ಮಡಿಕೇರಿ: ರಾಷ್ಟ್ರಪಿತ ಮಹಾತ್ಮಾ ಗಾಂಧಿ ಜಯಂತಿ ಅಂಗವಾಗಿ ಜಿಲ್ಲೆಯ ವಿವಿಧೆಡೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸ್ವಚ್ಛತಾ ಕಾರ್ಯ ಕೂಡ ಹಮ್ಮಿಕೊಳ್ಳಲಾಗಿತ್ತು. ವಿವಿಧೆಡೆಗಳಲ್ಲಿನ ವರದಿಗಳನ್ನು ಇಲ್ಲಿ ನೀಡಲಾಗಿದೆ.

ಕುಶಾಲನಗರ: ಸ್ವಚ್ಛತಾ ಕಾರ್ಯಕ್ರಮಗಳು ನಿರಂತರವಾಗಿ ನಡೆದಲ್ಲಿ ಮಾತ್ರ ಸ್ವಚ್ಛ ಪರಿಸರ ನಿರ್ಮಾಣ ಸಾಧ್ಯ ಎಂದು ಬೈಲುಕೊಪ್ಪ ಪೊಲೀಸ್ ಠಾಣಾಧಿಕಾರಿ ಸಿ.ಯು. ಸವಿ ಅಭಿಪ್ರಾಯ ವ್ಯಕ್ತಪಡಿಸಿದರು.

ಕಾವೇರಿ ನದಿ ಸ್ವಚ್ಛತಾ ಆಂದೋಲನ, ಭಾರತಮಾತಾ ವಿದ್ಯಾಸಂಸ್ಥೆ, ಬೈಲುಕೊಪ್ಪ ಪೊಲೀಸ್ ಠಾಣೆ ಸಂಯುಕ್ತ ಆಶ್ರಯದಲ್ಲಿ ಸ್ಥಳೀಯ ಕೊಪ್ಪ ಗ್ರಾಮದಲ್ಲಿ ನಡೆದ ಸ್ವಚ್ಛತೆಯೇ ಸೇವೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಸ್ವಚ್ಛತೆ, ಸಮಾಜ ಸೇವೆ, ಗ್ರಾಮೀಣಾಭಿವೃದ್ಧಿ ಕಾರ್ಯಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕಿದೆ. ವಿದ್ಯಾರ್ಥಿ ಜೀವನದಲ್ಲಿ ಆತ್ಮಬಲ ತುಂಬುವ ರಾಷ್ಟ್ರೀಯ ಸೇವಾ ಯೋಜನೆಯಂತಹ ಸಮಾಜಮುಖಿ ಚುಟುವಟಿಕೆಗಳಲ್ಲಿ ತೊಡಗಿಸಿಕೊಂಡು ನಾಯಕತ್ವ ಗುಣಗಳನ್ನು ಬೆಳೆಸಿಕೊಂಡಲ್ಲಿ ಗುರಿಮುಟ್ಟಲು ಸಹಕಾರಿಯಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉಪನ್ಯಾಸ ನೀಡಿದ ಕರಾವಿಪ ಜಿಲ್ಲಾ ಘಟಕದ ಅಧ್ಯಕ್ಷರಾದ ಫಿಲಿಪ್‍ವಾಸ್, ಪಠ್ಯದೊಂದಿಗೆ ಸಂಘ-ಸಂಸ್ಥೆಗಳು ಕೈಗೊಳ್ಳುವ ಸಾಮಾಜಿಕ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಹೆಚ್ಚು ಪಾಲ್ಗೊಳ್ಳುವಂತೆ ಕರೆ ನೀಡಿದರು. ಆ ಮೂಲಕ ವಿದ್ಯಾರ್ಥಿಗಳು ತಮ್ಮ ಸಾಮಾಜಿಕ ಜವಾಬ್ದಾರಿ ಅರಿತುಕೊಳ್ಳಲು ಅವಕಾಶ ದೊರೆಯುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭಾರತ ಮಾತಾ ವಿದ್ಯಾಸಂಸ್ಥೆಯ ಉಪಪ್ರಾಂಶುಪಾಲರಾದ ಫಾ. ಜೋಸೆಫ್ ಮಾತನಾಡಿ, ಸ್ವಚ್ಛತಾ ಕಾರ್ಯದ ಸದುದ್ದೇಶಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು. ನಿವೃತ್ತ ಪ್ರಾಂಶುಪಾಲ ಹೆಚ್.ವಿ. ಶಿವಪ್ಪ ಮಾತನಾಡಿದರು.

ಮಹಾತ್ಮಾಗಾಂಧೀಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ನಮನ ಸಲ್ಲಿಸಲಾಯಿತು. ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಂಚಾಲಕ ಎಂ.ಎನ್. ಚಂದ್ರಮೋಹನ್ ಗಿಡಗಳನ್ನು ನೀಡುವ ಮೂಲಕ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದ ಅಂಗವಾಗಿ ಭಾರತಮಾತ ಶಾಲೆಯಿಂದ ಹೊರಟ ವಿದ್ಯಾರ್ಥಿಗಳು ಹೆದ್ದಾರಿ ಬದಿಗಳಲ್ಲಿ ಹರಡಿದ್ದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಂಗ್ರಹಿಸಿ ಸ್ವಚ್ಛತೆಯಲ್ಲಿ ತೊಡಗಿಸಿಕೊಂಡರು. ಘೋಷಣೆಗಳನ್ನು ಕೂಗಿ ಸಾರ್ವಜನಿಕರಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಿದರು.

ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಪ್ರಮುಖರಾದ ಕೆ.ಆರ್. ಶಿವಾನಂದನ್, ಡಿ.ಆರ್. ಸೋಮಶೇಖರ್, ಕೆ.ಎನ್. ದೇವರಾಜ್, ಕೃಷ್ಣ, ನಮ್ಮ ಕೊಡಗು ಸಮಿತಿ ಪ್ರಮುಖರಾದ ನೌಶಾದ್, ಲೋಹಿತ್, ಜಾನ್ಸನ್, ವಿದ್ಯಾಸಂಸ್ಥೆ ಶಿಕ್ಷಕ ಜ್ಞಾನೇಶ್, ಉಪನ್ಯಾಸಕ ವೃಂದ, ಎನ್‍ಎಸ್‍ಎಸ್ ಘಟಕದ ವಿದ್ಯಾರ್ಥಿಗಳು ಇದ್ದರು.

ವೀರಾಜಪೇಟೆ: ಗಾಂಧಿ ಜಯಂತಿಯ ಪ್ರಯುಕ್ತ ಇಲ್ಲಿನ ಮಗ್ಗುಲದಲ್ಲಿರುವ ಕೊಡಗು ದಂತ ವೈದ್ಯಕೀಯ ಮಹಾವಿದ್ಯಾಲಯದ ವತಿಯಿಂದ ಕಡಂಗದಿಂದ ಮಗ್ಗುಲದ ಕೊಡಗು ದಂತ ಕಾಲೇಜಿನವರೆಗೆ ಶುಚಿತ್ವದ ಜಾಗೃತಿ ಹಾಗೂ ಅರಿವು ಮೂಡಿಸುವ ಸೈಕಲ್ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು.

ವೀರಾಜಪೇಟೆ ಲಯನ್ಸ್ ಕ್ಲಬ್, ಮೂರ್ನಾಡು ಮಾರುತಿ ವಿದ್ಯಾಸಂಸ್ಥೆಯ ಸಹಯೋಗದೊಂದಿಗೆ ನಡೆದ ಕಡಂಗದ 17 ಕಿ.ಮೀ. ಅಂತರದಿಂದ ನಡೆದ ಸೈಕಲ್ ರ್ಯಾಲಿಯಲ್ಲಿ ಸುಮಾರು 100 ಮಂದಿ ಭಾಗವಹಿಸಿದ್ದರು. ಉಕ್ಕಿನ ಮನುಷ್ಯ ಎಂದು ಕರೆಯುವ ಹಾಂಗ್‍ಕಾಂಗ್‍ನ ಪೀಟರ್ ಬೋರ್‍ಬಾಲಿ ಹಾಗೂ ಆಂಡ್ರಸ್ ಹಿರ್ಲಿಂಗ್ ರ್ಯಾಲಿಯಲ್ಲಿ ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡಿದ್ದರು.

ಕಾಲೇಜಿನ ಆವರಣದಲ್ಲಿ ಸೇರಿದ್ದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅರುಣ್ ಚಿಣ್ಣಪ್ಪ ಅವರು ಶುಚಿತ್ವದ ಬಗ್ಗೆ ಪ್ರತಿಯೊಬ್ಬರಲ್ಲೂ ಅರಿವಿರಬೇಕು. ಶುಚಿತ್ವದ ಕಾಳಜಿ, ಆಸಕ್ತಿಯಿಂದ ನಮ್ಮ ಪ್ರದೇಶ ಮಾತ್ರವಲ್ಲ, ದೇಶವೇ ಶುಚಿತ್ವದಿಂದ ಕೂಡುವಂತೆ ಮಾಡಬೇಕು. ಉತ್ತಮ ಪರಿಸರ ವಾತಾವರಣ ಇಂದು ಪ್ರತಿಯೊಬ್ಬರಿಗೂ ಅಗತ್ಯ, ಆರೋಗ್ಯ ಕಾಪಾಡಲು ಇದು ಸಹಾಯಕಾರಿ ಎಂದರು.

ರ್ಯಾಲಿಯನ್ನು ಉದ್ದೇಶಿಸಿ ಪ್ರಶಾಂತ್, ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ.ಸಿ. ಪೊನ್ನಪ್ಪ ಇತರರು ಮಾತನಾಡಿದರು. ಲಯನ್ಸ್ ಸಂಸ್ಥೆಯ ಅಧ್ಯಕ್ಷ ತ್ರಿಶು ಗಣಪತಿ, ಇತರ ಪದಾಧಿಕಾರಿಗಳು, ಮಾರುತಿ ಸಂಸ್ಥೆಯ ವಿದ್ಯಾರ್ಥಿಗಳು, ದಂತ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು, ವೈದ್ಯರುಗಳು ಭಾಗವಹಿಸಿದ್ದರು.

ಮಹಾ ದಂತ ವೈದ್ಯಕೀಯ ಕಾಲೇಜಿನ ಡೀನ್ ಡಾ. ಸುನಿಲ್ ಮುದ್ದಯ್ಯ ಅವರು ಕಡಂಗದಲ್ಲಿ ಹಸಿರು ನಿಶಾನೆ ತೋರಿಸಿ ರ್ಯಾಲಿಗೆ ಚಾಲನೆ ನೀಡಿದರು. ದಂತ ವೈದ್ಯಕೀಯ ಕಾಲೇಜಿನ ರ್ಯಾಲಿಯು ಗೋಣಿಕೊಪ್ಪದ ಕಾವೇರಿ ಕಾಲೇಜಿನ ಎನ್.ಸಿ.ಸಿ. ಘಟಕದೊಂದಿಗೆ ಸೇರಿ ವೀರಾಜಪೇಟೆಯಿಂದ ಗೋಣಿಕೊಪ್ಪದವರೆಗಿನ ಆಯ್ದ ಸ್ಥಳವನ್ನು ಶುಚಿಗೊಳಿಸಲು ತೆರಳಿತು.

ಗೋಣಿಕೊಪ್ಪ ವರದಿ: ಗಾಂಧಿ ಜಯಂತಿ ಪ್ರಯುಕ್ತ ಗೋಣಿಕೊಪ್ಪ ಲಯನ್ಸ್ ಕ್ಲಬ್ ವತಿಯಿಂದ ಆಯೋಜಿಸಿದ್ದ ಸ್ಪಿರಿಟ್ ಆಫ್ ಫ್ರೀಡಂ ರನ್‍ನಲ್ಲಿ ಕಿರಿಯರು, ಹಿರಿಯರು ರಸ್ತೆಯಲ್ಲಿ ಓಡುವ ಮೂಲಕ ಸಂಭ್ರಮಿಸಿದರು.

ಪೊನ್ನಂಪೇಟೆಯಿಂದ ಗೋಣಿಕೊಪ್ಪವರೆಗೆ ನಡೆದ ಓಟದಲ್ಲಿ 200 ಕ್ಕೂ ಹೆಚ್ಚು ಕ್ರೀಡಾಪಟುಗಳು ಪಾಲ್ಗೊಂಡರು. 9 ವಿಭಾಗದಲ್ಲಿ ಸ್ಪರ್ಧೆ ನಡೆಯಿತು. ಅಂತರ್ರಾಷ್ಟ್ರೀಯ ಹಿರಿಯ ಓಟಗಾರ ಪೆಮ್ಮಂಡ ಅಪ್ಪಯ್ಯ ಕಿರಿಯರೊಂದಿಗೆ ಓಟದಲ್ಲಿ ಪಾಲ್ಗೊಳ್ಳುವ ಮೂಲಕ ಉತ್ಸಾಹ ಮೂಡಿಸಿದರು. ಸುಮಾರು 6 ಕಿ.ಮೀ. ಓಟ ಸ್ಪರ್ಧೆ ನಡೆಯಿತು.

ಕಾರ್ಯಕ್ರಮದಲ್ಲಿ ಗೋಣಿಕೊಪ್ಪ ಲಯನ್ಸ್ ಕ್ಲಬ್ ಅಧ್ಯಕ್ಷ ಸ್ಮರಣ್ ಶುಭಾಶ್, ಕಾರ್ಯದರ್ಶಿ ಪಾರುವಂಗಡ ಜೀವನ್, ಲಯನ್ಸ್ ರೀಜಿನಲ್ ಚೇರ್‍ಮನ್ ಪಾರುವಂಗಡ ಬೋಸ್ ಪೆಮ್ಮಯ್ಯ, ಜೋನ್ ಚೇರ್‍ಮನ್ ಡಾ. ಸೂರಜ್ ಉತ್ತಪ್ಪ, ಟ್ರಸ್ಟಿ ಚೆಪ್ಪುಡಿರ ಅಪ್ಪಣ್ಣ ಹಾಗೂ ಕೆನರಾ ಬ್ಯಾಂಕ್ ಗೋಣಿಕೊಪ್ಪ ಶಾಖೆ ಸಹಾಯಕ ವ್ಯವಸ್ಥಾಪಕ ತೀತಮಾಡ ಕರುಂಬಯ್ಯ ಬಹುಮಾನ ವಿತರಿಸಿದರು.

ಫಲಿತಾಂಶ: ಕಿರಿಯ ಬಾಲಕರಲ್ಲಿ ರಂಜನ್ ಪ್ರಥಮ, ವಿಶಾಲ್ ಉತ್ತಪ್ಪ ದ್ವಿತೀಯ, ಧನುಶ್ ತೃತೀಯ, ಬಾಲಕಿಯರಲ್ಲಿ ದಿಯಾ ಭೀಮಯ್ಯ ಪ್ರಥಮ, ನಯನಶ್ರೀ ದ್ವಿತೀಯ, ಗಂಗಮ್ಮ ತೃತೀಯ ಸ್ಥಾನ ಪಡೆದುಕೊಂಡರು. ಕಿರಿಯರು ಹೆಚ್ಚಾಗಿ ಪಾಲ್ಗೊಳ್ಳುವ ಮೂಲಕ ವಿಶೇಷತೆ ಮೂಡಿಸಿದರು.

ಹಿರಿಯ ಪ್ರಾಥಮಿಕ ವಿಭಾಗದ ಬಾಲಕರಲ್ಲಿ ಕೃತನ್ (ಪ್ರ), ಕರಣ್ ಅಯ್ಯಪ್ಪ (ದ್ವಿ), ಪೂಣಚ್ಚ (ತೃ), ಪ್ರೌಡಶಾಲಾ ಬಾಲಕರಲ್ಲಿ ಕೆ. ಕೆ. ಚೆಂಗಪ್ಪ (ಪ್ರ), ನಿಕ್ಷಿತ್ (ದ್ವಿ), ಧ್ಯಾನ್ ದೇವಯ್ಯ (ತೃ), ಬಾಲಕಿಯರಲ್ಲಿ ಅದಿರಾ (ಪ್ರ), ಸುರಕ್ಷಾ (ದ್ವಿ), ಕೀರ್ತನ್ (ತೃ), ಮುಕ್ತ ಪುರುಷರಲ್ಲಿ ಮುತ್ತಣ್ಣ (ಪ್ರ), ಪ್ರಸಾದ್ (ದ್ವಿ), ವೇಣುಗೋಪಾಲ್ (ತೃ), ಮಹಿಳೆಯರಲ್ಲಿ ಜಾಹ್ನವಿ (ಪ್ರ), ನಿಸರ್ಗ (ದ್ವಿ), ತುಷಾರಾ (ತೃ), ಹಿರಿಯರ ವಿಭಾಗದಲ್ಲಿ ಭೀಮಯ್ಯ (ಪ್ರ), ಪೆಮ್ಮಂಡ ಅಪ್ಪಯ್ಯ (ದ್ವಿ), ಹಿರಿಯ ಮಹಿಳೆಯರಲ್ಲಿ ಎಂ. ಆರ್. ಕುಸುಮಾ (ಪ್ರ), ಶ್ವೇತಾ (ದ್ವಿ), ರಶ್ಮಿ ಅಯ್ಯಪ್ಪ (ತೃ) ಸ್ಥಾನ ಪಡೆದುಕೊಂಡರು.

ಕುಶಾಲನಗರ: ಕುಶಾಲನಗರ ಪಟ್ಟಣ ಪಂಚಾಯಿತಿ ವತಿಯಿಂದ ಗಾಂಧಿ ಜಯಂತಿ ಅಂಗವಾಗಿ ಪಟ್ಟಣದ ಮುಖ್ಯರಸ್ತೆಗಳಲ್ಲಿ ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳಲಾಗಿತ್ತು. ಮುಖ್ಯಾಧಿಕಾರಿ ಸುಜಯ್‍ಕುಮಾರ್ ನೇತೃತ್ವದಲ್ಲಿ ಕುಶಾಲನಗರ ಕಾರು ನಿಲ್ದಾಣದಿಂದ ಬೈಚನಹಳ್ಳಿ ತನಕ ತೆರಳಿದ ಸಿಬ್ಬಂದಿಗಳು ಮತ್ತು ಪೌರಕಾರ್ಮಿಕರು ಹೆದ್ದಾರಿ ರಸ್ತೆಯ ಸ್ವಚ್ಛತಾ ಜಾಥಾ ನಡೆಸಿದರು. ಪ್ರತಿ ಮನೆಯಲ್ಲಿ ಶೌಚಾಲಯ ನಿರ್ಮಿಸುವದು, ಮನೆಯ ಸ್ವಚ್ಛತೆಯೊಂದಿಗೆ ಚರಂಡಿ, ರಸ್ತೆಯನ್ನು ಸ್ವಚ್ಛವಾಗಿರಿಸುವಂತೆ ಜನರಿಗೆ ಅರಿವು ಮೂಡಿಸಲಾಯಿತು. ಇದಕ್ಕೂ ಮುನ್ನ ಪಂಚಾಯ್ತಿ ಕಛೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಮಹಾತ್ಮಾಗಾಂಧೀಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಅರ್ಪಿಸಲಾಯಿತು.

ಈ ಸಂದರ್ಭ ಪಂಚಾಯಿತಿ ಆರೋಗ್ಯಾಧಿಕಾರಿ ಸತೀಶ್ ಕುಮಾರ್, ದಫೇದಾರ್ ಕುಮಾರ್ ಮತ್ತು ಸಿಬ್ಬಂದಿಗಳು, ಪೌರ ಕಾರ್ಮಿಕರು, ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಇದ್ದರು.ಕುಶಾಲನಗರ-ಬೈಲುಕೊಪ್ಪೆ: ಟಿಬೇಟಿಯನ್ ನಿರಾಶ್ರಿತರ ಶಿಬಿರದ ನಾಗರಿಕರು ಗಾಂಧಿ ಜಯಂತಿ ಅಂಗವಾಗಿ ಸ್ವಚ್ಛತಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಬೈಲುಕೊಪ್ಪೆಯ ಟಿಡಿಎಲ್ ಸೊಸೈಟಿಯ ನೇತೃತ್ವದಲ್ಲಿ ಕೊಪ್ಪ, ಬೈಲುಕೊಪ್ಪ ವ್ಯಾಪ್ತಿಯ ಮುಖ್ಯರಸ್ತೆ ಮತ್ತು ಶಿಬಿರದ ಸಾರ್ವಜನಿಕ ಪ್ರದೇಶಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡರು.

ಟಿಬೇಟಿಯನ್ ಶಿಬಿರದ ಶಾಲಾ ಮಕ್ಕಳು ಹಾಗೂ ನೂರಾರು ಸಂಖ್ಯೆಯಲ್ಲಿ ಟಿಬೇಟಿಯನ್ ನಾಗರಿಕರು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಗಾಂಧೀಜಿ ಅವರ 150ನೇ ಜಯಂತಿ ಅಂಗವಾಗಿ ಬೈಲುಕೊಪ್ಪ ಶಿಬಿರದ ಎಲ್ಲೆಡೆ ದಿನವಿಡೀ ಸ್ವಚ್ಛತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಟಿಡಿಎಲ್ ಕಾರ್ಯದರ್ಶಿ ನವಾಂಗ್ ತಿಳಿಸಿದರು.

ನಾಪೆÇೀಕ್ಲು: ರಕ್ತದಾನವು ಸಾಮಾಜಿಕ ಸೇವೆಯಲ್ಲಿ ಪ್ರಮುಖವಾದುದು. ರಕ್ತದಾನದಿಂದ ಒಂದು ಜೀವ ಉಳಿಸಿದ ತೃಪ್ತಿ ಲಭಿಸುತ್ತದೆ ಎಂದು ಜಿಲ್ಲಾ ಉಪ ಆರೋಗ್ಯಾಧಿಕಾರಿ ಡಾ. ದೇವದಾಸ್ ಹೇಳಿದರು.

ನಾಪೆÇೀಕ್ಲುವಿನ ಪಿ.ಪಿ. ಫೌಂಡೇಶನ್, ಆಟೋ ಚಾಲಕರ ಸಂಘ

ಕುಶಾಲನಗರ-ಬೈಲುಕೊಪ್ಪೆ: ಟಿಬೇಟಿಯನ್ ನಿರಾಶ್ರಿತರ ಶಿಬಿರದ ನಾಗರಿಕರು ಗಾಂಧಿ ಜಯಂತಿ ಅಂಗವಾಗಿ ಸ್ವಚ್ಛತಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಬೈಲುಕೊಪ್ಪೆಯ ಟಿಡಿಎಲ್ ಸೊಸೈಟಿಯ ನೇತೃತ್ವದಲ್ಲಿ ಕೊಪ್ಪ, ಬೈಲುಕೊಪ್ಪ ವ್ಯಾಪ್ತಿಯ ಮುಖ್ಯರಸ್ತೆ ಮತ್ತು ಶಿಬಿರದ ಸಾರ್ವಜನಿಕ ಪ್ರದೇಶಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡರು.

ಟಿಬೇಟಿಯನ್ ಶಿಬಿರದ ಶಾಲಾ ಮಕ್ಕಳು ಹಾಗೂ ನೂರಾರು ಸಂಖ್ಯೆಯಲ್ಲಿ ಟಿಬೇಟಿಯನ್ ನಾಗರಿಕರು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಗಾಂಧೀಜಿ ಅವರ 150ನೇ ಜಯಂತಿ ಅಂಗವಾಗಿ ಬೈಲುಕೊಪ್ಪ ಶಿಬಿರದ ಎಲ್ಲೆಡೆ ದಿನವಿಡೀ ಸ್ವಚ್ಛತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಟಿಡಿಎಲ್ ಕಾರ್ಯದರ್ಶಿ ನವಾಂಗ್ ತಿಳಿಸಿದರು.

ನಾಪೆÇೀಕ್ಲು: ರಕ್ತದಾನವು ಸಾಮಾಜಿಕ ಸೇವೆಯಲ್ಲಿ ಪ್ರಮುಖವಾದುದು. ರಕ್ತದಾನದಿಂದ ಒಂದು ಜೀವ ಉಳಿಸಿದ ತೃಪ್ತಿ ಲಭಿಸುತ್ತದೆ ಎಂದು ಜಿಲ್ಲಾ ಉಪ ಆರೋಗ್ಯಾಧಿಕಾರಿ ಡಾ. ದೇವದಾಸ್ ಹೇಳಿದರು.

ನಾಪೆÇೀಕ್ಲುವಿನ ಪಿ.ಪಿ. ಫೌಂಡೇಶನ್, ಆಟೋ ಚಾಲಕರ ಸಂಘ ನಡೆಯುತ್ತಿರುವದು ದೇಶದ ಮಹಾತ್ಮನಿಗೆ ನೀಡುವ ಗೌರವವಾಗಿದೆ. ಆರೋಗ್ಯವಂತರು ಸ್ವಯಂ ಪ್ರೇರಿತರಾಗಿ ರಕ್ತದಾನ ನೀಡುವ ಮೂಲಕ ತಮ್ಮ ಆರೋಗ್ಯ ಕಾಪಾಡಿಕೊಳ್ಳುವದರೊಂದಿಗೆ ಒಂದು ಜೀವವನ್ನು ಉಳಿಸಿದಂತಾಗುತ್ತದೆ ಎಂದರು. ರಕ್ತದ ಅಗತ್ಯವಿರುವಾಗ ಮಾತ್ರ ಅದರ ಮಹತ್ವ ತಿಳಿಯುತ್ತದೆ ಎಂದ ಅವರು ರಕ್ತದಾನದ ಮಹತ್ವವನ್ನು ಎಲ್ಲರೂ ಅರಿತರೆ ಮಾತ್ರ ರಕ್ತದ ಕೊರತೆ ನೀಗಿಸಲು ಸಾಧ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಿ.ಪಿ. ಫೌಂಡೇಶನ್ ಅಧ್ಯಕ್ಷ ಮೊಯಿದ್ದೀನ್ ಹಾಜಿ ವಹಿಸಿದ್ದರು. ವೇದಿಕೆಯಲ್ಲಿ ನಾಪೆÇೀಕ್ಲು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎನ್.ಎಸ್. ಉದಯಶಂಕರ್, ಹಿರಿಯರಾದ ಬೊಪ್ಪೇರ ಕಾವೇರಪ್ಪ, ಸಮುದಾಯ ಆರೋಗ್ಯ ಕೇಂದ್ರದ ವೈದ್ಯ ಡಾ. ಮದನ್ ಮೋಹನ್, ಪಿ.ಪಿ. ಫೌಂಡೇಶನ್ ಸದಸ್ಯರು ಇದ್ದರು.

ಈ ಸಂದರ್ಭ ನಾಪೆÇೀಕ್ಲು ಗ್ರಾಮ ಪಂಚಾಯಿತಿ ಸದಸ್ಯ ಮಹಮ್ಮದ್ ಖುರೇಶಿ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ರಕ್ತದಾನದಲ್ಲಿ ಪಾಲ್ಗೊಂಡರು.

*ಸುಂಟಿಕೊಪ್ಪ: ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗಾಂಧಿ ಜಯಂತಿ ಅಂಗವಾಗಿ ವೈದ್ಯರು ಹಾಗೂ ಸಿಬ್ಬಂದಿಗಳು ಆರೋಗ್ಯ ಕೇಂದ್ರದ ಸುತ್ತಮುತ್ತ ಬೆಳೆದಿದ್ದ ಕಾಡು ಗಿಡಗಳನ್ನು ಕಡಿದು ಆವರಣವನ್ನು ಸ್ವಚ್ಛಗೊಳಿಸಿದರು.

ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಪ್ರಾಣೇಶ್, ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ಬಿ.ಟಿ. ಚಂದ್ರಮ್ಮ, ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರಾದ ಎಂ.ಬಿ. ಪ್ರೇಮ, ಕೆ.ಬಿ. ಪ್ರಭಾವತಿ, ಜಿ.ಡಿ. ಜ್ಯೋತಿ, ಕೆ.ಎನ್. ಸೌಮ್ಯ, ಕೆ.ಸಿ. ಲತಾಕುಮಾರಿ, ತೆರೆಸಾ, ಬಿ.ಎಂ. ಯೋಗಿಣಿ, ಎಂ.ಎನ್. ಶೇಷಮ್ಮ, ಫ್ಯಾನ್ಸಿ ಬೂತರ್, ದಾದಿಯರಾದ ರೋಹಿಣಿ, ಲ್ಯಾಬ್ ಟೆಕ್ನಿಷಿಯನ್ ಎಂ.ಎಂ. ಸುಧಾ, ಡಿ ಗ್ರೂಪ್ ನೌಕರರಾದ ಸುಜಾತ, ಚಾಲಕರಾದ ಪ್ರಸನ್ನ, ರಾಜು, ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಹುದಿಕೇರಿ: ಹುದಿಕೇರಿ ಲಿಟಲ್ ಫ್ಲವರ್ ಶಾಲೆಯ ಮಕ್ಕಳು ಹಾಗೂ ಶಿಕ್ಷಕಿಯರು ಹುದಿಕೇರಿ ಮಹಾದೇವರ ದೇವಸ್ಥಾನದಲ್ಲಿ ಶ್ರಮದಾನ ಮೂಲಕ ಸ್ವಚ್ಛತಾ ಕಾರ್ಯ ಹಮ್ಮಿಕೊಂಡರು. ಸಂಸ್ಥೆಯ ಮಾಲೀಕರು ಆಶಾ ಜ್ಯೋತಿ ಸೇರಿದಂತೆ ಶಿಕ್ಷಕಿಯರು ಮಕ್ಕಳು ಬಾಗವಹಿಸಿದ್ದರು.

ಗೋಣಿಕೊಪ್ಪ ವರದಿ: ಕಾವೇರಿ ಪದವಿ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ ಘಟಕ, ಸೌತ್ ಕೂರ್ಗ್ ಫಾರ್ಮರ್ಸ್ ಅಸೋಸಿಯೇಷನ್, ವಾಹನ ಚಾಲಕರ ಮತ್ತು ಮಾಲೀಕರ ಸಂಘ ಮತ್ತು ಆಟೋ ಚಾಲಕರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಛತಾ ಹೈ ಸೇವಾ ಸ್ವಚ್ಛ ಗ್ರಾಮ-ಸ್ವಚ್ಛ ನಗರ ಕಾರ್ಯಕ್ರಮದಡಿ ಸ್ವಚ್ಛತೆ ಮಾಡಲಾಯಿತು.

ಕಾವೇರಿ ಕಾಲೇಜಿನ 130 ಎನ್‍ಎಸ್‍ಎಸ್ ಸ್ವಯಂ ಸೇವಕರು ಮೂರು ತಂಡಗಳನ್ನು ಮಾಡಿಕೊಂಡು ಗೋಣಿಕೊಪ್ಪಲಿನಿಂದ ಹಾತೂರುವರೆಗೆ ಒಂದು ತಂಡ ಹಾತೂರಿನಿಂದ ಬಿಟ್ಟಂಗಾಲದವರೆಗೆ ಒಂದು ತಂಡ ಹಾಗೂ ಬಿಟ್ಟಂಗಾಲದಿಂದ ವೀರಾಜಪೇಟೆಯವರೆಗೆ ಒಂದು ತಂಡ ಮಾಡಿಕೊಂಡು ಗೋಣಿಕೊಪ್ಪಲಿನಿಂದ ವೀರಾಜಪೇಟೆಯವರೆಗೆ ರಸ್ತೆಯ ಎರಡೂ ಬದಿಯಲ್ಲಿ ಬಿದ್ದಿರುವ ಪೇಪರ್, ಪ್ಲಾಸ್ಟಿಕ್ ಮತ್ತಿತರ ಕಸಗಳನ್ನು ಹೆಕ್ಕಿ ಸ್ವಚ್ಛಗೊಳಿಸಿದರು.

ಕಾಲೇಜಿನಲ್ಲಿ ಮಹಾತ್ಮ ಗಾಂಧೀಜಿಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ನಂತರ ಬಸ್ ನಿಲ್ದಾಣದಲ್ಲಿ ಸ್ವಚ್ಛತಾ ಕಾರ್ಯಕ್ರಮಕ್ಕೆ ಆಟೋ ಚಾಲಕರ ಸಂಘದ ಅಧ್ಯಕ್ಷ ಸಿ.ಕೆ. ಬೋಪಣ್ಣ ಚಾಲನೆ ನೀಡಿದರು.

ಕಾವೇರಿ ಕಾಲೇಜು ಪ್ರಾಂಶುಪಾಲ ಪ್ರೊ. ಎಸ್.ಆರ್. ಉಷಾಲತ ಮಾತನಾಡಿ, ಇಂದಿನ ಯುವ ಸಮೂಹ ಮಹಾತ್ಮಾ ಗಾಂಧೀಜಿಯವರ ತತ್ವ ಮತ್ತು ಆದರ್ಶಗಳನ್ನು ತಮ್ಮ ಜೀವನಕ್ಕೆ ಅಳವಡಿಸಿಕೊಂಡು, ಸ್ವಚ್ಛ ಭಾರತ ಅಭಿಯಾನದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು.

ಈ ಸಂದರ್ಭ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾದ ಎಂ.ಎನ್. ವನಿತ್‍ಕುಮಾರ್, ಎನ್.ಪಿ. ರೀತಾ, ಸೌತ್ ಕೂರ್ಗ್ ಫಾರ್ಮರ್ಸ್ ಅಸೋಸಿಯೇಷನ್ ಪದಾಧಿಕಾರಿಗಳಾದ ಪಂದ್ಯಂಡ ಹರೀಶ್, ಕುಲ್ಲಚಂಡ ಚಿಣ್ಣಪ್ಪ, ಆಟೋ ಚಾಲಕ ಸಂಘದ ಉಪಾಧ್ಯಕ್ಷ ಜಪ್ಪು ಅಯ್ಯಪ್ಪ, ಉಪನ್ಯಾಸಕಿ ಪವಿತ್ರ ಉಪಸ್ಥಿತರಿದ್ದರು.

ಗುಡ್ಡೆಹೊಸೂರು: ಇಲ್ಲಿಗೆ ಸಮೀಪದ ಬಸವನಹಳ್ಳಿಯ ಪ್ರೌಢಶಾಲಾ ಮಕ್ಕಳು ಮತ್ತು ಶಿಕ್ಷಕ ವೃಂದದವರು ಗಾಂಧಿ ಜಯಂತಿ ಅಂಗವಾಗಿ ಬಸವನಹಳ್ಳಿಯ ರಾಜ್ಯ ಹೆದ್ದಾರಿಯಿಂದ ಗುಡ್ಡೆಹೊಸೂರು ತನಕ ರಸ್ತೆಯ ಬದಿಯಲ್ಲಿದ್ದ ಪ್ಲಾಸ್ಟಿಕ್ ಮತ್ತು ಇತರ ವಸ್ತುಗಳನ್ನು ತೆಗೆದು ಸಂಪೂರ್ಣ ಸ್ವಚ್ಛಗೊಳಿಸಿದರು.

ಈ ಸಂದರ್ಭ ಗ್ರಾ.ಪಂ. ಅಧ್ಯಕ್ಷೆ ಕೆ.ಎಸ್. ಭಾರತಿ, ತಾಲೂಕು ಪಂಚಾಯಿತಿ ಸದಸ್ಯೆ ಪುಷ್ಪ, ಶಿಕ್ಷಕ ವೃಂದ ಮತ್ತು ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇಲ್ಲಿನ ಉದ್ಘಮ್ ಶಾಲಾ ಮಕ್ಕಳು ಮತ್ತು ಶಿಕ್ಷಕ ವೃಂದದವರು ಶಾಲಾ ಆವರಣದಿಂದ ನಿಸರ್ಗಧಾಮದ ತನಕ ಸ್ವಚ್ಛತೆ ನಡೆಸಿದರು.

ಚೆಟ್ಟಳ್ಳಿ: ಗಾಂಧಿ ಜಯಂತಿ ಅಂಗವಾಗಿ ಚೆಟ್ಟಳ್ಳಿ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಚೆಟ್ಟಳ್ಳಿ ಪಟ್ಟಣದಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಾಗೂ ಜಾಗೃತಿ ಜಾಥಾವನ್ನು ಏರ್ಪಡಿಸಲಾಗಿತ್ತು.

ಶಾಲೆಯಲ್ಲಿ ಗಾಂಧಿ ಜಯಂತಿಯನ್ನು ಆಚರಿಸಿ, ಗಣಿತÀ ಶಿಕ್ಷಕ ಸತ್ಯನಾರಾಯಣ ಅವರು ದಿನದ ವಿಷಯದ ಬಗ್ಗೆ ಮಾತನಾಡಿದರು. ಚೆಟ್ಟಳ್ಳಿ ಶಾಲೆಯಿಂದ ಪಟ್ಟಣದವರೆಗೆ ಸ್ವಚ್ಛತಾ ಘೋಷÀವಾಕ್ಯಗಳೊಂದಿಗೆ ಜಾಥಾ ತೆರಳಿದ ವಿದ್ಯಾರ್ಥಿಗಳು ಪಟ್ಟಣದ ಕಸವನ್ನು ಸ್ವಚ್ಛಗೊಳಿಸಿದರು. ವಿನಾಯಕ ಮನೋರಂಜನಾ ಸಂಘ, ಸ್ಪೋಟ್ರ್ಸ್ ಕ್ಲಬ್, ಅಂಗಡಿ ವರ್ತಕರು, ವಾಹನ, ಆಟೋ ಮಾಲೀಕರು ಹಾಗೂ ಚಾಲಕರು ಸಹಕರಿಸಿದರು.

ಶಾಲಾ ಸಂಚಾಲಕ ಮುಳ್ಳಂಡ ರತ್ತು ಚಂಗಪ್ಪ ಮಾತನಾಡಿ, ಗಾಂಧಿ ಜಯಂತಿಯ ಅಂಗವಾಗಿ ಪಟ್ಟಣವನ್ನು ಚೆಟ್ಟಳ್ಳಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಸ್ವಚ್ಛತಾ ಕಾರ್ಯಕ್ರಮ ಏರ್ಪಡಿಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು. ಎಲ್ಲರೂ ದೈಹಿಕ ಹಾಗೂ ಮಾನಸಿಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕೆಂದರು.

ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷ ಸೋಮಯಂಡ ದಿಲೀಪ್ ಅಪ್ಪಚ್ಚು, ಮುಖ್ಯೋಪಾಧ್ಯಾಯಿನಿ ಕೆ. ತಿಲಕ, ಶಿಕ್ಷಕ ವೃಂದ, ಪೊಲೀಸ್ ಸಿಬ್ಬಂದಿ ಪ್ರಕಾಶ್, ಸಿಬ್ಬಂದಿಗಳು ಸಾರ್ವಜನಿಕರು ಹಾಜರಿದ್ದರು.

ಪಾಲಿಬೆಟ್ಟ: ಪಾಲಿಬೆಟ್ಟ ಸರಕಾರಿ ಪದವಿಪೂರ್ವ ಕಾಲೇಜಿನ ಎನ್.ಎಸ್.ಎಸ್. ಘಟಕವು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮದಿನದ ಅಂಗವಾಗಿ ಪೊನ್ನಂಪೇಟೆಯ ರಾಮಕೃಷ್ಣ ಶಾರದಾಶ್ರಮದಲ್ಲಿ ವಿಶೇಷವಾದ ಶ್ರಮದಾನವನ್ನು ಹಮ್ಮಿಕೊಂಡು, ಆಶ್ರಮದ ಆವರಣ, ಆಸ್ಪತ್ರೆಯ ಆವರಣ, ಮುಖ್ಯ ರಸ್ತೆ ಬದಿಗಳನ್ನು ಸ್ವಚ್ಛಗೊಳಿಸಿ ತೆಂಗಿನ ಸಸಿಯನ್ನು ನೆಡಲಾಯಿತು.

ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೊಡಗು ಧ್ವನಿ ಪತ್ರಿಕೆಯ ವರದಿಗಾರ ಹಾಗೂ ಕಾವೇರಿ ವಿದ್ಯಾ ಸಂಸ್ಥೆಯ ಗ್ರಂಥಾಲಯ ಸಹಾಯಕ ಎಂ.ಎಂ. ಚೆನ್ನನಾಯಕ ಮಾತನಾಡಿ, ‘ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯ ಆದರ್ಶಗಳಾದ ಸರಳತೆ, ಸ್ವಾವಲಂಬನೆ, ಸತ್ಯ, ಅಹಿಂಸೆ ಹಾಗೂ ಧೈರ್ಯ ಆಧುನಿಕ ಯುವಜನತೆಗೆ ಅನುಕರಣೆಗೆ ಅರ್ಹವಾಗಿರುತ್ತದೆ. ಯುವ ಜನತೆ ನಿಸ್ವಾರ್ಥ ಸೇವೆಯನ್ನು ಮಾಡಬೇಕು. ಹಿರಿಯರಿಗೆ ಗೌರವವನ್ನು ನೀಡಬೇಕು ಹಾಗೂ ಓದುವ ಹವ್ಯಾಸವನ್ನು ಬೆಳಸಿಕೊಳ್ಳಬೇಕೆಂದು ಕರೆ ನೀಡಿದರು. ಸಮಾರಂಭದಲ್ಲಿ ಮೈಸೂರು ರಾಮಕೃಷ್ಣ ವಿದ್ಯಾಸಂಸ್ಥೆಯ ಪ್ರಾಚಾರ್ಯ ಡಾ. ಬಾಲಾಜಿ, ಪಾಲಿಬೆಟ್ಟ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ಡಾ. ಕೆ.ಎಂ. ಭವಾನಿ, ರಾಮಾಕೃಷ್ಣಾಶ್ರಮದ ನಿರ್ದೇಶಕರಾದ ಪರಹಿತಾನಂದ ಸ್ವಾಮೀಜಿ ಹಾಗೂ ಗೀತ ಸಂಗ್ರಾಹ ಸ್ವಾಮೀಜಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೋದಸ್ವರೂಪಾನಂದ ಸ್ವಾಮೀಜಿ ಮಾತನಾಡಿ, ಆದರ್ಶ ಗುಣಗಳನ್ನು ಖಾಸಗಿ ಹಾಗೂ ಸಾರ್ವಜನಿಕ ಬದುಕಿನಲ್ಲಿ ಅಳವಡಿಸಿಕೊಂಡ ನಾಯಕರುಗಳು ಮಹಾತ್ಮರಾದರು. ಇವರುಗಳ ಆದರ್ಶ ಆಧುನಿಕ ಜನರಿಗೆ ಮಾರ್ಗದರ್ಶನವನ್ನು ನೀಡುತ್ತದೆ ಎಂದರು. ಅಶ್ವಿತ ಮತ್ತು ತಂಡದವರು ಪ್ರಾರ್ಥಿಸಿದರು. ಯೋಜನಾಧಿಕಾರಿ ಪಿ.ಆರ್. ಶಿವದಾಸ್ ಸ್ವಾಗತಿಸಿದರು. ಉಪನ್ಯಾಸಕಿ ಎಂ.ಬಿ. ಪಾರ್ವತಿ ವಂದಿಸಿದರು.

ಶನಿವಾರಸಂತೆ: ಪಟ್ಟಣದ ರೋಟರಿ ಸಂಸ್ಥೆ ವತಿಯಿಂದ ಗಾಂಧಿ ಜಯಂತಿ ಅಂಗವಾಗಿ ಸ್ವಚ್ಛತಾ ಆಂದೋಲನ ಹಮ್ಮಿಕೊಂಡು ಪದಾಧಿಕಾರಿಗಳು ಜನರಲ್ ಕೆ.ಎಂ. ಕಾರ್ಯಪ್ಪ ಸ್ಮಾರಕ ಸಾರ್ವಜನಿಕ ಗ್ರಂಥಾಲಯ ಆವರಣವನ್ನು ಶ್ರಮದಾನದ ಮೂಲಕ ಸ್ವಚ್ಛಗೊಳಿಸಿದರು.

ಗ್ರಂಥಾಲಯ ಸುತ್ತಮುತ್ತ ಆವರಣದಲ್ಲಿ ಹುಲ್ಲು, ಮುಳ್ಳು ಗಿಡಗಂಟಿಗಳನ್ನು ಕಡಿದು ಸ್ವಚ್ಛಗೊಳಿಸಿದರು. ಕಾರ್ಯಪ�?