ಮಡಿಕೇರಿ, ಅ. 9: “ಬುಧವಾರ (ಇಂದು) ನನ್ನ ಮಗಳು ಮಂಜುಳಾಳ ಪ್ರತಿಕೃತಿಯನ್ನು ಹುಲ್ಲಿನಿಂದ ಮಾಡಿ, ಅವಳ ಅಂತ್ಯ ಸಂಸ್ಕಾರವನ್ನು ಊರಿನ ಮಡಿಕೇರಿ, ಅ. 9: “ಬುಧವಾರ (ಇಂದು) ನನ್ನ ಮಗಳು ಮಂಜುಳಾಳ ಪ್ರತಿಕೃತಿಯನ್ನು ಹುಲ್ಲಿನಿಂದ ಮಾಡಿ, ಅವಳ ಅಂತ್ಯ ಸಂಸ್ಕಾರವನ್ನು ಊರಿನ ಸೋಮಯ್ಯ. ಆಗಸ್ಟ್ 17 ರಂದು ಕೊಡಗಿ ನಲ್ಲಾದ ದುರಂತದಲ್ಲಿ, ಕುಡಿಯರ ಸೋಮಯ್ಯನವರ ಹುಟ್ಟುಹಬ್ಬವನ್ನು ಆಚರಿಸಲು ಮನೆಗೆ ಬಂದಿದ್ದಳು. ಅನಂತರ ನನ್ನ ತಂಗಿ ಗೌರಮ್ಮಳÀ ಮನೆಯಲ್ಲಿಯೇ ತಂಗಿದ್ದಳು. ಶಾಲೆಗೆ ಮಳೆಯ ಕಾರಣ ರಜೆ ಘೋಷಿಸಿದ್ದರೂ ರಸ್ತೆಗಳು ಮುಚ್ಚಿಹೋದ ಕಾರಣ ಅವಳು ನಮ್ಮ ಮನೆಗೆ ಬರಲಾಗಲಿಲ್ಲ,” ಎಂದು ತಂದೆ ಸೋಮಯ್ಯ ಜ್ಞಾಪಿಸಿಕೊಳ್ಳುತ್ತಾರೆ.ಹೀಗೆ ಆಗಸ್ಟ್ 17ರಂದು ಬೆಳಿÀಗ್ಗೆ ಸುಮಾರು 8 ಘಂಟೆಗೆ ಜೋಡುಪಾಲದ ಭೂಕುಸಿತದಲ್ಲಿ ಮಂಜುಳ, ಅವಳ ಅತ್ತೆ ಗೌರಮ್ಮ, ಮಾವ ಬಸಪ್ಪ ಹಾಗೂ ಅವಳ ಅತ್ತೆಯ ಮಗಳು ಮೋನಿಷಾ ಮಣ್ಣು ಪಾಲಾದರು. “ಬಸಪ್ಪನವರ ಮೃತದೇಹ ಅಂದೇ (ಆ. 17) ಪತ್ತೆಯಾಯಿತು. ಮೋನಿಷಾಳ ಮೃತದೇಹ ಆ. 18 ಕ್ಕೆ ಪತ್ತೆಯಾದರೆ ಗೌರಮ್ಮನವರ ಮೃತದೇಹ ಆ. 24 ಕ್ಕೆ ದೊರಕಿತು. ಆದರೆ ನಮ್ಮ ಶಾಲೆಯ ವಿದ್ಯಾರ್ಥಿನಿಯಾದ ಮಂಜುಳಾಳ ಮೃತದೇಹÀ ಇನ್ನೂ ದೊರಕಲಿಲ್ಲ,” ಎಂದು ಶಾಲೆಯ ಮುಖ್ಯೋಪಾಧ್ಯಾಯ ಗಣಪತಿ ದು:ಖದಿಂದ ನುಡಿದರು
“ಸುಮಾರು ಒಂದು ವಾರದ ಹಿಂದೆ ಜೋಡುಪಾಲದಲ್ಲಿ ರಸ್ತೆ ಕೆಲಸ ನಡೆಸುವ ಸಮಯದಲ್ಲಿ ಅಸ್ಥಿಗಳು ಹಾಗೂ ಬಟ್ಟೆಯ ತುಂಡು ದೊರೆತಿತ್ತು. ಆದರೆ ಅದು ಜಾನುವಾರುಗಳÀ ಅಸ್ಥಿಗಳೆಂದು ಪೊಲೀಸರು ತಿಳಿಸಿದರಾದರೂ, ಅದರ ದಾಖಲಾತಿ ನನಗೆ ದೊರೆತಿಲ್ಲ,” ಎಂದು ಸೋಮಯ್ಯ ತಿಳಿಸಿದರು. ಜಿಲ್ಲಾಧಿಕಾರಿಗಳಿಗೆ ಈ ಕುಟುಂಬ ತಮ್ಮ ಮಗಳ ಮೃತದೇಹವನ್ನು ಹುಡುಕಿಕೊಡುವಂತೆ ಅರ್ಜಿ ಸಲ್ಲಿಸಿರುವರು ಎಂದು ಗಣಪತಿ ತಿಳಿಸಿದರು. ಆದರೂ, ಎನ್.ಡಿ.ಆರ್.ಎಫ್., ಎಸ್.ಡಿ.ಆರ್.ಎಫ್. ಪೊಲೀಸ್, ಮಿಲಿಟರಿ, ಅರಣ್ಯ ಇಲಾಖೆಗಳ ಹಲವಾರು ದಿನಗಳ ಕಾರ್ಯಾಚÀರಣೆ ಗಳೆಲ್ಲ ಮಂಜುಳಾಳ ಮೃತದೇಹವನ್ನು ಪತ್ತೆಹಚ್ಚುವಲ್ಲಿ ಸಫಲರಾಗಲಿಲ್ಲ. ಇದೀಗ ಮಂಜುಳಾಳ ತಂದೆ ಸೋಮಯ್ಯ ಹಾಗೂ ತಾಯಿ ಜಯಂತಿ ತಮ್ಮ ಮಗಳ ಮೃತದೇಹವನ್ನು ಕಾಣುವ ಹಂಬಲವನ್ನು ಕೈಬಿಟ್ಟಿದ್ದಾರೆ. “ಅಕ್ಟೋಬರ್ 10 ನೇ ತಾರೀಕಿಗೆ (ಇಂದು) ಬೆ. 10 ಗಂಟೆಗೆ ಊರಿನವರ, ಮದೆ ಮಹೇಶ್ವರ ಶಾಲೆಯವರ ಸಮ್ಮುಖದಲ್ಲಿ ಶ್ರದ್ಧಾಂಜಲಿ ಸಭೆ ನಡೆಸಲು ನಾವು ನಿರ್ಧರಿಸಿದ್ದೇವೆ,” ಎಂದು ಸೋಮಯ್ಯ ದುಃಖಿತರಾಗಿ ತಮ್ಮ ಅಳಲನ್ನು “ಶಕ್ತಿ” ಯೊಂದಿಗೆ ಹಂಚಿಕೊಂಡರು.