ಮಡಿಕೇರಿ, ಅ. 3: ಸೋಮವಾರಪೇಟೆ, ವೀರಾಜಪೇಟೆ ಹಾಗೂ ಕುಶಾಲನಗರ ಪಟ್ಟಣ ಪಂಚಾಯಿತಿಗಳ ಚುನಾವಣೆಗೆ ಸಂಬಂಧಿಸಿದಂತೆ ಇಂದಿನಿಂದ ತಾ 31 ರವರೆಗೆ ನೀತಿಸಂಹಿತೆ ಜಾರಿಯಾಗಿದೆ. ತಾ. 16 ರಂದು ಜಿಲ್ಲಾಧಿಕಾರಿಗಳು ಪರಿಷ್ಕøತ ಚುನಾವಣಾ ಅಧಿಸೂಚನೆಯನ್ನು ಹೊರಡಿಸಲಿದ್ದು, ನಾಮಪತ್ರ ಸಲ್ಲಿಸಲು ಅಂದೇ ಕೊನೆಯ ದಿನಾಂಕವಾಗಿರುತ್ತದೆ.
ತಾ. 17 ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ನಾಮಪತ್ರ ಹಿಂತೆಗೆದುಕೊಳ್ಳಲು ತಾ. 20 ಕೊನೆಯ ದಿನಾಂಕ. ತಾ. 28 ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದ್ದು, ತಾ. 31 ರಂದು ತಾಲೂಕು ಕೇಂದ್ರಗಳಲ್ಲಿ ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ನಡೆಯಲಿದೆ ಎಂದು ರಾಜ್ಯ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿ ಎಸ್. ಉಮೇಶ್ ಆದೇಶ ಹೊರಡಿಸಿದ್ದಾರೆ.