*ಗೋಣಿಕೊಪ್ಪ, ಅ. 9: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ 2ನೇ ಅವಧಿಯ ಅಧ್ಯಕ್ಷರಾಗಿ ಬಾಳೆಲೆ ಕ್ಷೇತ್ರದ ಆದೇಂಗಡ ವಿನು ಚಂಗಪ್ಪ ಹಾಗೂ ಉಪಾಧ್ಯಕ್ಷರಾಗಿ ಪೊನ್ನಂಪೇಟೆ ಕ್ಷೇತ್ರದ ಚೀಯಕಪೂವಂಡ ಸುಬ್ರಮಣಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕೃಷಿ ಉತ್ಪನ್ನ ಮಾರುಕಟ್ಟೆ ಕಚೇರಿ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಪಕ್ಷದ ಪ್ರಮುಖರ ತೀರ್ಮಾನದಂತೆ ಸರ್ವಸದಸ್ಯರು ಒಮ್ಮತದಿಂದ ಬೆಂಬಲ ಸೂಚಿಸಿ ಇಬ್ಬರ ಆಯ್ಕೆಗೆ ಕಾರಣರಾಗಿದ್ದಾರೆ. ಚುನಾವಣೆಯ ನಿಯಮದಂತೆ ಬೆಳಿಗ್ಗೆ 10.30ಕ್ಕೆ ಸರ್ವಸದಸ್ಯರ ಹಾಜರಾತಿ 11.30ಕ್ಕೆ ನಾಮಪತ್ರ ಸಲ್ಲಿಕೆ 11.45ಕ್ಕೆ ನಾಮಪತ್ರ ಪರಿಶೀಲನೆ ನಡೆಯಿತು.
ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಆದೇಂಗಡ ವಿನು ಚಂಗಪ್ಪ ಹಾಗೂ ಚೀಯಕಪೂವಂಡÀ ಸುಬ್ರಮಣಿ ಹೊರತು ಪಡಿಸಿ ಇತರ ಸದಸ್ಯರು ನಾಮಪತ್ರ ಸಲ್ಲಿಸದೆ ಇರುವದರಿಂದ ಚುನಾವಣೆ ನಿಯಮದ ಅಡಿಯಲ್ಲಿ ಅಧ್ಯಕ್ಷರಾಗಿ ಆದೇಂಗಡ ವಿನು ಚಂಗಪ್ಪ ಮತ್ತು ಉಪಾಧ್ಯಕ್ಷರಾಗಿ ಚಿಯಕ್ ಪೂವಂಡ ಸುಬ್ರಮಣಿಅವರು ಆಯ್ಕೆಯಾಗಿರು ವದಾಗಿ ಚುನಾವಣಾಧಿಕಾರಿ ತಹಶೀಲ್ದಾರ್ ಗೋವಿಂದರಾಜು ಘೋಷಿಸಿದರು. ಹಿಂದಿನ ಸಾಲಿನಲ್ಲಿ ಮಾಚಿಮಂಡ ಸುವಿನ್ ಗಣಪತಿ ಅಧ್ಯಕ್ಷರಾಗಿ, ಕಳ್ಳಂಗಡ ಬಾಲಕೃಷ್ಣ ಉಪಾಧ್ಯಕ್ಷರಾಗಿದ್ದರು. ಪಕ್ಷದ ಹಿರಿಯರ ತೀರ್ಮಾನಕ್ಕೆ ಬದ್ಧರಾಗಿ ತಮ್ಮ ಸ್ಥಾನಕ್ಕೆ ಇವರು ರಾಜೀನಾಮೆ ನೀಡಿದ್ದರಿಂದ 2ನೇ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆಯಿತು.
2ನೇ ಅವಧಿಯ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿ 12 ಸದಸ್ಯರುಗಳಲ್ಲಿ ಕೆಲವರ ಹೆಸರುಗಳು ಕೇಳಿ ಬಂದಿದ್ದು, ಕೆಲವರು ಆಕಾಂಕ್ಷಿಗಳಾಗಿದ್ದರು. ಈ ಕಾರಣ ಪಕ್ಷದೊಳಗೆ ಗೊಂದಲ ಉಂಟಾಗಬಾರದು ಎಂದು ಬಿ.ಜೆ.ಪಿ. ತಾಲೂಕು ಮಂಡಲ ಅಧ್ಯಕ್ಷ ಕುಂಞಂಗಡ ಅರುಣ್ ಭೀಮಯ್ಯ ಅವರ ನೇತೃತ್ವದಲ್ಲಿ ಜಿಲ್ಲಾ ವರ್ತಕರ ಪ್ರಕೋಷ್ಟ ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ ಬಿ.ಜೆ.ಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಂತಿ ಸತೀಶ್, ಉಪಾಧ್ಯಕ್ಷ ಪಟ್ರಪಂಡ ರಘು ನಾಣಯ್ಯ, ಕಾಫಿ ಮಂಡಳಿ ನಿರ್ದೇಶಕ ಬೊಟ್ಟಂಗಡ ರಾಜು, ಜಿಲ್ಲಾ ಅಪೆಕ್ಸ್ ಬ್ಯಾಂಕ್ನ ನಿರ್ದೇಶಕ ಬಾಂಡ್ ಗಣಪತಿ, ಬಿ.ಜೆ.ಪಿ, ತಾಲೂಕು ಪ್ರಧಾನ ಕಾರ್ಯದರ್ಶಿ ಲಾಲ ಭೀಮಯ್ಯ, ಇ.ಸಿ.ಜೀವನ್, ತಾ.ಪಂ.ಉಪಾಧ್ಯಕ್ಷ ನೆಲ್ಲೀರ ಚಲನ್, ಜಿ.ಪಂ.ಸದಸ್ಯರುಗಳಾದ ಶಶಿ ಸುಬ್ರಮಣಿ, ಕುಂಬೇರ ಗಣೇಶ್ ಸೇರಿದಂತೆ ಪಕ್ಷದ ಇತರ ಪ್ರಮುಖರು ಚರ್ಚಿಸಿ ತೆಗೆದುಕೊಂಡ ತೀರ್ಮಾನದಂತೆ 2ನೇ ಅವಧಿಗೆ ಸೂಚಿಸಿದ ವ್ಯಕ್ತಿಗಳು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆಂದು ಕುಂಞಂಗಡ ಅರುಣ್ ಭೀಮಯ್ಯ ತಿಳಿಸಿದರು.
ಅವಿರೋಧವಾಗಿ ಆಯ್ಕೆಯಾದ ಅಧ್ಯಕ್ಷ ಆದೇಂಗಡ ವಿನು ಚಂಗಪ್ಪ ಮಾತನಾಡಿ ಪಾರದರ್ಶಕತೆಯಿಂದ ಕಾರ್ಯನಿರ್ವಹಿಸಿ ಯಾವುದೆ ಭಿನ್ನಾಭಿಪ್ರಾಯಗಳಿಗೆ ಅವಕಾಶ ನೀಡದೆ ಉತ್ತವi ಆಡಳಿತ ನಡೆಸಲು ಸರ್ವ ಸದಸ್ಯರÀ ಬೆಂಬಲದೊಂದಿಗ ಶ್ರಮಿಸಿ ಸರ್ಕಾರದಿಂದ ಹೆಚ್ಚಿನÀ ಅನುದಾನವನ್ನು ತಂದು ಅಭಿವೃದ್ಧಿ ಕಾರ್ಯಗಳಿಗೆ ಸ್ಪಂದಿಸುವದಾಗಿ ಭರವಸೆ ನೀಡಿದರು.
ಉಪಾಧ್ಯಕ್ಷ ಚಿಯಕ್ಪೂವಂಡ ಸುಬ್ರಮಣಿ ಮಾತನಾಡಿ ಪಕ್ಷದ ನಾಯಕರ ತೀರ್ಮಾನಕ್ಕೆ ಬದ್ಧರಾಗಿ ಉಪಾಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದೇನೆ. ಸ್ಥಾನಕ್ಕೆ ತಕ್ಕವಾಗಿ ಕಾರ್ಯನಿರ್ವಹಿಸಿ ಅಭಿವೃದ್ಧಿಗೆ ಸ್ಪಂದಿಸುವದಾಗಿ ಹೇಳಿದರು.
ಚುನಾವಣಾಧಿಕಾರಿ ತಹಶೀಲ್ದಾರ್ ಗೋವಿಂದರಾಜು, ಸಹಾಯಕ ಮಂಜುನಾಥ್ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಹೆಚ್.ಎಂ. ರಾಣಿ, ಸೇÉರಿದಂತೆ ಸದಸ್ಯರುಗಳಾದ ಗುಮ್ಮಟಿರ ಕಿಲನ್ ಗಣಪತಿ, ಹೆಚ್.ಎನ್. ಮೋಹನ್ ರಾಜ್, ನಾಮೇರ ಧರಣಿ, ಕೆ.ಪಿ. ಬಾಲಕೃಷ್ಣ, ಬೊಳ್ಳಜಿರ ಸುಶೀಲ, ಎಂ.ಡಿ. ಗಣಪತಿ, ಜೆ.ಕ. ಅಯ್ಯಪ್ಪ, ಕೆ.ಯು. ಭೀಮಣಿ, ಪೂಣಚ್ಚ. ಅಜ್ಜಿಕುಟ್ಟಿರ ಮುತ್ತಪ್ಪ, ಹಾಜರಿದ್ದರು.
-ವರದಿ ಎನ್.ಎನ್.ದಿನೇಶ್