ಮಡಿಕೇರಿ, ಅ. 11: ನಗರದ ನಾಲ್ಕು ಶಕ್ತಿ ದೇವತೆಗಳಲ್ಲೊಂದಾದ ಶ್ರೀ ಕೋಟೆ ಮಾರಿಯಮ್ಮ ದೇವಾಲಯ ದಸರಾ ಮಂಟಪ ಸಮಿತಿ 43ನೇ ವರ್ಷದ ಉತ್ಸವ ಆಚರಣೆಗೆ ಸಜ್ಜಾಗುತ್ತಿದೆ ಎಂದು ಕೋಟೆ ಮಾರಿಯಮ್ಮ ದೇವಾಲಯ ದಸರಾ ಮಂಟಪ ಸಮಿತಿ ಅಧ್ಯಕ್ಷ ವಿ.ಬಿ. ಸುಶಾಂತ್ ನಾಯ್ಕ ತಿಳಿಸಿದ್ದಾರೆ.

ಎರಡು ಟ್ರ್ಯಾಕ್ಟರ್‍ಗಳನ್ನು ಬಳಸಲಾಗುತ್ತಿದ್ದು, ದಕ್ಷ ಯಜ್ಞ ಕಥಾ ಸಾರಾಂಶವನ್ನು ಅಳವಡಿಸಲಾಗುತ್ತಿದೆ. 12 ಕಲಾಕೃತಿಗಳನ್ನು ಬಳಸಲಾಗುತ್ತಿದ್ದು, ಕಲಾವಿದರಾದ ಸುನಿಲ್, ಪ್ರಸಾದ್, ಜಗದೀಶ್ ಮತ್ತು ತಂಡ ಕಲಾಕೃತಿಗಳನ್ನು ತಯಾರು ಮಾಡಲಿದ್ದಾರೆ. ಲೈಟಿಂಗ್ ಬೋರ್ಡ್‍ನ್ನು ಮಂಗಳೂರಿನ ಡೇವಿಡ್ ಒದಗಿಸಲಿದ್ದಾರೆ. ಧ್ವನಿವರ್ಧಕ ಹಾಗೂ ಸ್ಟುಡಿಯೋ ಸೆಟ್ಟಿಂಗ್ಸ್‍ನ್ನು ಕೇರಳದಿಂದ ತರಿಸಲಾಗುತ್ತಿದೆ. ಫ್ಲಾಟ್ ಪಾರಂನ್ನು ಸಮಿತಿಯ ಚಂದ್ರಶೇಖರ್ ಮತ್ತು ಸೀನಾ ನಿರ್ಮಿಸಲಿದ್ದಾರೆ. ಸಮಿತಿಯ ರಫೀಕ್, ಮನೋಜ್, ನಂದೀಶ್ ಕಲಾಕೃತಿಗಳಿಗೆ ಚಲನವಲನ ನೀಡಲಿದ್ದಾರೆ. ಟ್ರ್ಯಾಕ್ಟರ್ ಸೆಟ್ಟಿಂಗ್ಸ್‍ನ್ನು ಸಮಿತಿ ಸದಸ್ಯರೆ ಮಾಡಲಿದ್ದು, ರೂ. 6 ಲಕ್ಷ ವೆಚ್ಚದಲ್ಲಿ ಮಂಟಪವನ್ನು ಹೊರತರಲಾಗುತ್ತದೆ ಎಂದು ಸುಶಾಂತ್ ನಾಯ್ಕ ವಿವರಿಸಿದರು.

- ಉಜ್ವಲ್ ರಂಜಿತ್