ಮಡಿಕೇರಿ, ಅ. 3: ಕರ್ನಾಟಕ ರಾಜ್ಯ ಬಲಿಜ ಸಂಘ, ಕೊಡಗು ಜಿಲ್ಲಾ ಬಲಿಜ ಸಮಾಜದ ಆಶ್ರಯದಲ್ಲಿ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ರೂ. 1.50 ಕೋಟಿ ಮೊತ್ತದಲ್ಲಿ ಬಲಿಜ ಜನಾಂಗದ ಶೈಕ್ಷಣಿಕ, ವೈದ್ಯಕೀಯ, ಆರ್ಥಿಕ ಹಾಗೂ ಉದ್ಯೋಗ ಸೃಷ್ಟಿಗೆ ನೆರವು ಕಲ್ಪಿಸುತ್ತಾ ಬಂದಿದ್ದು ಇನ್ನು ಮುಂದೆ ಕೊಡಗಿನಲ್ಲಿ ಆರ್ಥಿಕವಾಗಿ ಹಿಂದುಳಿದ ಬಲಿಜ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗ ಕೊಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವದು ಎಂದು ಸಂಘದ ಅಧ್ಯಕ್ಷ ಡಾ. ಟಿ. ವೇಣುಗೋಪಾಲ್ ಅಭಿಪ್ರಾಯ ವ್ಯಕ್ತಪಡಿಸಿದರು.

ಮೂರ್ನಾಡು ಮಹಿಳಾ ಮಂಡಳಿ ಆವರಣದಲ್ಲಿ ಇತ್ತೀಚೆಗೆ ಮಡಿಕೇರಿ ತಾಲೂಕು ಬಡ ಬಲಿಜ ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಿ ಅವರು ಮಾತನಾಡಿದರು.

ಇತ್ತೀಚೆಗಿನ ಜಲಪ್ರಳಯದಿಂದ ಸಂತ್ರಸ್ತವಾಗಿರುವ ಜಿಲ್ಲೆಯ ಬಡ ಮಧ್ಯಮ ಬಲಿಜ ಸಮುದಾಯಕ್ಕೆ ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಸಹಾಯಹಸ್ತ ನೀಡಲು ತಮ್ಮ ತಂಡ ಬಂದಿದ್ದು ಮುಂದೆ ಇಲ್ಲಿನ ಪದವೀಧರರು ಹಾಗೂ ಎಲ್ಲ ರೀತಿಯ ವ್ಯಾಸಂಗ ಮಾಡಿದವರಿಗೆ ತಮ್ಮದೇ ಸಂಸ್ಥೆಯಲ್ಲಿ ಅರ್ಹತೆಗೆ ಅನುಗುಣವಾಗಿ ಉದ್ಯೋಗ ನೀಡಲಾಗುವದು. ಇಲ್ಲಿನ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ತಮ್ಮ ‘ನ್ಯೂ ಬಾಲ್ಡ್‍ವಿನ್ ವಿದ್ಯಾಸಂಸ್ಥೆ’ ಯಲ್ಲಿ ಉಚಿತ ಊಟ, ವಸತಿಯೊಂದಿಗೆ ಉನ್ನತ ವ್ಯಾಸಂಗ ನೀಡುವದಾಗಿ ಭರವಸೆ ನೀಡಿದರು. ವರ್ಷಂಪ್ರತಿ ಕೆಲವು ಮಕ್ಕಳನ್ನು ದತ್ತು ತೆಗೆದುಕೊಳ್ಳುವದಾಗಿ ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ಬೆಂಗಳೂರು ಉತ್ತುಂಗ ಸೌಹಾರ್ದ ಪತ್ತಿನ ಸಹಕಾರ ಸಂಘದ ಸಿಇಓ ಎಸ್.ಎಲ್.ವಿ. ಮುನಿರಾಜು, ಚಿತ್ರ ನಿರ್ಮಾಪಕ, ನಟ ಮುತ್ತುರಾಜು ಮುಂತಾದವರು ಮಾತನಾಡಿದರು. ಕೊಡಗು ಬಲಿಜ ಸಮಾಜ ಅಧ್ಯಕ್ಷ ಟಿ.ಎಲ್. ಶ್ರೀನಿವಾಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಡಿಕೇರಿ ತಾಲೂಕು ಬಲಿಜ ಸಮಾಜ ಅಧ್ಯಕ್ಷೆ ಮೀನಾಕ್ಷಿ ಕೇಶವ್ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಸಮಾಜ ಉಪಾಧ್ಯಕ್ಷ ಟಿ.ವಿ. ಲೋಕೇಶ್, ಎಸ್.ಕೆ. ಯತಿರಾಜ್ ನಾಯ್ಡು, ಖಜಾಂಚಿ ಲೋಕನಾಥ್, ರಮೇಶ್, ನಾಪೆÇೀಕ್ಲು ಭವಾನಿ ಮುಂತಾದವರು ಉಪಸ್ಥಿತರಿದ್ದರು.

ಸೋಮವಾರಪೇಟೆ ತಾಲೂಕಿನಲ್ಲಿ ವಿತರಣೆ

ಸೋಮವಾರಪೇಟೆ ತಾಲೂಕಿನ ವಿವಿಧ ಗ್ರಾಮಗಳ ಅರ್ಹ ಫಲಾನುಭವಿಗಳಿಗೆ ಆಹಾರ ಕಿಟ್ ವಿತರಿಸಲಾಯಿತು.