ಕೂಡಿಗೆ, ಅ. 8: ಕುಶಾಲನಗರ ಸಮೀಪದ ಕೂಡಿಗೆ ಜಿಲ್ಲಾ ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ವಿಶ್ವೇಶ್ವರಯ್ಯ ಮೂಸಿಯಂ ಬೆಂಗಳೂರು, ರಾಜ್ಯ ಶಿಕ್ಷಣ ಸಂಶೋಧನಾ ತರಬೇತಿ ಇಲಾಖೆ ಮತ್ತು ಜಿಲ್ಲಾ ಶಿಕ್ಷಕರ ತರಬೇತಿ ಸಂಸ್ಥೆ ಕೂಡಿಗೆ ಸಂಯುಕ್ತ ಆಶ್ರಯದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಕೂಡಿಗೆ ಜಿಲ್ಲಾ ಶಿಕ್ಷಕರ ತರಬೇತಿ ಸಂಸ್ಥೆಯ ಪ್ರಾಂಶುಪಾಲರು, ಜಿಲ್ಲಾ ಉಪನಿರ್ದೇಶಕರು ಆದ ವಾಲ್ಟರ್ ಹಿಲೆರಿ ಡಿ ಮೆಲ್ಲೋ ಉದ್ಘಾಟಿಸಿದರು.
ವಸ್ತು ಪ್ರದರ್ಶನದ ಸಂಯೋಜಕ ಎ.ಸಿ. ಕುಮಾರ್ ಪ್ರಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸೋಮವಾರಪೇಟೆ ಶಿಕ್ಷಣಾಧಿಕಾರಿ ನಾಗರಾಜಯ್ಯ ಮಾತನಾಡಿದರು.
ಹಿರಿಯ ಉಪನ್ಯಾಸಕರಾದ ಜವರೇಗೌಡ, ಸಿದ್ದೇಶ್, ನಳಿನಾಕ್ಷಿ ಇದ್ದರು.