ಮಡಿಕೇರಿ, ಅ. 3: ಮಾಜಿ ಸೈನಿಕರ ಸಂಘ ಪುತ್ತೂರು ವತಿಯಿಂದ ತುಳಸಿದಾಸ್ ವಿಳಿಂಜ ನೇತೃತ್ವದಲ್ಲಿ ಅತಿವೃಷ್ಟಿ ಪೀಡಿತ ಮಾಜಿ ಸೈನಿಕರಿಗೆ ಆರ್ಥಿಕ ಸಹಾಯ ನೀಡಲಾಯಿತು. ಕರ್ನಲ್ ಅಯ್ಯಪ್ಪ ಮಾರ್ಗದರ್ಶನದಲ್ಲಿ ಮಡಿಕೇರಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕೊಡಗು ಮಾಜಿ ಸೈನಿಕರ ಸಂಘದ ಕಾರ್ಯದರ್ಶಿ ನಿವೃತ್ತ ಮೇಜರ್ ಓ.ಎಸ್. ಚಿಂಗಪ್ಪ ಭಾಗವಹಿಸಿದ್ದರು.