ಕುಶಾಲನಗರ, ಅ. 9: ಮೈಸೂರಿನ ಸಾಹಿತ್ಯಾತ್ಮಕ, ಜಾನಪದ ಹಾಗೂ ಸಾಂಸ್ಕøತಿಕ ಸಂಸ್ಥೆಯಾಗಿರುವ ಗ್ರಾಮಾಂತರ ಬುದ್ಧಿಜೀವಿಗಳ ಬಳಗ ಏರ್ಪಡಿಸಿದ್ದ ರಾಜ್ಯಮಟ್ಟದ ಕವನ ಸ್ಪರ್ಧೆಯಲ್ಲಿ ಕುಶಾಲನಗರದ ಉಪನ್ಯಾಸಕಿ ಲೀಲಾಕುಮಾರಿ ತೋಡಿಕಾನರ ಕವನ ಅತ್ಯುತ್ತಮ ಕವನವೆಂದು ಆಯ್ಕೆಯಾಗಿ ಕುವೆಂಪು ಕಾವ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಮೈಸೂರಿನಲ್ಲಿ ನಡೆದ ವಿಶ್ವಕವಿ ಕುವೆಂಪು ರಾಜ್ಯಮಟ್ಟದ ಸಾಹಿತ್ಯೋತ್ಸವದಲ್ಲಿ ಲೀಲಾಕುಮಾರಿ ಅವರಿಗೆ ಕುವೆಂಪು ಕಾವ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಲೀಲಾಕುಮಾರಿ ಕುಶಾಲನಗರದ ಅನುಗ್ರಹ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.