ಮಡಿಕೇರಿ, ಅ. 5: ಎಲ್ಲ ವರ್ಗದ ಜನರನ್ನು ಒಗ್ಗೂಡಿಸುವ ಪರವಾಗಿದ್ದ ಮಹಾತ್ಮ ಗಾಂಧಿಯವರು ವಿಂಗಡಣೆಯ ವಿರೋಧಿಯಾಗಿದ್ದರು ಎಂದು ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅಭಿಪ್ರಾಯಪಟ್ಟರು.

ನಗರದ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಮಹಾತ್ಮಗಾಂಧಿ ಅವರ 150ನೇ ಜನ್ಮದಿನಾಚರಣೆ ಮತ್ತು ಲಾಲ್ ಬಹುದ್ದೂರ್ ಶಾಸ್ತ್ರಿಯವರ ಜನ್ಮ ದಿನಾಚರಣೆ ಮತ್ತು ಜನಸಂಪರ್ಕ ಅಭಿಯಾನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಇಂದಿನ ಯುವ ಪೀಳಿಗೆ ಮಹಾತ್ಮ ಗಾಂಧೀಜಿಯವರ ತತ್ವ ಆದರ್ಶಗಳನ್ನು ಎಷ್ಟರ ಮಟ್ಟಿಗೆ ಅಳವಡಿಸಿಕೊಂಡಿದ್ದಾರೆ ಎಂಬದರ ಬಗ್ಗೆ ಆತ್ಮಾವಲೋಕನ ಮಾಡಬೇಕಿದೆ ಎಂದರು.

ತಾವು ಮೂರನೇ ತರಗತಿಯಲ್ಲಿ ಓದುತ್ತಿದ್ದಾಗ ಗಾಂಧಿತಾತನಿಗೊಂದು ಪತ್ರ ಎಂಬ ಪದ್ಯವನ್ನು ಹಾಡಿ ಪ್ರಥಮ ಬಹುಮಾನ ಪಡೆದಿದ್ದನ್ನು ಸ್ಮರಿಸಿದರು.

ದಿವಂಗತ ಲಾಲ್ ಬಹುದ್ದೂರ್ ಶಾಸ್ತ್ರಿ ‘ಜೈ ಜವಾನ್ ಜೈ ಕಿಸಾನ್’ ಘೋಷಣೆಯ ಮುಖಾಂತರ ಜನರಲ್ಲಿ ದೇಶ ಪ್ರೇಮವನ್ನು ಜಾಗೃತಗೊಳಿಸಿದ ಮಹಾನ್ ನೇತಾರ ಎಂದು ಬಣ್ಣಿಸಿದರು.

ಜನ ಸಂಪರ್ಕ ಅಭಿಯಾನಕ್ಕೆ ಚಾಲನೆ ನೀಡಿ ಪ್ರಾಸ್ತಾವಿಕವಾಗಿ ಮಾತನಾಡಿದ ಪಕ್ಷದ ಜಿಲ್ಲಾಧ್ಯಕ್ಷ ಶಿವು ಮಾದಪ್ಪ, ಗಾಂಧೀಜಿ ಅವರ ಅಸಹಕಾರ ಚಳವಳಿ, ಉಪ್ಪಿನ ಸತ್ಯಾಗ್ರಹ, ಉಪವಾಸ ಸತ್ಯಾಗ್ರಹ, ಕ್ವಿಟ್ ಇಂಡಿಯಾದಂತಹ ಅಹಿಂಸಾ ಚಳುವಳಿಗಳಿಂದ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟರು ಎಂದು ಹೇಳಿದರು.

1934ರಲ್ಲಿ ಮಹಾತ್ಮ ಗಾಂಧಿಯವರು ಕೊಡಗಿನ ಪೊನ್ನಂಪೇಟೆ ರಾಮಕೃಷ್ಣಾಶ್ರಮದಲ್ಲಿ ತಂಗಿ ಮಾರನೆ ದಿನ ಗಾಂಧಿ ಗದ್ದೆ ಎಂದು ಹೆಸರು ಪಡೆದಿರುವ ಚೆಪ್ಪುಡಿರ ಕುಟುಂಬದ ಗದ್ದೆಯಲ್ಲಿ ಭಾಷಣಮಾಡಿ ಕೊಡಗಿನ ಜನರನ್ನು ಸ್ವಾತಂತ್ರ್ಯ ಸಮರಕ್ಕೆ ಪ್ರೇರೇಪಿಸಿದನ್ನು ವಿವರಿಸಿದರು.

ಕೆಪಿಸಿಸಿ ಸದಸ್ಯರಾದ ಟಿ.ಪಿ. ರಮೇಶ್ ಮಾತನಾಡಿ, ಮಹಾತ್ಮ ಗಾಂಧಿಯವರ ಬದುಕು, ವಿದ್ಯಾಭ್ಯಾಸ, ಹೋರಾಟ ಮತ್ತು ವ್ಯಕ್ತಿತ್ವದ ಬಗ್ಗೆ ಸುದೀರ್ಘವಾಗಿ ವಿವರಿಸಿದರು. ಲಾಲ್ ಬಹದ್ದೂರ್ ಶಾಸ್ತ್ರೀಯವರು “ದೇಶ ಸೇವೆ ಈಶ ಸೇವೆ” ಎಂದು ತಿಳಿದಿದ್ದ

ಅಸಹಕಾರ ಚಳವಳಿ, ಉಪ್ಪಿನ ಸತ್ಯಾಗ್ರಹ, ಉಪವಾಸ ಸತ್ಯಾಗ್ರಹ, ಕ್ವಿಟ್ ಇಂಡಿಯಾದಂತಹ ಅಹಿಂಸಾ ಚಳುವಳಿಗಳಿಂದ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟರು ಎಂದು ಹೇಳಿದರು.

1934ರಲ್ಲಿ ಮಹಾತ್ಮ ಗಾಂಧಿಯವರು ಕೊಡಗಿನ ಪೊನ್ನಂಪೇಟೆ ರಾಮಕೃಷ್ಣಾಶ್ರಮದಲ್ಲಿ ತಂಗಿ ಮಾರನೆ ದಿನ ಗಾಂಧಿ ಗದ್ದೆ ಎಂದು ಹೆಸರು ಪಡೆದಿರುವ ಚೆಪ್ಪುಡಿರ ಕುಟುಂಬದ ಗದ್ದೆಯಲ್ಲಿ ಭಾಷಣಮಾಡಿ ಕೊಡಗಿನ ಜನರನ್ನು ಸ್ವಾತಂತ್ರ್ಯ ಸಮರಕ್ಕೆ ಪ್ರೇರೇಪಿಸಿದನ್ನು ವಿವರಿಸಿದರು.

ಕೆಪಿಸಿಸಿ ಸದಸ್ಯರಾದ ಟಿ.ಪಿ. ರಮೇಶ್ ಮಾತನಾಡಿ, ಮಹಾತ್ಮ ಗಾಂಧಿಯವರ ಬದುಕು, ವಿದ್ಯಾಭ್ಯಾಸ, ಹೋರಾಟ ಮತ್ತು ವ್ಯಕ್ತಿತ್ವದ ಬಗ್ಗೆ ಸುದೀರ್ಘವಾಗಿ ವಿವರಿಸಿದರು. ಲಾಲ್ ಬಹದ್ದೂರ್ ಶಾಸ್ತ್ರೀಯವರು “ದೇಶ ಸೇವೆ ಈಶ ಸೇವೆ” ಎಂದು ತಿಳಿದಿದ್ದ ದೇಶಕ್ಕೆ ನೀಡಿದ ಕೊಡುಗೆಗಳು ಮತ್ತು 4ವರೆ ವರ್ಷದಲ್ಲಿ ಮೋದಿ ಸರ್ಕಾರದ ದುರಾಡಳಿತದ ಕರಪತ್ರವನ್ನು ಮನೆ ಮನೆಗೆ ತಲಪಿಸಿ ಜನರನ್ನು ಜಾಗೃತಿಗೊಳಿಸಲಾಗುವದು ಎಂದು ಕಾರ್ಯಕ್ರಮದ ವಿವರ ನೀಡಿದರು.

ವೇದಿಕೆಯಲ್ಲಿ ಹಿರಿಯ ನಾಯಕರಾದ ವಿ.ಪಿ. ಸುರೇಶ್, ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ತಾಲೂಕು ಪಂಚಾಯಿತಿ ಸದಸ್ಯರಾದ ಅಪ್ರುರವೀಂದ್ರ, ಕೆ.ಪಿ.ಸಿ.ಸಿ ಸದಸ್ಯರಾದ ಜೋಸೆಫ್ ಶ್ಯಾಂ, ಎಂ.ಎ. ಉಸ್ಮಾನ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಓಂಕಾರೇಶ್ವರ ದೇವಾಲಯ ಸಮಿತಿ ಅಧ್ಯಕ್ಷರಾದ ಪುಲಿಯಂಡ ಜಗದೀಶ್, ನಗರಸಭಾ ಸದಸ್ಯರಾದ ಪ್ರಕಾಶ್ ಆಚಾರ್ಯ, ತಜಸ್ಸುಂ, ಕೆ.ಎಂ. ವೆಂಕಟೇಶ್, ಯತೀಶ್ ಕುಮಾರ್ ಸೇರಿದಂತೆ ಕಾರ್ಯಕರ್ತರು ಭಾಗವಹಿಸಿದ್ದರು.