ಮಡಿಕೇರಿ, ಅ. 3: ಕೊಡಗು ಗೌಡ ಸಮಾಜದ ಅಧ್ಯಕ್ಷ ಪೇರಿಯನ ಪಿ. ಜಯಾನಂದ ಅವರ ಅಧ್ಯಕ್ಷತೆಯಲ್ಲಿ ಮಹಾಸಭೆ ಇತ್ತೀಚೆಗೆ ನಡೆಯಿತು. ಕೋಡಿ ಲಾಸ್ಯ ಚಂದ್ರಶೇಖರ್ ಪ್ರಾರ್ಥನೆಯೊಂದಿಗೆ ಸಭೆಯನ್ನು ಪ್ರಾರಂಭಿಸಲಾಯಿತು. ಅಧ್ಯಕ್ಷ ಜಯಾನಂದ ಸ್ವಾಗತಿಸಿ, ಸಮಾಜದಲ್ಲಿ ಸದಸ್ಯರಾಗಿದ್ದು, ಮೃತಪಟ್ಟ ಸದಸ್ಯರಿಗೆ ಮತ್ತು ಇತ್ತೀಚೆಗೆ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ಮೃತಪಟ್ಟವರು, ಭಾರತದ ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಸಮಾಜದ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಿದರು.
ಹಿಂದಿನ ಮಹಾಸಭೆಯ ನಡಾವಳಿಕೆ ವಿವರ ಮತ್ತು ಆಡಳಿತ ಮಂಡಳಿ ವರದಿಯನ್ನು ಕಾರ್ಯದರ್ಶಿ ಕೋಡಿ ಚಂದ್ರಶೇಖರ್ ಸಭೆಯ ಮುಂದಿಟ್ಟರು.ಲೆಕ್ಕಪತ್ರಗಳ ವಿವರಗಳನ್ನು ಸಮಾಜದ ಖಜಾಂಚಿ ಕುಯ್ಯಮುಡಿ ಕೆ. ವಸಂತ ಮುಂದಿಟ್ಟರು. ಸಮಾಜದಲ್ಲಿ ನಡೆದಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಅಧ್ಯಕ್ಷರು ಸಭೆಗೆ ಮಾಹಿತಿ ನೀಡಿದರು. ಹಾಲಿ ಆಡಳಿತ ಮಂಡಳಿಯ ಅವಧಿಯು ಮುಕ್ತಾಯಗೊಂಡಿದ್ದು, ಮುಂದಿನ ಆಡಳಿತ ಮಂಡಳಿ ಆಯ್ಕೆ ಬಗ್ಗೆ ಸುದೀರ್ಘ ಚರ್ಚೆ ನಡೆದು ಹಾಲಿ ಆಡಳಿತ ಮಂಡಳಿಯೆ ಮುಂದುವರಿಯಲಿ ಎಂದು ಸರ್ವಾನುಮತದಿಂದ ತೀರ್ಮಾನ ಕೈಗೊಳ್ಳಲಾಯಿತು.
ಮುಂದಿನ ಮೂರು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಪೇರಿಯನ ಪಿ. ಜಯಾನಂದ, ಉಪಾಧ್ಯಕ್ಷರಾಗಿ ಸೂರ್ತಲೆ ಆರ್. ಸೋಮಣ್ಣ, ಕಾರ್ಯದರ್ಶಿಯಾಗಿ ಕೋಡಿ ಚಂದ್ರಶೇಖರ್, ಖಜಾಂಚಿಯಾಗಿ ಕುಯ್ಯಮುಡಿ ಕೆ. ವಸಂತ, ನಿರ್ದೇಶಕರು ಗಳಾಗಿ ಕೋಳುಮುಡಿಯನ ಆರ್. ಅನಂತ್ಕುಮಾರ್, ಕೂಡಕಂಡಿ ಕಾವೇರಮ್ಮ ಸೋಮಣ್ಣ, ಪೊನ್ನಚನ ಮಧುಸೂದನ್, ದಂಬೆಕೋಡಿ ಆನಂದ್, ಉಳುವಾರನ ಅಮೃತಸುರೇಶ್, ಪೈಕೇರ ಮನೋಹರ್ ಮಾದಪ್ಪ, ಕುಯ್ಯಮುಡಿ ಕೆ. ಪೂರ್ಣಯ್ಯ, ನೈಯಣಿ ಎ. ಗೋಪಾಲ, ಹುದೇರಿ ಬಿ. ರಾಜೇಂದ್ರ ಮತ್ತು ಕುಂಜಿಲನ ಡಿ. ರಾಮಯ್ಯ ಇವರುಗಳು ಆಯ್ಕೆಯಾಗಿದ್ದಾರೆ.