ಮಡಿಕೇರಿ, ಅ. 3: ಶ್ರೀ ರಾಮಚಂದ್ರಾಪುರ ಮಠದ ಆಶ್ರಯದಲ್ಲಿ ಮಕ್ಕಂದೂರಿನಲ್ಲಿ ಪ್ರಕೃತಿ ವಿಕೋಪದಲ್ಲಿ ಸಂತ್ರಸ್ತ ಗೋವುಗಳಿಗೆ ಮೇವು ನೀಡಲಾಯಿತು.

ಕೊಡಗಿನ ಜಾನುವಾರುಗಳಿಗೆ ಇಲ್ಲಿಯವರೆಗೆ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ನಿರ್ದೇಶನದಂತೆ 3 ಬಾರಿ ವಿವಿಧ ಜಾಗಗಳಲ್ಲಿ ಮೇವು ಪೂರೈಕೆ ಮಾಡಲಾಗಿದ್ದು ಇನ್ನೂ ಮುಂದೆಯೂ ಮಠದ ವತಿಯಿಂದ ವಿವಿಧ ರೂಪದಲ್ಲಿ ಶಾಶ್ವತ ಕೆಲಸಗಳಿಗೆ ಸ್ಪಂದಿಸುವದಾಗಿ ಮಠದ ನಿರ್ದೇಶಕ ಡಾ. ವೈವಿ. ಕೃಷ್ಣಮೂರ್ತಿ ತಿಳಿಸಿದರು.

ಪಶು ವೈದ್ಯ ಇಲಾಖೆಯ ಅಧಿಕಾರಿ ಡಾ. ಚಿದಾನಂದ ಮಾತನಾಡಿ, ಮೊದಲ ದಿನದಿಂದ ಪಶು ಇಲಾಖೆ ಯಾವ ರೀತಿಯಲ್ಲಿ ಗೋ ಹಾಗೂ ಇತರ ಪಶುಗಳನ್ನು ರಕ್ಷಿಸಲು ಕಾರ್ಯಕ್ರಮ ರೂಪಿಸಿತು ಎಂಬ ಮಾಹಿತಿ ನೀಡಿ, ಕೂಡಿಗೆ ಗೋ ಕೇಂದ್ರ ಅತ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು. ಫಲಾನುಭವಿಗಳ ಗುರುತನ್ನು ನೀಡಿ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು.

ಮಠದ ಪರವಾಗಿ ಅಧ್ಯಕ್ಷ ನಾರಾಯಣ ಮೂರ್ತಿ, ನಿರ್ದೇಶಕ ಈಶ್ವರ ಭಟ್, ಪ್ರಮುಖರಾದ ಜಿ.ಎನ್. ರಾಮಚಂದ್ರ, ಎನ್. ಗೋಪಾಲ, ಮಹಿಳಾ ಕಾರ್ಯಕರ್ತರು ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭ ಸುಮಾರು 600 ಕೆ.ಜಿ.ಗಳಷ್ಟು ಮೇವು ವಿತರಿಸಲಾಯಿತು.