ಮಡಿಕೇರಿ: ಮದೆ ಮಹೇಶ್ವರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಪದವಿ ಪೂರ್ವ ಶಿಕ್ಷಣ ಇಲಾಖೆ ನಡೆಸಿದ ಮಡಿಕೇರಿ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಬಾಲಕರ ಹಾಗೂ ಬಾಲಕಿಯರ ತಂಡ ಬಾಲ್ ಬ್ಯಾಡ್‍ಮಿಂಟನ್‍ನಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದೆ. ಬಾಲಕಿಯರ ಥ್ರೋಬಾಲ್ ತಂಡ ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ. ಕಾಲೇಜಿನ ಅಧ್ಯಕ್ಷ ಹುದೇರಿ ರಾಜೇಂದ್ರ, ಪ್ರಾಂಶುಪಾಲೆ ತೆಕ್ಕಡೆ ಗುಲಾಬಿ ಜನಾರ್ಧನ್ ಉಪನ್ಯಾಸಕರು ಹಾಗೂ ಶಿಕ್ಷಕರು ಮಾರ್ಗದರ್ಶನ ನೀಡಿದ್ದರು.
ಕೂಡಿಗೆ: ಕೂಡಿಗೆಯ ಜ್ಞಾನೋದಯ ಆಂಗ್ಲಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ತಾಲೂಕು ಮಟ್ಟದ ಪತ್ರಿಭಾಕಾರಂಜಿ ಮತ್ತು ಕಲೋತ್ಸವ ಸ್ಪರ್ಧೆಯಲ್ಲಿ ವಿಜೇತರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ.
ಕೋಲಾಟ, ಭಾವಗೀತೆ, ಭರತನಾಟ್ಯ, ಸಂಗೀತ, ನೃತ್ಯ, ಮಣ್ಣಿನ ಮಾದರಿ ಸ್ಪರ್ಧೆಗಳಲ್ಲಿ ವಿಜೇತರಾಗಿ ಜಿಲ್ಲಾಮಟ್ಟದ ಸ್ಪರ್ಧೆಗೆ ಆಯ್ಕೆಗೊಂಡಿದ್ದಾರೆ.
ಶನಿವಾರಸಂತೆ: ಸಮೀಪದ ಕೊಡ್ಲಿಪೇಟೆಯ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗದ ವಿದ್ಯಾರ್ಥಿಗಳು ಸೋಮವಾರಪೇಟೆಯಲ್ಲಿ ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯ ನಾಟಕ, ಛಧ್ಮವೇಷ, ಧಾರ್ಮಿಕ ಪಠಣ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿಗಳಾದ ಗೋಕರ್ಣ ಮತ್ತು ತಂಡದವರು ನಾಟಕ ಸ್ಪರ್ಧೆಯಲ್ಲಿ, ಖ್ಯಾತಿ ವಿಶ್ವಾಸ್ ಛದ್ಮವೇಷ ಸ್ಪರ್ಧೆ ಹಾಗೂ ಮಹಮ್ಮದ್ ಸಿಯಾಬು ಅರೆಬಿಕ್ ಧಾರ್ಮಿಕ ಪಠಣದ ಸ್ಪರ್ಧೆಯಲ್ಲಿ ಆಯ್ಕೆಯಾಗಿ ಪ್ರಶಸ್ತಿ ಪv,À್ರ ಬಹುಮಾನ ಗಳಿಸಿರುತ್ತಾರೆ.
ಈಚೆಗೆ ಮರಗೋಡಿನಲ್ಲಿ ನಡೆದ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿನಿ ಫಾತಿಮತ್ ಸಿಯಾನ್ 800 ಮೀಟರ್ ಓಟದ ಸ್ಪರ್ಧೆಯಲ್ಲಿ ಹಾಗೂ ಕವನ ವಾಸು ಮೈಸೂರಿನಲ್ಲಿ ನಡೆದ ವಿಭಾಗ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ವಿದ್ಯಾರ್ಥಿಗಳಿಗೆ ಮುಖ್ಯಶಿಕ್ಷಕ ಎಂ.ಎಸ್. ಅಬ್ದುಲ್ ರಬ್, ಶಿಕ್ಷಕರಾದ ಎ.ಪಿ. ಸುನೀಲ್, ಕಿರಣ್ ಕುಮಾರ್, ಚಂದ್ರಶೇಖರ್, ಮಂಜುನಾಥ್, ಸುಮಾ, ಶಿವಕುಮಾರಿ, ಸತೀಶ್, ಪದಾಧಿಕಾರಿಗಳು ಮಾರ್ಗದರ್ಶನ ನೀಡಿದ್ದರು.
ಮಡಿಕೇರಿ: ಗೋಣಿಕೊಪ್ಪ ಲಯನ್ಸ್ ಕ್ಲಬ್ ವತಿಯಿಂದ ಆಯೋಜಿಸಿದ್ದ ಸ್ಟಿರಿಟ್ ಆಫ್ ಪ್ರೀಡಂ ರನ್ ಕಿರಿಯರ ವಿಭಾಗದಲ್ಲಿ ಸರ್ವದೈವತಾ ಆಂಗ್ಲ ಮಾಧ್ಯಮ ಶಾಲೆಯ 3ನೇ ತರಗತಿಯ ಪಿ.ಎಲ್ ರಂಜನ್ ಪೊನ್ನಣ್ಣ ಪ್ರಥಮ ಸ್ಥಾನ, 3ನೇ ತರಗತಿ ವಿದ್ಯಾರ್ಥಿ ದನುಷ್ ಸಿ.ಡಿ ತೃತೀಯ ಸ್ಥಾನ ಪಡೆದಿದ್ದಾರೆಂದು ಶಾಲಾ ಆಡಳಿತ ಮಂಡಳಿ ತಿಳಿಸಿದೆ.ಸೋಮವಾರಪೇಟೆ: ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ವೀರಾಜಪೇಟೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ವೀರಾಜಪೇಟೆ ಜೆ.ಪಿ.ಎನ್.ಎಂ. ಪ್ರೌಢಶಾಲೆಯಲ್ಲಿ ನಡೆದ ಪ್ರಾಥಮಿಕ, ಪ್ರೌಢಶಾಲಾ ವಿಭಾಗದ ಬಾಲಕ ಬಾಲಕಿಯರ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಮಾರ್ಷಿಯಲ್ ಆಟ್ರ್ಸ್ ಮತ್ತು ಯೋಗಸಂಸ್ಥೆಯ 8 ಮಂದಿ ವಿದ್ಯಾರ್ಥಿಗಳು ಗದಗದಲ್ಲಿ ನಡೆಯುವ ರಾಜ್ಯಮಟ್ಟದ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ.
ಇಲ್ಲಿನ ಓಎಲ್‍ವಿ ಶಾಲೆಯ ದರ್ಶನ್, ಪ್ರತೀಕ್ಷ, ಸಂತ ಜೋಸೆಫರ ಶಾಲೆಯ ತಶ್ವಿನ್, ಜ್ಞಾನವಿಕಾಸ ಶಾಲೆಯ ಸಿಂಚನ, ಶನಿವಾರಸಂತೆ ಪವಿತ್ರ ಹೃದಯ ಶಾಲೆಯ ನಿಸರ್ಗ, ಮುಕುಂದ, ಕೊಡ್ಲಿಪೇಟೆಯ ಎಸ್.ಎಲ್.ಎಸ್. ಶಾಲೆಯ ಲಾಸ್ಯ, ತೇಜಸ್ವಿನಿ ಆಯ್ಕೆಯಾಗಿದ್ದಾರೆ. ಇವರುಗಳಿಗೆ ಶಿವಾನಂದ್, ಗಣೇಶ್, ಪ್ರಸಾದ್, ಸಂಕೇತ್, ಪಳನಿ, ಮತ್ತು ಅರುಣ್ ಅವರುಗಳು
ಸೋಮವಾರಪೇಟೆ: ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ವೀರಾಜಪೇಟೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ವೀರಾಜಪೇಟೆ ಜೆ.ಪಿ.ಎನ್.ಎಂ. ಪ್ರೌಢಶಾಲೆಯಲ್ಲಿ ನಡೆದ ಪ್ರಾಥಮಿಕ, ಪ್ರೌಢಶಾಲಾ ವಿಭಾಗದ ಬಾಲಕ ಬಾಲಕಿಯರ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಮಾರ್ಷಿಯಲ್ ಆಟ್ರ್ಸ್ ಮತ್ತು ಯೋಗಸಂಸ್ಥೆಯ 8 ಮಂದಿ ವಿದ್ಯಾರ್ಥಿಗಳು ಗದಗದಲ್ಲಿ ನಡೆಯುವ ರಾಜ್ಯಮಟ್ಟದ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ.
ಇಲ್ಲಿನ ಓಎಲ್‍ವಿ ಶಾಲೆಯ ದರ್ಶನ್, ಪ್ರತೀಕ್ಷ, ಸಂತ ಜೋಸೆಫರ ಶಾಲೆಯ ತಶ್ವಿನ್, ಜ್ಞಾನವಿಕಾಸ ಶಾಲೆಯ ಸಿಂಚನ, ಶನಿವಾರಸಂತೆ ಪವಿತ್ರ ಹೃದಯ ಶಾಲೆಯ ನಿಸರ್ಗ, ಮುಕುಂದ, ಕೊಡ್ಲಿಪೇಟೆಯ ಎಸ್.ಎಲ್.ಎಸ್. ಶಾಲೆಯ ಲಾಸ್ಯ, ತೇಜಸ್ವಿನಿ ಆಯ್ಕೆಯಾಗಿದ್ದಾರೆ. ಇವರುಗಳಿಗೆ ಶಿವಾನಂದ್, ಗಣೇಶ್, ಪ್ರಸಾದ್, ಸಂಕೇತ್, ಪಳನಿ, ಮತ್ತು ಅರುಣ್ ಅವರುಗಳು ನಿಸರ್ಗ, ಮುಕುಂದರಾಜ್. ಕೊಡ್ಲಿಪೇಟೆ ಎಸ್‍ಎಲ್‍ಎನ್ ಶಾಲೆಯ ಲಾಸ್ಯ, ತೇಜಸ್ವಿನಿ. ಗೌಡಳ್ಳಿ ಆದಿ ಚುಂಚನಗಿರಿ ಶಾಲೆಯ ಪೂರ್ಣಪ್ರಕಾಶ್, ಹಂಸಿತ, ವರ್ಷಿಣಿ, ಸುಶ್ಮಿತ್, ರಕ್ಷಿತ್, ತ್ರಿಶಾ, ಅಭಿಷೇಕ್‍ಗೌಡ ಮತ್ತು ಚಂದ್ರು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ತರಬೇತುದಾರರಾಗಿ ಶಿವಾನಂದ್, ಗಣೇಶ್‍ಪ್ರಸಾದ್, ಸಂಕೇತ್, ಪಳನಿ ಮತ್ತು ಅರುಣ್ ಕಾರ್ಯನಿರ್ವಹಿಸಿದ್ದರು.
ಕುಶಾಲನಗರ: ಸೇವ್ ಲೈಫ್ ಫೌಂಡೇಶನ್‍ನ ಆಶ್ರಯದಲ್ಲಿ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ 7ನೇ ಹೊಸಕೋಟೆ ಗ್ರಾಮದಲ್ಲಿ ನಡೆಯಿತು. ಸ್ಥಳೀಯ ಶಾಲಾ ಮುಖ್ಯ ಶಿಕ್ಷಕಿ ಸಾವಿತ್ರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಕಾರ್ಯಕರ್ತರು ಮೆಟ್ನಳ್ಳ ಗ್ರಾಮದಿಂದ ಆರಂಭಿಸಿ ಹೊಸಕೋಟೆ ವ್ಯಾಪ್ತಿಯ ರಾಜ್ಯ ಹೆದ್ದಾರಿ ಎರಡೂ ಬದಿಯಲ್ಲಿ ಹರಡಿದ್ದ ಕಸ ತ್ಯಾಜ್ಯವನ್ನು ಸಂಗ್ರಹಿಸಿ ಸಮರ್ಪಕವಾಗಿ ವಿಲೇವಾರಿಗೊಳಿಸಲಾಯಿತು. ಸ್ವಚ್ಛತೆ ಕಾಪಾಡುವಂತೆ ಘೋಷಣೆ ಕೂಗಿ ಜಾಗೃತಿ ಮೂಡಿಸಲಾಯಿತು.
ಸುಂಟಿಕೊಪ್ಪ ವಿಎಸ್‍ಎಸ್‍ಎನ್ ಅಧ್ಯಕ್ಷ ಕ್ಲೇವ್ ಪೊನ್ನಪ್ಪ , ನೂರುಲ್ಲಾ ಮಸೀದಿ ಕಾರ್ಯದರ್ಶಿ ರಜಾಕ್, ಮೈಕ್ರೋ ಫೈನಾನ್ಸ್ ವ್ಯವಸ್ಥಾಪಕ ಕುಮಾರ್, ಹಿದಾಯತುಲ್ಲಾ, ಸ್ತ್ರೀಶಕ್ತಿ ಸಂಘಗಳ ಸದಸ್ಯರು, ಅಂಗನವಾಡಿ ಕಾರ್ಯಕರ್ತರು, ಸ್ಥಳೀಯ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಸೋಮವಾರಪೇಟೆ: ಅತಿವೃಷ್ಟಿಯಿಂದ ಸಂತ್ರಸ್ತರಾದ ಹಾಗೂ ಬಡ ವಿದ್ಯಾರ್ಥಿಗಳಿಗೆ ಇಲ್ಲಿನ ಓಎಲ್‍ವಿ ಶಾಲೆಯ ವ್ಯವಸ್ಥಾಪಕರಾದ ಸಿಸ್ಟರ್ ಮಮತ ಹಾಗೂ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಸೆರಿನ್ ಅವರುಗಳು ಮೇಲುಹೊದಿಕೆ, ಬಟ್ಟೆ, ಹಾಲಿನಪುಡಿ, ಹಣ್ಣು ಹಂಪಲು ಸೇರಿದಂತೆ ಇನ್ನಿತರ ಸಾಮಗ್ರಿಗಳ ಕಿಟ್ ವಿತರಿಸಿದರು. ಈ ಸಂದರ್ಭ ಶಾಲೆಯ ಹಿರಿಯ ಶಿಕ್ಷಕಿ ಜೂಲಿಯಾನ ಉಪಸ್ಥಿತರಿದ್ದರು.ಗೋಣಿಕೊಪ್ಪ ವರದಿ: ಜೆಸಿಐ ಪೊನ್ನಂಪೇಟೆ ನಿಸರ್ಗ ಸಂಸ್ಥೆ ವತಿಯಿಂದ ಗೋಣಿಕೊಪ್ಪ ಸರ್ಕಾರಿ ಪ್ರೌಢಶಾಲೆಗೆ ನೀರಿನ ಟ್ಯಾಂಕ್ ನೀಡಲಾಯಿತು. ಈ ಸಂದರ್ಭ ಜೆಸಿಐ ನಿಸರ್ಗ ಅಧ್ಯಕ್ಷ ವಿಕ್ರಂ ಮೂಡಗದ್ದೆ ಹಾಗೂ ಸದಸ್ಯರು ಹಾಜರಿದ್ದರು.
ಪೊನ್ನಂಪೇಟೆ: ಪೊನ್ನಂಪೇಟೆ ನ್ಯಾಯಾಲಯ, ವಕೀಲರ ಸಂಘ, ಪೊನ್ನಂಪೇಟೆ ಹಾಗೂ ಲೋಕೋಪಯೋಗಿ ಇಲಾಖೆ ವತಿಯಿಂದ ಇಲ್ಲಿನ ನ್ಯಾಯಾಲಯದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ರೂ. 6.50 ಲಕ್ಷದಲ್ಲಿ ನಿರ್ಮಿಸಲಾಗಿದ್ದು, ಇದರ ಉದ್ಘಾಟನೆಯನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ವಿ.ವಿ. ಮಲ್ಲಾಪುರ ಅವರು ನೆರವೇರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷರಾದ ಎಸ್.ಡಿ. ಕಾವೇರಪ್ಪ ವಹಿಸಿದ್ದರು. ಪೊನ್ನಂಪೇಟೆ ನ್ಯಾಯಾಧೀಶರಾದ ಮೋಹನ್‍ಗೌಡ ಎಂ.ಇ. ಅವರು ಅತಿಥಿಗಳಾಗಿ ಭಾಗವಹಿಸಿದರು. ವಕೀಲರ ಸಂಘದ ಅಧ್ಯಕ್ಷರು, ಶುದ್ಧ ಕುಡಿಯುವ ನೀರು ನ್ಯಾಯಾಲಯದಲ್ಲಿ ಬರುವ ಕಕ್ಷಿದಾರರಿಗೆ ಮತ್ತು ನ್ಯಾಯಾಲಯದಲ್ಲಿರುವ ಎಲ್ಲರಿಗೂ ಉಪಯೋಗವಾಗಲಿದೆ ಎಂದರು.
ವಕೀಲರಾದ ಎಂ.ಜಿ. ರಾಕೇಶ್ ಸ್ವಾಗತಿಸಿ, ಕೆ.ಬಿ. ಸಂಜೀವ ವಂದಿಸಿದರು. ವಕೀಲರ ಸಂಘದ ಎಲ್ಲಾ ವಕೀಲರು ನ್ಯಾಯಾಲಯದ ಸಿಬ್ಬಂದಿಗಳು ಹಾಜರಿದ್ದರು.
ನಾಪೆÉÇೀಕ್ಲು: ನೀರನ್ನು ಮಿತವಾಗಿ ಬಳಸುವದರ ಮೂಲಕ ಎಲ್ಲರಿಗೂ ನೀರು ದೊರೆಯುವಂತೆ ನೋಡಿಕೊಳ್ಳುವದು ಸಾರ್ವಜನಿಕರ ಕರ್ತವ್ಯವಾಗಿದೆ ಎಂದು ನಾಪೆÇೀಕ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎ.ಇಸ್ಮಾಯಿಲ್ ಸಲಹೆ ನೀಡಿದರು. ನಾಪೆÇೀಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಂದಿರಾ ನಗರದಲ್ಲಿ ನೂತನವಾಗಿ ನಿರ್ಮಿಸಿದ ಕುಡಿಯುವ ನೀರಿನ ಟ್ಯಾಂಕ್ ಉದ್ಘಾಟಿಸಿ ಅವರು ಮಾತನಾಡಿದರು. ಬೋರ್‍ವೆಲ್ ಹಾಗೂ ನೀರಿನ ಟ್ಯಾಂಕ್ ನಿರ್ಮಾಣಕ್ಕೆ 2.75 ಲಕ್ಷ ರೂ. ವೆಚ್ಚವಾಗಿದೆ. ಇದರಿಂದ ಈ ವ್ಯಾಪ್ತಿಯ ಜನರ ನೀರಿನ ಸಮಸ್ಯೆ ಪರಿಹಾರವಾಗಲಿದೆ. ಈ ನೀರನ್ನು ನಾಪೆÇೀಕ್ಲು ಸಮುದಾಯ ಆರೋಗ್ಯ ಕೇಂದ್ರದ ವಸತಿ ಗೃಹಗಳಲ್ಲಿ ವಾಸಿಸುವವರೂ ಪಡೆದುಕೊಳ್ಳಬಹುದು ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಮಹಮ್ಮದ್ ಖುರೇಶಿ, ಪಿ.ಎಂ. ರಷೀದ್, ಜೆ.ಡಿ.ಎಸ್. ನಗರಾಧ್ಯಾಕ್ಷ ಎಂ.ಎ. ಆಶೀಫ್, ಗುತ್ತಿಗೆದಾರ ಚುಕ್ಕಂಡ ಉಂಬಾಯಿ, ನಾಗರಿಕರಾದ ಲೂಯೀಸ್, ರಾಜೇಂದ್ರ, ಟಿ.ಕೆ. ಶಿವ, ಮಣಿರಾಜು, ಟಿ.ವಿ. ಶಶಿ, ಸುಬ್ರಮಣಿ, ಮತ್ತಿತರರು ಇದ್ದರು.
ನಾಪೆÇೀಕ್ಲು: ನಾಪೆÇೀಕ್ಲು ಬಸ್ ನಿಲ್ದಾಣದ ಪಂಚಾಯಿತಿ ಕಟ್ಟಡದ ಬಳಿ ಪ್ರಯಾಣಿಕರ ಅನುಕೂಲಕ್ಕಾಗಿ ನಾಪೆÇೀಕ್ಲು ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಸುಮಾರು ರೂ. 1.25 ಲಕ್ಷ ವೆಚ್ಚದಲ್ಲಿ ನೂತನವಾಗಿ ಬಸ್ ತಂಗುದಾಣವನ್ನು ನಿರ್ಮಿಸಲಾಗಿದೆ.
ನೂತನ ತಂಗುದಾಣದ ಕಾಮಗಾರಿಯನ್ನು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಚಾಳಿಯಂಡ ವಿಜು ಪೂಣಚ್ಚ, ಹಿಂದಿನ ಪದಾಧಿಕಾರಿಗಳಾದ ಕೇಟೋಳಿರ ಹರೀಶ್ ಪೂವಯ್ಯ, ಎನ್.ಎಸ್. ಉದಯಶಂಕರ್, ಅರೆಯಡ ಅಶೋಕ್ ವೀಕ್ಷಿಸಿದರು.
 
						