ಕೂಡಿಗೆ : ಈ ವ್ಯಾಪ್ತಿಯಲ್ಲಿ ಕೊರೆಸಿರುವ ಕೊಳವೆ ಬಾವಿಗಳಲ್ಲಿ ಗಡಸು ನೀರು ಬರುತ್ತಿದ್ದು, ಕುಡಿಯಲು ಯೋಗ್ಯವಾಗಿಲ್ಲದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ನೀರನ್ನು ಸೋಮವಾರಪೇಟೆ ಮತ್ತು ಮೈಸೂರಿಗೆ ಪರೀಕ್ಷೆಗೆ ಕಳುಹಿಸಲಾಗಿದೆ.
ಕೊಳವೆ ಬಾವಿಗಳಲ್ಲಿ ಮಣ್ಣು ಮಿಶ್ರಿತ ನೀರು ಹಾಗೂ ಗಡಸು ನೀರು ಬರುತ್ತಿರುವದರಿಂದ ಉಪಯೋಗಿಸಲು ಸಹ ಸಾಧ್ಯವಾಗುತ್ತಿಲ್ಲ. ಗ್ರಾಮ ಪಂಚಾಯಿ ಅಭಿವೃದ್ಧಿ ಅಧಿಕಾರಿ ತಂಡ ಸ್ಥಳಕ್ಕೆ ತೆರಳಿ ನೀರನ್ನು ಪರೀಕ್ಷೆಗೆ ಕಳುಹಿಸಿದ್ದಾರೆ. ರೈತರು ಕೊರೆಸಿರುವ ಕೊಳವೆ ಬಾವಿಗಳ ನೀರನ್ನು ಸಹ ಸಂಗ್ರಹಿಸಿ ಪರೀಕ್ಷಾ ಕೇಂದ್ರಕ್ಕೆ ಕಳುಹಿಸಲಾಗಿದೆ.
ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಆಯೆಷಾ, ಬಸವನತ್ತೂರು ಗ್ರಾಮದ ಗ್ರಾಮಸ್ಥರ ದೂರಿನಂತೆ ಕುಡಿಯುವ ನೀರಿನ ಸಮಸ್ಯೆಯಾಗಿರುವದರಿಂದ ಆ ವ್ಯಾಪ್ತಿಯ ಎಲ್ಲಾ ಕೊಳವೆ ಬಾವಿಗಳ ನೀರನ್ನು ಸಂಗ್ರಹಿಸಿ ಜಲ ಪರೀಕ್ಷಾಲಯಕ್ಕೆ ನೀಡಲಾಗುತ್ತಿದೆ. ಅದರ ಫಲಿತಾಂಶ ಬಂದ ನಂತರ ಬದಲಿ ವ್ಯವಸ್ಥೆಗೆ ಸಿದ್ಧರಿದ್ದೇವೆ ಎಂದು ತಿಳಿಸಿದ್ದಾರೆ.