ಮಡಿಕೇರಿ, ಅ. 3: ಕೊಡಗು ಪತ್ರಿಕಾ ಭವನ ಟ್ರಸ್ಟ್ನ 17 ನೇ ವಾರ್ಷಿಕೋತ್ಸವದ ನಿಮಿತ್ತ ಕೊಡಗಿನ ಪತ್ರಕರ್ತರಿಗಾಗಿ ಸಿಂಗಲ್ಸ್ ಮತ್ತು ಡಬಲ್ಸ್ ಟೇಬಲ್ ಟೆನ್ನಿಸ್ ಪಂದ್ಯಾವಳಿಯನ್ನು ಏರ್ಪಡಿಸಲಾಗಿದೆ.
ಕೊಡಗಿನ ಪತ್ರಕರ್ತರು ಈ ಪಂದ್ಯಾಟದಲ್ಲಿ ಭಾಗವಹಿಸಬಹುದಾಗಿದೆ ಎಂದು ಕೊಡಗು ಪತ್ರಿಕಾ ಭವನ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಎಸ್.ಜಿ.ಉಮೇಶ್ ಕೋರಿಕೊಂಡಿದ್ದಾರೆ. ಆಸಕ್ತ ಪತ್ರಕರ್ತರು ತಮ್ಮ ಹೆಸರನ್ನು ತಾ. 10ರೊಳಗಡೆ ಕೊಡಗು ಪತ್ರಿಕಾ ಭವನಟಸ್ಟ್ನ ವ್ಯವಸ್ಥಾಪಕರಲ್ಲಿ ನೋಂದಾಯಿಸಬೇಕೆಂದು ಕೋರಲಾಗಿದೆ.