ವೀರಾಜಪೇಟೆ, ಅ. 9: ಪತ್ನಿಯ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಆರೋಪಿಗೆ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಬಿ.ವಿ ರಮಾ ಆರೋಪಿ ವಿಜಯಕುಮಾರ್ ಎಂಬವರಿಗೆ ಮೂರು ವರ್ಷಗಳ ಸಾದ ಸಜೆ ಹಾಗೂ 10 ಸಾವಿರ ದಂಡ. ದಂಡ ಕಟ್ಟಲು ತಪ್ಪಿದ್ದಲ್ಲಿ 6 ತಿಂಗಳ ಸಾದ ಸಜೆಯನ್ನು ಅನುಭವಿಸುವಂತೆ ತೀರ್ಪು ನೀಡಿದ್ದಾರೆ. ಹಾಗೂ ದಂಡದ ಹಣದಲ್ಲಿ ಮೃತಳ ತಾಯಿಗೆ 5 ಸಾವಿರ ಪರಿಹಾರವಾಗಿ ನೀಡುವಂತೆ ಆದೇಶಿಸಿದ್ದಾರೆ.
26.10.2016 ರಂದು ಆರೋಪಿ ವಿಜಯಕುಮಾರ್ ತನ್ನ ಪತ್ನಿ ಉಷಾ ಬಟ್ಟೆ ತೊಳೆಯುವಾಗ ಶರ್ಟಿನ ಜೇಬಿನಲ್ಲಿ ಇದ್ದ ಹಸಿರು ಎಲೆಯನ್ನು ನೋಡದೆ ತೊಳೆದುದರಿಂದ ಶರ್ಟಿಗೆ ಕಲೆ ಆದ ವಿಚಾರದಲ್ಲಿ ಜಗಳವಾಡಿ ‘ನೀನು ಇರುವದಕ್ಕಿಂತ ಹೋಗಿ ಸಾಯಿ’ ಎಂದು ಪ್ರಚೋದನೆ ನೀಡಿದ್ದರಿಂದ ಉಷಾ ಮನನೊಂದು ತಾನು ವಾಸವಿದ್ದ ಮನೆಯ ಮಲಗುವ ಕೋಣೆಯಲ್ಲಿ ಮರದ ಕೌಕೋಲಿಗೆ ವೇಲಿನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಹಿನ್ನಲೆಯಲ್ಲಿ ವೀರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ಕೊಂಡು ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಡಿ. ನಾರಾಯಣ್ ವಾದಿಸಿದ್ದರು.