ಗೋಣಿಕೊಪ್ಪ, ಅ. 1 : ಕೊಡಗಿಗೆ ಕೇಂದ್ರ ರಸ್ತೆ ನಿದಿಯಿಂದ 34 ಕೋಟಿ ವೆಚ್ಚದಲ್ಲಿ 2 ರಾಷ್ಟ್ರೀಯ ಹೆದ್ದಾರಿಯ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದ್ದು ಅನುದಾನ ಬಿಡುಗಡೆ ಯಾಗಿದೆ ಗೋಣಿಕೊಪ್ಪ ನಗರದ ಪ್ರಮುಖ ರಸ್ತೆ ನಿರ್ಮಾಣಕ್ಕೆ ಮತ್ತು ಸೋಮವಾರಪೇಟೆ ಹಿಂಪ್ಲಿ ಗೇಟ್ ನಿಂದ ಆಲೂರು ಸಿದ್ದಾಪುರದ ವರೆಗೆ ಸುಮಾರು 9.5 ಕಿ.ಮಿ. ವರೆಗೆ ಕೇಂದ್ರ ರಸ್ತೆ ನಿಧಿಯಿಂದ 9 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಡಾಂಬರೀಕ ರಣದ ಕಾಮಗಾರಿ ನಡೆಯಲಿದೆ ಎಂದು ಕೊಡಗು ಮೈಸೂರು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಹೇಳಿದರು.ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆ ಸಭಾಂಗಣದಲ್ಲಿ ತಾಲೂಕು ಬಿ.ಜೆ.ಪಿ. ಅಧ್ಯಕ್ಷ ಕುಂಞಂಗಡ ಅರುಣ್ ಭೀಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಬಿ.ಜೆ.ಪಿ. ಕಾರ್ಯಕಾರಿ ಸಭೆಯಲ್ಲಿ ಮಾತನಾಡಿದರು. ರೂ. 34 ಕೋಟಿ ಅನುದಾನದಲ್ಲಿ ರಸ್ತೆ ಸೇತುವೆ ನಿರ್ಮಾಣ ಕಾಮಗಾರಿಗಳು ನಡೆಯಲಿವೆ. ಚೆನ್ನರಾಯಪಟ್ಟಣದಿಂದ ಸೋಮವಾರಪೇಟೆ, ಮಡಿಕೇರಿ ಮೂಲಕ ವೀರಾಜಪೇಟೆ ಮಾಕುಟ್ಟ ರಸ್ತೆಯನ್ನು ಹೆದ್ದಾರಿಯಗಿ ಘೋಷಣೆ ಮಾಡಲಾಗಿದ್ದು, ಭಾಗಮಂಡಲ ಮಡಿಕೇರಿ 53 ಕಿ.ಮಿ. ರಸ್ತೆ ರಾಷ್ಟ್ರೀಯ ಹೆದ್ದಾರಿಯಾಗಿ ಘೋಷಣೆ ಮಾಡಲಾಗಿದೆ ಎಂದರು.
ಜಿಲ್ಲೆಯಲ್ಲಿ ರೈಲು ಸಂಪರ್ಕವಿಲ್ಲ ಎಂಬ ಕೊರಗನ್ನು ನೀಗಿಸಲು 667 ಕೋಟಿ ರೂಪಾಯಿ ವೆಚ್ಚದಲ್ಲಿ ರೈಲು ಸಂಪರ್ಕ ಯೋಜನೆಗೆ ಅನುಮೋದನೆ ನೀಡಲಾಗಿದೆ; ಆದರೆ ಜಿಲ್ಲೆಗೆ ಮಾರಕ ಎಂದು ಹೇಳುವ ಜನ ವಿರೋದಿ ಯೋಜನೆಯಾದ ಕೇರಳದ ತಲಚೇರಿಯಿಂದ ದಕ್ಷಿಣ ಕೊಡಗಿನ ಮೂಲಕ ಮೈಸೂರಿಗೆ ಸಂಪರ್ಕ ಕಲ್ಪಿಸುವ ಕೇರಳದ ಲಾಭಿಗೆ ಅವಕಾಶ ನೀಡುವದಿಲ್ಲ ಎಂದು ಭರವಸೆ ನೀಡಿದರು.
ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಕೊಡಗಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದ ಬಗ್ಗೆ ಕೆಲವು ಪರಿಸರವಾದಿಗಳು ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಇದರ ಬಗ್ಗೆ ಜನರು ಎಚ್ಚರಿಕೆ ವಹಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಅತಿವೃಷ್ಟಿಯಿಂದ ಉಂಟಾದ ಕಾಫಿ ಹಾಗೂ ಕಾಳು ಮೆಣಸು ಬೆಳೆಯ ನಷ್ಟವನ್ನು ಅಂದಾಜು ಮಾಡಿ, ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸುವ ಪ್ರಯತ್ನ ನಡೆದಿದೆ.
(ಮೊದಲ ಪುಟದಿಂದ) ಸಾಲ ಮನ್ನಾದ ಬಗ್ಗೆ ಮುಖ್ಯಮಂತ್ರಿಗಳು ಸುತ್ತೋಲೆಯನ್ನು ಹೊರಡಿಸದೆ ಕೇವಲ ಬಾಯಿ ಮಾತಿನಲ್ಲಿ ಸಭೆ - ಸಮಾರಂಭಗಳಲ್ಲಿ ಸಾಲ ಮನ್ನಾ ಬಗ್ಗೆ ಪ್ರಸ್ತಾಪಿಸುತ್ತಾರೆ ಎಂದರು.
ಅತಿವೃಷ್ಟಿಯಿಂದ ಹಾನಿಗೀಡಾದ ಪ್ರದೇಶಗಳಲ್ಲಿ ಮನೆ ನಿರ್ಮಿಸಿಕೊಡಲು ವಿವಿಧ ಇಲಾಖೆಗಳ ಮೂಲಕ ಅನುದಾನ ನೀಡುವ ಭರವಸೆ ಕೊಟ್ಟ ಮುಖ್ಯಮಂತ್ರಿಗಳು ಅದನ್ನು ಅನುಷ್ಠಾನಕ್ಕೆ ತರಲು ವಿಳಂಭ ಮಾಡುತ್ತಿದ್ದಾರೆ, ಈ ಬಗ್ಗೆ ಗಮನ ಹರಿಸಿ ಅನುದಾನ ಬಿಡುಗಡೆ ಮಾಡಬೇಕೆಂದು ಒತಾಯಿಸಿದರು. ಸ್ಥಳೀಯ ಸಂಸ್ಥೆ ಮತ್ತು ಲೋಕಸಭಾ ಚುನಾವಣೆಗೆ ಕಾರ್ಯಕರ್ತರು ಇಂದಿನಿಂದಲೇ ಸಂಘಟಿತರಾಗಬೇಕು ಎಂದು ಕರೆ ನೀಡಿದರು. ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಮಾತನಾಡಿ, ಪ್ರಕೃತಿ ವಿಕೋಪದಿಂದ ಉಂಟಾದ ನಷ್ಟವನ್ನು ಪರಿಹರಿಸಿ ಹಿಂದಿನಂತೆ ಜೀವನ ನಡೆಸಲು ನಿರಾಶ್ರಿತರಿಗೆ ಬೆಂಬಲವಾಗಿ ನಿಲ್ಲಬೇಕು ಎಂದು ಹೇಳಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಜಿಲ್ಲಾ ಬಿ.ಜೆ.ಪಿ. ಅಧÀ್ಯಕ್ಷ ಭಾರತೀಶ್ ಪಕ್ಷವನ್ನು ಗಟ್ಟಿಗೊಳಿಸಲು ಕಾರ್ಯಕರ್ತರು ಕೈಜೋಡಿಸಬೇಕು ಎಂದು ಹೇಳಿದರು. ಜಿಲ್ಲಾ ಬಿ.ಜೆ.ಪಿ. ಉಪಾಧ್ಯಕ್ಷ ಪಟ್ರಪಂಡ ರಘು ನಾಣಯ್ಯ, ಕಾಂತಿಸತೀಶ್, ಸುವೀನ್ ಗಣಪತಿ, ತಾಲೂಕು ಮಹಿಳಾ ಮೊರ್ಚಾ ಅಧ್ಯಕ್ಷೆ ಚೇಂದಂಡ ಸುಮಿ ಸುಬ್ಬಯ್ಯ, ತಾಲೂಕು ಬಿಜೆ.ಪಿ. ಪ್ರಧಾನ ಕಾರ್ಯದರ್ಶಿ ಲಾಲಾ ಭೀಮಯ್ಯ, ಜಿಲ್ಲಾ ವರ್ತಕ ಪ್ರಕೋಷ್ಟ ಅಧ್ಯಕ್ಷ ಕಾಡ್ಯಾಮಾಡ ಗಿರೀಶ್ ಗಣಪತಿ, ಜಿ.ಪಂ. ಸದಸ್ಯರುಗಳಾದ ಸಿ.ಕೆ. ಬೋಪಣ್ಣ, ಅಪ್ಪಂಡೇರಂಡ ಭವ್ಯ, ಮೂಕಂಡ ಶಶಿ ಸುಬ್ರಮಣಿ, ಅಚ್ಚಪ್ಪಂಡ ಮಹೇಶ್, ತಾ.ಪಂ., ಅದ್ಯಕ್ಷೆ ಬೊಳ್ಳಚಂಡ ಸ್ಮಿತಾ ಪ್ರಕಾಶ್, ಉಪಾಧÀ್ಯಕ್ಷ ನೆಲ್ಲಿರ ಚಲನ್, ತಾಲೂಕು ಬಿ.ಜೆ.ಪಿ. ಖಜಾಂಚಿ ಶ್ಯಾಮ್ ಪೂಣಚ್ಚ ಜಿಲ್ಲಾ ಯುವಮೊರ್ಚ ಅಧ್ಯಕ್ಷ ಗಪ್ಪು, ತಾಲೂಕು ಬಿ.ಜೆ.ಪಿ. ಮಹಿಳಾ ಉಪಾಧ್ಯಕ್ಷೆ ರಾಣಿನಾರಾಯಣ ಸೇರಿದಂತೆ ಆರ್.ಎಂ.ಸಿ ಸದ್ಯಸರು, ಸ್ಥಾನೀಯ ಸಮಿತಿ ಅಧÀ್ಯಕ್ಷರು, ಉಪಾಧ್ಯಕ್ಷರು ಕಾರ್ಯದರ್ಶಿ ಸದಸ್ಯರುಗಳು, ಕಾರ್ಯಕರ್ತರು ಹಾಜರಿದ್ದರು.
-ಚಿತ್ರ ವರದಿ : ಎನ್.ಎನ್. ದಿನೇಶ್