ನಾಪೆÉÇೀಕ್ಲು, ಅ. 10: ಕಳೆದ 20 ವರ್ಷಗಳಿಂದ ನಾಪೆÉÇೀಕ್ಲು ಪಟ್ಟಣದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಜೋಸ್ ಎಂಬಾತ ಇದೀಗ ಖಾಯಿಲೆಯಿಂದ ನರಳುತ್ತಿದ್ದು, ಕಟ್ಟಡಗಳ ಬಳಿಯಲ್ಲಿ ಮಲಗುತ್ತಿದ್ದ ಈತನ ಕಾಲು ಗಾಯವಾಗಿದ್ದು ಇದರಲ್ಲಿ ಹುಳುಗಳಾಗಿ ತಲೆಯಲ್ಲಿ ಕೂದಲು ಬೆಳೆದು ಚಿಂತಾಜನಕ ಸ್ಥಿತಿಯಲ್ಲಿದ್ದನು.
ಆದರೆ ಈತನನ್ನು ನೋಡಿದವರು ಯಾವದೇ ಮರುಕಪಡಲಿಲ್ಲ. ಆದರೆ ನಾಪೆÇೀಕ್ಲು ಗ್ರಾಮ ಪಂಚಾಯಿತಿ ಸದಸ್ಯ ಮಹಮ್ಮದ್ ಖುರೇಶಿ ಇವನ ಪರಿಸ್ಥಿಯನ್ನು ನೋಡಿ ಖುದ್ದು ತಾವೇ ಟ್ರಿಮರ್ನಿಂದ ಇವರ ತಲೆ ಕೂದಲನ್ನು ಕತ್ತರಿಸಿ, ಪಕ್ಕದ ಹೊಟೇಲ್ನಿಂದ ಬಿಸಿ ನೀರು ತಂದು ಮೈಯನ್ನು ಉಜ್ಜಿ ಸ್ನಾನ ಮಾಡಿಸಿ ಹೊಸ ಬಟ್ಟೆ ತೊಡಿಸುವದರ ಮೂಲಕ ಕಾಲಿನ ಗಾಯಕ್ಕೆ ó ಔಷಧಿ ಹಚ್ಚಿ ಮಾನವೀಯತೆ ಮರೆದಿದ್ದಾರೆ
- ದುಗ್ಗಳ