ಮಡಿಕೇರಿ, ಅ. 9: ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿ ನಗರಸಭಾ ಆಡಳಿತದಿಂದ ಇಲ್ಲಿನ ನಾಗರಿಕರ ಯಾವದೇ ಬೇಕು ಬೇಡಿಕೆಗಳನ್ನು ಈಡೇರಿಸಲು ಸಾಧ್ಯವಾಗುತ್ತಿಲ್ಲವೆಂಬ ತೀವ್ರ ಅಸಮಾಧಾನ ಇಂದಿನ ಸಾಮಾನ್ಯ ಸಭೆಯಲ್ಲಿ ವ್ಯಕ್ತಗೊಂಡು, ನಗರಸಭೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಮೇಲೆ ಅಧ್ಯಕ್ಷರು ಹಿಡಿತ ಸಾಧಿಸಿ ಅಭಿವೃದ್ಧಿ ಕೆಲಸಗಳಿಗೆ ಒತ್ತು ನೀಡುವಂತೆ ಆಗ್ರಹ ಕೇಳಿ ಬಂತು. ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಾಮಾನ್ಯ ಸಭೆಯಲ್ಲಿ, ಆಡಳಿತಾರೂಢ ಸದಸ್ಯರ ಸಹಿತ ಬಹುತೇಕ ಸದಸ್ಯರು ತಮ್ಮ ಅಸಮಾಧಾನ ತೋಡಿಕೊಂಡರು.ಮಾಹಿತಿ ಅಲಭ್ಯ: ಪ್ರಸಕ್ತ ಪ್ರಾಕೃತಿಕ ವಿಕೋಪದಿಂದ ಸಂಭವಿಸಿರುವ ಹಾನಿ ಹಾಗೂ ಮನೆಗಳ ಕುಸಿತ ಸಹಿತ ಇನ್ನು ಕೂಡ ನಿಖರವಾಗಿ ನಷ್ಟದ ಅಂದಾಜು ಪಟ್ಟಿ ಸಾಧ್ಯವಾಗಿಲ್ಲವೆಂದು ಪೌರಾಯುಕ್ತರು ಸಹಿತ ಅಧಿಕಾರಿಗಳ ವಿರುದ್ಧ ಸದಸ್ಯರು ಟೀಕಾಪ್ರಹಾರ ಸೋಮಣ್ಣ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಾಮಾನ್ಯ ಸಭೆಯಲ್ಲಿ, ಆಡಳಿತಾರೂಢ ಸದಸ್ಯರ ಸಹಿತ ಬಹುತೇಕ ಸದಸ್ಯರು ತಮ್ಮ ಅಸಮಾಧಾನ ತೋಡಿಕೊಂಡರು.
ಮಾಹಿತಿ ಅಲಭ್ಯ: ಪ್ರಸಕ್ತ ಪ್ರಾಕೃತಿಕ ವಿಕೋಪದಿಂದ ಸಂಭವಿಸಿರುವ ಹಾನಿ ಹಾಗೂ ಮನೆಗಳ ಕುಸಿತ ಸಹಿತ ಇನ್ನು ಕೂಡ ನಿಖರವಾಗಿ ನಷ್ಟದ ಅಂದಾಜು ಪಟ್ಟಿ ಸಾಧ್ಯವಾಗಿಲ್ಲವೆಂದು ಪೌರಾಯುಕ್ತರು ಸಹಿತ ಅಧಿಕಾರಿಗಳ ವಿರುದ್ಧ ಸದಸ್ಯರು ಟೀಕಾಪ್ರಹಾರ ಹಳೆಯ ಬಸ್‍ನಿಲ್ದಾಣ ಕಟ್ಟಡ ಹಿಂಭಾಗ ಭೂಕುಸಿತದಿಂದ ರಸ್ತೆ ಸಂಪರ್ಕ ಕಡಿತಗೊಂಡು, ಹಳೆಯ ಕಟ್ಟಡ ಜನರ ಪ್ರಾಣಕ್ಕೆ ಕುತ್ತು ತರುವ ಸ್ಥಿತಿಯಲ್ಲಿದ್ದು, ಜಿಲ್ಲಾಧಿಕಾರಿಗಳೇ ಪತ್ರ ಬರೆದು ಗಮನ ಸೆಳೆದಿದ್ದರೂ, ಆ ಬಗ್ಗೆ ಏನೇನೂ ಕೆಲಸವಾಗಿಲ್ಲವೆಂದು ಕಾಮಗಾರಿ ಸ್ಥಾಯಿ
(ಮೊದಲ ಪುಟದಿಂದ) ಸಮಿತಿ ಅಧ್ಯಕ್ಷ ಪಿ.ಟಿ. ಉನ್ನಿಕೃಷ್ಣ, ಸದಸ್ಯರು ಗಳಾದ ಚುಮ್ಮಿ ದೇವಯ್ಯ, ಪಿ.ಡಿ. ಪೊನ್ನಪ್ಪ, ಪ್ರಕಾಶ್ ಆಚಾರ್ಯ, ಹೆಚ್.ಎಂ. ನಂದಕುಮಾರ್, ಕೆ.ಎಸ್. ರಮೇಶ್ ಮೊದಲಾದವರು ಹರಿಹಾಯ್ದರು. ಅಲ್ಲದೆ ಉಪಾಧ್ಯಕ್ಷ ಪ್ರಕಾಶ್ ಸಹಿತ ಸದಸ್ಯರು ದನಿಗೂಡಿಸಿ, ಶಿಥಿಲ ಕಟ್ಟಡ ತೆರವುಗೊಳಿಸಿ ಪ್ರಯಾಣಿ ಕರಿಗೆ ಸೂಕ್ತ ತಂಗುದಾಣದೊಂದಿಗೆ, ತಾತ್ಕಾಲಿಕ ಶೌಚಾಲಯ ಕಲ್ಪಿಸಲು ತುರ್ತು ಗಮನ ಹರಿಸುವಂತೆ ಒತ್ತಾಯಿಸಿದರು.
ರಸ್ತೆಗೆ ಆಗ್ರಹ : ಮಹದೇವಪೇಟೆ ಸೇರಿದಂತೆ ರಸ್ತೆಗಳ ಅಭಿವೃದ್ಧಿ, ಇಂಟರ್‍ಲಾಕ್ ಅಳವಡಿಕೆ ಸಹಿತ ಚರಂಡಿ ದುರಸ್ತಿಗೆ ಭೂಮಿಪೂಜೆ ಬಳಿಕ ಯಾವೊಂದೂ ಪ್ರಗತಿ ಆಗಿಲ್ಲವೆಂದು ಸದಸ್ಯರುಗಳಾದ ಅನಿತಾ ಪೂವಯ್ಯ, ತಜುಸ್ಸುಂ, ಅಮೀನ್ ಮೊಯ್ಸಿನ್, ಮನ್ಸೂರ್, ಉದಯ ಕುಮಾರ್ ಮೊದಲಾದವರು ಅಸಮಾಧಾನ ಹೊರಹಾಕಿದರಲ್ಲದೆ, ಕರಗ ಸಂಚಾರಕ್ಕೆ ತೊಂದರೆ ಉಂಟು ಮಾಡದಂತೆ ಅಧ್ಯಕ್ಷರು ಹಾಗೂ ಅಧಿಕಾರಿಗಳಲ್ಲಿ ಸಲಹೆಯಿತ್ತರು.
ಮಣ್ಣು ತೆಗೆಯಲು ವಿಳಂಬ: ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಪ್ರಾಕೃತಿಕ ವಿಕೋಪದಿಂದ ಭಾರೀ ಹಾನಿ ಸಂಭವಿಸಿರುವ ಸ್ಥಳಗಳ ದುರಸ್ತಿ ಹಾಗೂ ಶಾಸಕರುಗಳ ಪ್ರಯತ್ನದಿಂದ ರಸ್ತೆ ಸಂಪರ್ಕ ಸಾಧ್ಯವಾಗಿದ್ದು, ನಗರದಲ್ಲಿ ಮಾತ್ರ ಇನ್ನು ಅನೇಕ ಮನೆಗಳಿಗೆ ಬರೆ ಕುಸಿದು ತೊಂದರೆ ಯಲ್ಲಿದ್ದರೂ ಆ ಮಣ್ಣು ತೆಗೆಸಲು ಸಾಧ್ಯವಾಗಿಲ್ಲವೆಂದು ಸದಸ್ಯರು ಬೊಟ್ಟು ಮಾಡಿದರು. ಈ ಬಗ್ಗೆ ದಸರಾ ಮುನ್ನ ತುರ್ತು ಕೆಲಸ ಪೂರೈಸುವಂತೆ ಪಟ್ಟು ಹಿಡಿದರು.
ಪರಿಹಾರದಲ್ಲಿ ತಾರತಮ್ಯ : ನಗರದಲ್ಲಿ ಸಂಪೂರ್ಣ ಮನೆ ಕಳೆದುಕೊಂಡವರಿಗೆ ಕೆಲವೇ ಸಾವಿರ
ಕುಮಾರ್ ಮೊದಲಾದವರು ಅಸಮಾಧಾನ ಹೊರಹಾಕಿದರಲ್ಲದೆ, ಕರಗ ಸಂಚಾರಕ್ಕೆ ತೊಂದರೆ ಉಂಟು ಮಾಡದಂತೆ ಅಧ್ಯಕ್ಷರು ಹಾಗೂ ಅಧಿಕಾರಿಗಳಲ್ಲಿ ಸಲಹೆಯಿತ್ತರು.
ಮಣ್ಣು ತೆಗೆಯಲು ವಿಳಂಬ: ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಪ್ರಾಕೃತಿಕ ವಿಕೋಪದಿಂದ ಭಾರೀ ಹಾನಿ ಸಂಭವಿಸಿರುವ ಸ್ಥಳಗಳ ದುರಸ್ತಿ ಹಾಗೂ ಶಾಸಕರುಗಳ ಪ್ರಯತ್ನದಿಂದ ರಸ್ತೆ ಸಂಪರ್ಕ ಸಾಧ್ಯವಾಗಿದ್ದು, ನಗರದಲ್ಲಿ ಮಾತ್ರ ಇನ್ನು ಅನೇಕ ಮನೆಗಳಿಗೆ ಬರೆ ಕುಸಿದು ತೊಂದರೆ ಯಲ್ಲಿದ್ದರೂ ಆ ಮಣ್ಣು ತೆಗೆಸಲು ಸಾಧ್ಯವಾಗಿಲ್ಲವೆಂದು ಸದಸ್ಯರು ಬೊಟ್ಟು ಮಾಡಿದರು. ಈ ಬಗ್ಗೆ ದಸರಾ ಮುನ್ನ ತುರ್ತು ಕೆಲಸ ಪೂರೈಸುವಂತೆ ಪಟ್ಟು ಹಿಡಿದರು.
ಪರಿಹಾರದಲ್ಲಿ ತಾರತಮ್ಯ : ನಗರದಲ್ಲಿ ಸಂಪೂರ್ಣ ಮನೆ ಕಳೆದುಕೊಂಡವರಿಗೆ ಕೆಲವೇ ಸಾವಿರ ಮಳಿಗೆಗಳಿಗೆ ಬೀಗ ಜಡಿಯುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು. ಇಂತಹ ಸಂದರ್ಭ ನಗರಸಭೆಯ ಸದಸ್ಯರು ಮಧ್ಯಪ್ರವೇಶಿಸದೆ ಇರುವಂತೆಯೂ ಸಲಹೆ ಕೇಳಿ ಬಂತು.
ನಿಶಾನಿ ಬೆಟ್ಟದ ಸೂಕ್ತ ಪ್ರದೇಶಗಳಲ್ಲಿ ಗುಜರಿ ವ್ಯಾಪಾರಿಗಳಿಗೆ ನೆಲೆ ಕಲ್ಪಿಸಲು ಸಲಹೆ ಕೇಳಿ ಬಂತು. ಈ ಬಗ್ಗೆ ಪರಿಶೀಲಿಸಿ ಅಗತ್ಯ ನಿರ್ಧಾರ ಕೈಗೊಳ್ಳುವ ಇಂಗಿತ ಅಧ್ಯಕ್ಷರಿಂದ ವ್ಯಕ್ತವಾಯಿತು. ಚರ್ಚೆಯಲ್ಲಿ ಸದಸ್ಯರುಗಳಾದ ವೀಣಾಕ್ಷಿ, ಶ್ರೀಮತಿ ಬಂಗೇರ, ಲಕ್ಷ್ಮಿ, ಪೀಟರ್, ವೆಂಕಟೇಶ್ ಮೊದಲಾದವರು ಭಾಗಿಯಾಗಿದ್ದರು. ಪೌರಾಯುಕ್ತ ರಮೇಶ್, ಇಂಜಿನಿಯರ್ ವನಿತಾ, ವ್ಯವಸ್ಥಾಪಕ ತಾಹಿರ್, ಲೆಕ್ಕವಿಭಾಗದ ಸುಜಾತ, ಆರೋಗ್ಯಾಧಿಕಾರಿ ರಮೇಶ್ ಸಭೆಗೆ ಆಯಾ ವಿಷಯಗಳ ಮಾಹಿತಿ ನೀಡಿದರು.