ಸೋಮವಾರಪೇಟೆ, ಅ. 9: ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಮಲ್ಲಳ್ಳಿ ಜಲಪಾತದಲ್ಲಿ ಪ್ರವಾಸಿ ಯುವಕನೋರ್ವ ಕೊಚ್ಚಿಕೊಂಡು ಹೋಗಿರುವ ಘಟನೆ ಇಂದು ಸಂಜೆ ಸಂಭವಿಸಿದೆ. ನೆರೆಯ ಹಾಸನ ಜಿಲ್ಲೆ, ಸಕಲೇಶಪುರ ತಾಲೂಕಿನ ಅರೆಹಳ್ಳಿ ಗ್ರಾಮ ನಿವಾಸಿ ಜಾವಿದ್ ಎಂಬಾತನೇ ಜಲಪಾತದಲ್ಲಿ ಕಣ್ಮರೆಯಾಗಿರುವ ಯುವಕನಾಗಿದ್ದು, ಇವನೊಂದಿಗೆ ಜಲಪಾತಕ್ಕೆ ಇಳಿದಿದ್ದ ಸ್ನೇಹಿತ ಫಾಜಿಲ್ ಕಲ್ಲುಬಂಡೆಯ ಆಶ್ರಯ ಪಡೆದು ಪ್ರಾಣ ಉಳಿಸಿಕೊಂಡಿದ್ದಾನೆ. ಜಾವಿದ್, ಫಾಜಿಲ್ ಸೇರಿದಂತೆ ಇತರ ಐವರು ಸ್ನೇಹಿತರು ಇಂದು ಸಂಜೆಯ ವೇಳೆಗೆ ಜಲಪಾತ ವೀಕ್ಷಣೆಗೆ ತೆರಳಿದ್ದರು. ಇತರ ಮೂವರು ಸ್ನೇಹಿತರು ಸೋಮವಾರಪೇಟೆ, ಅ. 9: ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಮಲ್ಲಳ್ಳಿ ಜಲಪಾತದಲ್ಲಿ ಪ್ರವಾಸಿ ಯುವಕನೋರ್ವ ಕೊಚ್ಚಿಕೊಂಡು ಹೋಗಿರುವ ಘಟನೆ ಇಂದು ಸಂಜೆ ಸಂಭವಿಸಿದೆ. ನೆರೆಯ ಹಾಸನ ಜಿಲ್ಲೆ, ಸಕಲೇಶಪುರ ತಾಲೂಕಿನ ಅರೆಹಳ್ಳಿ ಗ್ರಾಮ ನಿವಾಸಿ ಜಾವಿದ್ ಎಂಬಾತನೇ ಜಲಪಾತದಲ್ಲಿ ಕಣ್ಮರೆಯಾಗಿರುವ ಯುವಕನಾಗಿದ್ದು, ಇವನೊಂದಿಗೆ ಜಲಪಾತಕ್ಕೆ ಇಳಿದಿದ್ದ ಸ್ನೇಹಿತ ಫಾಜಿಲ್ ಕಲ್ಲುಬಂಡೆಯ ಆಶ್ರಯ ಪಡೆದು ಪ್ರಾಣ ಉಳಿಸಿಕೊಂಡಿದ್ದಾನೆ. ಜಾವಿದ್, ಫಾಜಿಲ್ ಸೇರಿದಂತೆ ಇತರ ಐವರು ಸ್ನೇಹಿತರು ಇಂದು ಸಂಜೆಯ ವೇಳೆಗೆ ಜಲಪಾತ ವೀಕ್ಷಣೆಗೆ ತೆರಳಿದ್ದರು. ಇತರ ಮೂವರು ಸ್ನೇಹಿತರು (ಮೊದಲ ಪುಟದಿಂದ) ರಕ್ಷಣೆ ಕಾರ್ಯಕ್ಕೆ ತೊಡಕು: ಸಂಜೆಯ ವೇಳೆಗೆ ಪ್ರಾರಂಭವಾಗಿರುವ ಮಳೆ ಹಾಗೂ ಜಲಪಾತದಲ್ಲಿ ನೀರಿನ ಹರಿವು ಅಧಿಕವಾಗಿರುವದರಿಂದ ಫಾಜಿಲ್ ನನ್ನು ರಕ್ಷಿಸುವ ಕಾರ್ಯಕ್ಕೆ ತೊಡಕಾಗಿದೆ. ಸ್ಥಳೀಯರೊಂದಿಗೆ ಪೊಲೀಸರು ಸ್ಥಳಕ್ಕೆ ತೆರಳಿದ್ದು, ಹೈಡಲ್ ಪವರ್ ಪ್ರಾಜೆಕ್ಟ್ ನಿಂದ ನೀರು ಹರಿಸುವದನ್ನು ಸ್ಥಗಿತಗೊಳಿಸಿ ರಕ್ಷಣಾ ಕಾರ್ಯ ನಡೆಸಲಾಗಿದೆ. ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಯನ ಮನೋಹರ ಸೌಂದರ್ಯದೊಂದಿಗೆ ಅಪಾಯಕಾರಿಯೂ ಆಗಿರುವ ಮಲ್ಲಳ್ಳಿ ಜಲಪಾತದ ಬಳಿ ಇತ್ತೀಚಿನ ದಿನಗಳಲ್ಲಿ ಹಲವಷ್ಟು ಮುಂಜಾಗ್ರತಾ ಕ್ರಮ ಕೈಗೊಂಡು ಎಚ್ಚರಿಕೆಯ ಫಲಕಗಳನ್ನು ಅಳವಡಿಸಿದ್ದರೂ ಸಹ ಜಲಪಾತಕ್ಕೆ ಇಳಿದು ಸಾವನ್ನಪ್ಪುತ್ತಿರುವ ಘಟನೆಗಳು ನಡೆಯುತ್ತಲೇ ಇವೆ.