ಸೋಮವಾರಪೇಟೆ, ಅ. 9: ಪಟ್ಟಣ ಪಂಚಾಯಿತಿಗೆ ಚುನಾವಣಾ ದಿನಾಂಕ ನಿಗದಿಯಾಗಿರುವ ಹಿನ್ನೆಲೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ತಾ. 10ರಂದು (ಇಂದು) ಅಂತಿಮಗೊಳಿಸುವ ಸಾಧ್ಯತೆಯಿದ್ದು, ನಾಳೆಯಿಂದ ಅಧಿಕೃತವಾಗಿ ಚುನಾವಣಾ ಅಖಾಡಕ್ಕೆ ಅಭ್ಯರ್ಥಿಗಳು ಇಳಿಯಲಿದ್ದಾರೆ.
11 ಸದಸ್ಯ ಬಲ ಹೊಂದಿರುವ ಸೋಮವಾರಪೇಟೆ ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿಯಿಂದ ಈಗಾಗಲೇ 10 ಅಭ್ಯರ್ಥಿಗಳು ಅಂತಿಮವಾಗಿದ್ದು, ವಾರ್ಡ್-1 ಬಸವೇಶ್ವರ ರಸ್ತೆಗೆ ಅಭ್ಯರ್ಥಿಯ ಆಯ್ಕೆ ತಲೆನೋವಾಗಿ ಪರಿಣಮಿಸಿದೆ. ಈ ವಾರ್ಡ್ನಲ್ಲಿ ಕೆ.ಜಿ. ಸುರೇಶ್ ಮತ್ತು ಎಸ್. ಮಹೇಶ್ ಅವರುಗಳು ಟಿಕೇಟ್ಗಾಗಿ ಪ್ರಬಲ ಪೈಪೋಟಿ ನಡೆಸುತ್ತಿದ್ದು, ಇವರುಗಳ ನಡುವೆ ಅಶೋಕ್ಕುಮಾರ್ ಹಾಗೂ ಪತ್ರಿಕಾ
3 ವೆಂಕಟೇಶ್ವರ ಬ್ಲಾಕ್ನಿಂದ ನಳಿನಿ ಗಣೇಶ್, ವಾರ್ಡ್ 4 ರೇಂಜರ್ ಬ್ಲಾಕ್ 1ನೇ ಹಂತದಿಂದ ಎನ್.ಎಸ್. ಮೂರ್ತಿ, ವಾರ್ಡ್ 5 ದೇವಸ್ಥಾನ ರಸ್ತೆಯಿಂದ ಬಿ.ಎಂ. ಸುರೇಶ್, ವಾರ್ಡ್ 6 ವಿಶ್ವೇಶ್ವರಯ್ಯ ಬ್ಲಾಕ್ನಿಂದ ವಿಜಯಲಕ್ಷ್ಮೀ ಸುರೇಶ್, ವಾರ್ಡ್ 7 ರೇಂಜರ್ಬ್ಲಾಕ್ 2ನೇ ಹಂತದಿಂದ ಮಾಜೀ ಸದಸ್ಯೆ ದಾಕ್ಷಾಯಿಣಿ, ವಾರ್ಡ್ 8ರ ಜನತಾ ಕಾಲೋನಿಯಿಂದ ಪ್ರಮೋದ್, ವಾರ್ಡ್ 9ರ ಸಿದ್ದಲಿಂಗೇಶ್ವರ ಬ್ಲಾಕ್ನಿಂದ ಅನಿತಾ ಮಂಜುನಾಥ್, ವಾರ್ಡ್ 10 ಮಹದೇಶ್ವರ ಬಡಾವಣೆಯಿಂದ ಬಿಜೆಪಿಯ ದಿವ್ಯ ಮೋಹನ್, ವಾರ್ಡ್ 11 ಸಿ.ಕೆ. ಸುಬ್ಬಯ್ಯ ರಸ್ತೆಯಿಂದ ಬಿ.ಆರ್. ಮಹೇಶ್ ಅವರುಗಳನ್ನು ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆಯಿದೆ.
ತಾ.10ರಂದು ಪೂರ್ವಾಹ್ನ 10.30ಕ್ಕೆ ಇಲ್ಲಿನ ಕೊಡವ ಸಮಾಜದಲ್ಲಿ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರ ಉಪಸ್ಥಿತಿಯಲ್ಲಿ, ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಟಿಕೇಟ್ ಆಕಾಂಕ್ಷಿಗಳ ಸಭೆ ನಡೆಯಲಿದೆ.
ಬಂಡಾಯದ ಬಾವುಟ: 11 ವಾರ್ಡ್ಗಳಲ್ಲಿ 10 ವಾರ್ಡ್ಗಳಿಗೆ ಟಿಕೇಟ್ ಫೈನಲ್ ಮಾಡಿರುವ ಬಿಜೆಪಿಗೆ 3 ವಾರ್ಡ್ಗಳಲ್ಲಿ ಬಂಡಾಯ ಎದುರಾಗಿದೆ. ವಾರ್ಡ್ 3ರ ವೆಂಕಟೇಶ್ವರ ಬಡಾವಣೆಯಲ್ಲಿ ಬಿಜೆಪಿ ಟಿಕೇಟ್ ಆಕಾಂಕ್ಷಿಯಾಗಿದ್ದ ನೀಲಾವತಿ ಮೋಹನ್ಮೂರ್ತಿ ಅವರ ಬದಲಾಗಿ ನಳಿನಿ ಗಣೇಶ್ ಅವರಿಗೆ ಪಕ್ಷ ಮಣೆ ಹಾಕಿರುವ ಹಿನ್ನೆಲೆ, ನೀಲಾವತಿ ಅವರು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.
ಇದರೊಂದಿಗೆ ವಾರ್ಡ್-8ರ ಜನತಾ ಕಾಲೋನಿಯಿಂದ ಶುಭಕರ್ ಅವರು ಬಿಜೆಪಿಗೆ ಬಂಡಾಯವಾಗಿ ನಾಮಪತ್ರ ಸಲ್ಲಿಸಿದ್ದಾರೆ. ವಾರ್ಡ್ 10ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ಗೀತಾ ಹರೀಶ್ ಅವರು ಪ್ರಬಲ ಆಕಾಂಕ್ಷಿಯಾಗಿದ್ದರು. ವಾರ್ಡ್ನಲ್ಲಿ ಓಡಾಟವನ್ನೂ ನಡೆಸಿದ್ದರು. ಆದರೆ ಇಲ್ಲಿ ದಿವ್ಯ ಮೋಹನ್ ಅವರಿಗೆ ಬಿಜೆಪಿ ಟಿಕೇಟ್ ಅಂತಿಮವಾಗಿರುವದರಿಂದ ಗೀತಾ ಹರೀಶ್ ಅವರು ನಾಮಪತ್ರ ಸಲ್ಲಿಸಿದ್ದು, ಪಕ್ಷಕ್ಕೆ ಸೆಡ್ಡುಹೊಡೆದಿದ್ದಾರೆ.
-ವಿಜಯ್