ಮಡಿಕೇರಿ, ಅ. 3: ಮೂರ್ನಾಡುವಿನ ತ್ರಿನೇತ್ರ ವಾಹನ ಮಾಲೀಕರ ಹಾಗೂ ಚಾಲಕರ ಸಂಘದ ವತಿಯಿಂದ 2018ನೇ ಸಾಲಿನ ಈ ವರ್ಷದ ಪ್ರಕೃತಿ ವಿಕೋಪ ಕಾರಣದಿಂದಾಗಿ ಸರಳ ರೀತಿಯಲ್ಲಿ ಸಾಂಪ್ರದಾಯಿಕ ಪೂಜೆಯೊಂದಿಗೆ ಆಚರಿಸಲು ನಿರ್ಧರಿಸಲಾಗಿದೆ.
ತಾ. 18 ರಂದು ಬೆಳಿಗ್ಗೆ 11.30 ಗಂಟೆಗೆ ಮೂರ್ನಾಡು ಅಯ್ಯಪ್ಪ ದೇವಸ್ಥಾನದ ಎದುರು ಪೂಜೆ ಹಾಗೂ ಮೆರವಣಿಗೆ ಏರ್ಪಡಿಸಲಾಗಿದೆ. ಸಂಘದ ಸದಸ್ಯರು ಹಾಜರಾಗಬೇಕಾಗಿ ಅಧ್ಯಕ್ಷ ಬಿ.ಪಿ. ಸುನಿಲ್ ತಿಳಿಸಿದ್ದಾರೆ.