ಚೆಟ್ಟಳ್ಳಿ, ಅ. 8: ಕೊಡಗು ಸೇವಾ ಕೇಂದ್ರದ ಸಹಯೋಗದಲ್ಲಿ ಕೊಡಗು ಎಜುಕೇಶನ್ ಮತ್ತು ಸೋಶಿಯಲ್ ಸರ್ವಿಸ್ ಟ್ರಸ್ಟ್ ವತಿಯಿಂದ ಕೊಡಗು ಸೇವಾ ಕೇಂದ್ರಕ್ಕೆ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವಂತೆ ಕೋರಿದ್ದ ಅರ್ಜಿಯನ್ನು ಪರಿಶೀಲಿಸಿ, ಒಟ್ಟು 33,175 ರೂ.ಗಳ ಧನ ಸಹಾಯವನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಟ್ರಸ್ಟ್‍ನ ಕಾರ್ಯದರ್ಶಿ ಗಣೇಶ್ ಪೊನ್ನಪ್ಪ, ಕೊಡಗು ಏಕೀಕರಣ ರಂಗದ ತಮ್ಮ ಪೂವಯ್ಯ, ಬಿದ್ದಾಟಂಡ ತಮ್ಮಯ, ತೇಲಪಂಡ ಪ್ರಮೋದ್, ಪುತ್ತರಿರ ಪಪ್ಪು ತಿಮ್ಮಯ್ಯ, ವಿ.ಟಿ. ಮದನ್ ಉಪಸ್ಥಿತರಿದ್ದರು.