ಇಲ್ಲಿನ ಕಾವೇರಿ ಆಟೋ ಚಾಲಕರ ಸಂಘದ ವತಿಯಿಂದ ಭಾಗಮಂಡಲ-ಕರಿಕೆ ಜಂಕ್ಷನ್ ಬಳಿಯಿಂದ ತಲಕಾವೇರಿ ಯವರೆಗೆ 9 ಕಿ.ಮೀ. ರಸ್ತೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಭಾಗಮಂಡಲ ಠಾಣಾಧಿಕಾರಿ ವೆಂಕಟರಮಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ತಲಕಾವೇರಿಯ ಯಾತ್ರಿ ನಿವಾಸದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಸಂಘದ ಅಧ್ಯಕ್ಷ ವೆಂಕಟರಮಣ ಅಧ್ಯಕ್ಷತೆ ವಹಿಸಿದ್ದರು. ಗ್ರಾಮೀಣ ಮಟ್ಟದಲ್ಲಿ ಸ್ವಚ್ಛತೆಗೆ ಒತ್ತು ನೀಡುವದು ಅವಶ್ಯಕ. ಸ್ವಚ್ಛತೆಯ ಹಿನ್ನೆಲೆ ಭಾಗಮಂಡಲಕ್ಕೆ ಗಾಂಧಿ ಗ್ರಾಮ ಪುರಸ್ಕಾರ ದೊರೆತಿದೆ ಎಂದರು. ಸಂಘ-ಸಂಸ್ಥೆಗಳು ಸಮಾಜ ಮುಖಿ ಕಾರ್ಯಕ್ರಮದಲ್ಲಿ ತೊಡಗಿಸಿ ಕೊಳ್ಳಲು ಸಂಘದ ಸದಸ್ಯರ ಒಗ್ಗೂಡುವಿಕೆ ಅಗತ್ಯ. ಕಳೆದ 17 ವರ್ಷಗಳಿಂದ ಅನೇಕ ಸಮಾಜ ಮುಖಿ ಕೆಲಸ ಕಾರ್ಯಗಳು ನಡೆಯುತ್ತಿದ್ದು, ಸಂಘದ ವೆಂಕಟರಮಣ ಅಧ್ಯಕ್ಷತೆ ವಹಿಸಿದ್ದರು. ಗ್ರಾಮೀಣ ಮಟ್ಟದಲ್ಲಿ ಸ್ವಚ್ಛತೆಗೆ ಒತ್ತು ನೀಡುವದು ಅವಶ್ಯಕ. ಸ್ವಚ್ಛತೆಯ ಹಿನ್ನೆಲೆ ಭಾಗಮಂಡಲಕ್ಕೆ ಗಾಂಧಿ ಗ್ರಾಮ ಪುರಸ್ಕಾರ ದೊರೆತಿದೆ ಎಂದರು. ಸಂಘ-ಸಂಸ್ಥೆಗಳು ಸಮಾಜ ಮುಖಿ ಕಾರ್ಯಕ್ರಮದಲ್ಲಿ ತೊಡಗಿಸಿ ಕೊಳ್ಳಲು ಸಂಘದ ಸದಸ್ಯರ ಒಗ್ಗೂಡುವಿಕೆ ಅಗತ್ಯ.