ಮಡಿಕೇರಿ, ಸೆ. 29: ಕೊಡಗು ಜಿಲ್ಲೆಯಲ್ಲಿ ತೀವ್ರ ಮಳೆಯೊಂದಿಗೆ ಅಲ್ಲಲ್ಲಿ ಭೂಕುಸಿತದಿಂದ ರಸ್ತೆ ಸಂಪರ್ಕಗಳು ಕಡಿತಗೊಂಡು ಸಾರಿಗೆ ವ್ಯವಸ್ಥೆಯ ತೊಡಕುಗಳ ನಡುವೆಯೂ ಮದ್ಯ ಮಾರಾಟ ಅಥವಾ ಮದ್ಯಪಾನ ಮಾಡುವವರಿಗೆ ಅಷ್ಟೇನು ತೊಂದರೆ ಎದುರಾಗಿರುವಂತೆ ಕಾಣಬರುತ್ತಿಲ್ಲ. ಬದಲಾಗಿ ಹಿಂದಿನ ಸಾಲಿಗಿಂತಲೂ ಮದ್ಯ ಮಾರಾಟದಲ್ಲಿ ಶೇಕಡವಾರು ಅತ್ಯಲ್ಪ ಹಿನ್ನಡೆ ಕಂಡುಬಂದಿದೆ.ಕೊಡಗು ಜಿಲ್ಲಾ ಅಬ್ಕಾರಿ ಇಲಾಖೆಯ ಮೂಲಗಳ ಪ್ರಕಾರ ಕಳೆದ ಏಪ್ರಿಲ್-ಮೇ ತಿಂಗಳಿನಲ್ಲಿ ಎದುರಾಗಿದ್ದ ಕರ್ನಾಟಕ ವಿಧಾನಸಭಾ ಚುನಾವಣೆಯ ನೀತಿ ಸಂಹಿತೆ ಯಿಂದಾಗಿ ಮದ್ಯ ಮಾರಾಟದ ಮೇಲಿನ ನಿರ್ಬಂಧದಿಂದಾಗಿ ಒಂದಿಷ್ಟು ಹಿನ್ನಡೆ ಇಲಾಖೆಗೆ ಉಂಟಾಗಿತ್ತು. ಕಲ್ಯಾಣ ಮಂಟಪಗಳಲ್ಲಿ ಸಾಮೂಹಿಕ ಮದ್ಯ ಸರಬರಾಜು ಮೇಲಿನ ವ್ಯತ್ಯಯವೂ ಇದಕ್ಕೆ ಕಾರಣವಿತ್ತು.

ಆ ಬೆನ್ನಲ್ಲೇ ಎದುರಾದ ಮುಂಗಾರು ಮಳೆಯಿಂದಾಗಿ ಕೊಡಗು-ಕೇರಳ ಅಂತರ್ರಾಜ್ಯ ಗಡಿ ಸಂಪರ್ಕ ಕಡಿತಗೊಂಡಿದ್ದಲ್ಲದೆ, ನೆರೆಯ ಜಿಲ್ಲೆಗಳ ರಸ್ತೆ ಸಂಪರ್ಕವೂ ಸ್ಥಗಿತಗೊಂಡು ಕೊಡಗಿನ ಅನೇಕ ಗ್ರಾಮೀಣ ಭಾಗಗಳಿಗೆ ಇಂದಿಗೂ ಬಸ್ ಸೌಕರ್ಯ ಇತ್ಯಾದಿ ಸಾಧ್ಯವಾಗಿಲ್ಲ. ಈ ಎಲ್ಲ ಅಡಚಣೆಗಳ ನಡುವೆಯೂ ಜಿಲ್ಲೆಯಲ್ಲಿ ಮದ್ಯ ಮಾರಾಟದಲ್ಲಿ ಭಾರೀ ವ್ಯತ್ಯಾಸವೇನೂ ಎದುರಾಗಿಲ್ಲ. ಎಂತ ಪರಿಸ್ಥಿತಿಯಲ್ಲೂ ಪಾನಪ್ರಿಯರು ‘ವಿಚಲಿತರಾಗದೆ’

ಯಿಂದಾಗಿ ಮದ್ಯ ಮಾರಾಟದ ಮೇಲಿನ ನಿರ್ಬಂಧದಿಂದಾಗಿ ಒಂದಿಷ್ಟು ಹಿನ್ನಡೆ ಇಲಾಖೆಗೆ ಉಂಟಾಗಿತ್ತು. ಕಲ್ಯಾಣ ಮಂಟಪಗಳಲ್ಲಿ ಸಾಮೂಹಿಕ ಮದ್ಯ ಸರಬರಾಜು ಮೇಲಿನ ವ್ಯತ್ಯಯವೂ ಇದಕ್ಕೆ ಕಾರಣವಿತ್ತು.

ಆ ಬೆನ್ನಲ್ಲೇ ಎದುರಾದ ಮುಂಗಾರು ಮಳೆಯಿಂದಾಗಿ ಕೊಡಗು-ಕೇರಳ ಅಂತರ್ರಾಜ್ಯ ಗಡಿ ಸಂಪರ್ಕ ಕಡಿತಗೊಂಡಿದ್ದಲ್ಲದೆ, ನೆರೆಯ ಜಿಲ್ಲೆಗಳ ರಸ್ತೆ ಸಂಪರ್ಕವೂ ಸ್ಥಗಿತಗೊಂಡು ಕೊಡಗಿನ ಅನೇಕ ಗ್ರಾಮೀಣ ಭಾಗಗಳಿಗೆ ಇಂದಿಗೂ ಬಸ್ ಸೌಕರ್ಯ ಇತ್ಯಾದಿ ಸಾಧ್ಯವಾಗಿಲ್ಲ. ಈ ಎಲ್ಲ ಅಡಚಣೆಗಳ ನಡುವೆಯೂ ಜಿಲ್ಲೆಯಲ್ಲಿ ಮದ್ಯ ಮಾರಾಟದಲ್ಲಿ ಭಾರೀ ವ್ಯತ್ಯಾಸವೇನೂ ಎದುರಾಗಿಲ್ಲ. ಎಂತ ಪರಿಸ್ಥಿತಿಯಲ್ಲೂ ಪಾನಪ್ರಿಯರು ‘ವಿಚಲಿತರಾಗದೆ’ ಪರಿಣಾಮ, ಆಗಸ್ಟ್ ತಿಂಗಳಿನಲ್ಲಿ ಶೇ. 72 ಸಾಧನೆಯೊಂದಿಗೆ 22045 ಪೆಟ್ಟಿಗೆ ಮದ್ಯದ ಪೈಕಿ 15793ರಷ್ಟು ಮಾರಾಟಗೊಂಡಿದೆ. ಇನ್ನು ಇದೇ ಮಾಸದಲ್ಲಿ ಇದುವರೆಗೆ 21840 ಪೆಟ್ಟಿಗೆ ಪೈಕಿ 15125 ರಷ್ಟು ಗುರಿಯೊಂದಿಗೆ ಶೇ. 69 ಸಾಧನೆ ಗೋಚರಿಸಿದೆ. ಇದುವರೆಗೆ ತಾಲೂಕಿನಲ್ಲಿ 1,29,665 ಪೆಟ್ಟಿಗೆಗಳ ಮದ್ಯದಲ್ಲಿ 1,04,383 ಮಾರಾಟಗೊಂಡು ಶೇ. 81 ಸಾಧನೆಯಾಗಿದೆ.

ಸೋಮವಾರಪೇಟೆ ದಾಖಲೆ: ಇನ್ನು ಸೋಮವಾರಪೇಟೆ ತಾಲೂಕಿನಲ್ಲಿ ಕಳೆದ ಏಪ್ರಿಲ್‍ನಿಂದ ಇದುವರೆಗೆ ಉಳಿದ ತಾಲೂಕುಗಳಿಗಿಂತಲೂ ಅಧಿಕ ಮದ್ಯ ಮಾರಾಟಗೊಂಡಿರುವದು ಗೋಚರಿಸಿದೆ. ಕಳೆದ ಏಪ್ರಿಲ್‍ನಲ್ಲಿಯೇ ಈ ತಾಲೂಕಿನಲ್ಲಿ 29823 ಪೆಟ್ಟಿಗೆಗಳಲ್ಲಿ

(ಮೊದಲ ಪುಟದಿಂದ) 29196 ರಷ್ಟು ಮಾರಾಟದೊಂದಿಗೆ ಶೇ. 98 ಸಾಧನೆ ಚುನಾವಣಾ ಪರ್ವದಲ್ಲಿ ಗೋಚರಿಸಿದೆ. ಮೇಲಿನಲ್ಲಿ 34645 ಪೆಟ್ಟಿಗೆ ಮದ್ಯದಲ್ಲಿ 32019 ಮಾರಾಟಗೊಂಡು ಶೇ. 92 ಗುರಿ ಕಂಡು ಬಂದಿದೆ.

ಗುರಿ ಮೀರಿ ಮಾರಾಟ

ಮುಂಗಾರು ಆರಂಭಿಕ ಜೂನ್‍ನಲ್ಲಿ ಸೋಮವಾರಪೇಟೆ ತಾಲೂಕು ಮದ್ಯ ಮಾರಾಟದಲ್ಲಿ ಶೇ. 100 ಸಾಧನೆಯೊಂದಿಗೆ 33622 ಪೆಟ್ಟಿಗೆಗಳ ಪೈಕಿ 33711 ರಷ್ಟು ಅಧಿಕ ಮಾರಾಟಗೊಂಡಿದೆ. ಮರಳಿ ಜುಲೈ ಮಾಸದಲ್ಲಿಯೂ ಸೋಮವಾರಪೇಟೆ ತಾಲೂಕಿನಲ್ಲಿ 29226 ಪೆಟ್ಟಿಗೆ ಮದ್ಯದ ಬದಲಿಗೆ 29445 ರಷ್ಟು ಮಾರಾಟಗೊಂಡು ಶೇ. 101 ಗುರಿ ತಲಪಿದೆ. ಆಗಸ್ಟ್‍ನಲ್ಲಿ ಮಾತ್ರ ಈ ತಾಲೂಕಿನಲ್ಲಿ 31235 ಪೆಟ್ಟಿಗೆಯಲ್ಲಿ 23676 ರಷ್ಟು ಮಾರಾಟಗೊಂಡು ಶೇ. 76 ಮಾತ್ರ ಸಾಧನೆಗೊಂಡಿದೆ.

ಮರಳಿ ಸೆಪ್ಟೆಂಬರ್‍ನ ಈ ಮಾಸಾಂತ್ಯದೊಳಗೆ ಶೆ. 102 ಗುರಿ ತಲಪಿದ್ದು, 23769 ಪೆಟ್ಟಿಗೆ ಪೈಕಿ 24313 ರಷ್ಟು ಮಾರಾಟಗೊಂಡು, ಇದುವರೆಗೆ ಒಟ್ಟು ಶೇ. 95 ಸಾಧನೆಯಾಗಿದೆ. ಇಲ್ಲಿ 1,82,320 ಪೆಟ್ಟಿಗೆ ಪೈಕಿ 1,72,360 ರಷ್ಟು ಮದ್ಯ ಮಾರಾಟವಾಗಿದೆ.

ವೀರಾಜಪೇಟೆ ತಾಲೂಕು: ವೀರಾಜಪೇಟೆ ತಾಲೂಕಿನಲ್ಲಿ ಚುನಾವಣಾ ಪರ್ವದಲ್ಲಿ ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ಸರಾಸರಿ ಶೇ. 83 ಸಾಧನೆಯ ಮದ್ಯ ಮಾರಾಟ ಗೋಚರಿಸಿದೆ. ಏಪ್ರಿಲ್‍ನಲ್ಲಿ 37920 ಪೆಟ್ಟಿಗೆಗಳಲ್ಲಿ 31195 ಮಾರಾಟಗೊಂಡಿದ್ದು, ಮೇ ನಲ್ಲಿ 40009ರಲ್ಲಿ 33338 ಪೆಟ್ಟಿಗೆ ಮಾರಾಟವಾಗಿದೆ. ಇತ್ತ ಜೂನ್‍ನಲ್ಲಿ 39374 ಪೆಟ್ಟಿಗೆಗಳ ಗುರಿ ಪೈಕಿ 35226 ಮಾರಾಟಗೊಂಡು ಶೇ. 89 ಸಾಧನೆ ಕಂಡಿದೆ. ಜುಲೈನಲ್ಲಿ 36134ರಲ್ಲಿ 31336 ಪೆಟ್ಟಿಗೆ ಮಾರಾಟ ಸಹಿತ ಶೇ. 87 ಗುರಿ ಹೊಂದಲಾಗಿದೆ.

ಆಗಸ್ಟ್‍ನಲ್ಲಿ ಈ ತಾಲೂಕಿನಲ್ಲಿ ವ್ಯತ್ಯಾಸಗೊಂಡು 41128 ಪೆಟ್ಟಿಗೆ ಪೈಕಿ 27647 ಮಾರಾಟದೊಂದಿಗೆ ಶೆ. 67 ಸಾಧನೆ ಎದುರಾಗಿದೆ. ಬದಲಾಗಿ ಈ ತಿಂಗಳು ವೀರಾಜಪೇಟೆ ತಾಲೂಕಿನಲ್ಲಿ ಗುರಿ ದಾಟಿದ್ದು, 26319 ಪೆಟ್ಟಿಗೆಗಳಲ್ಲಿ 27497 ರಷ್ಟು ಮಾರಾಟದೊಂದಿಗೆ ಶೇ. 104 ಸಾಧನೆಯಾಗಿದೆ. ಈ ತಾಲೂಕಿನಲ್ಲಿ 2,20,884 ಪೆಟ್ಟಿಗೆಗಳಲ್ಲಿ 1,86,239 ಮಾರಾಟಗೊಂಡು ಶೇ. 84 ಒಟ್ಟು ಸಾಧನೆಯಾಗಿದೆ.

ಸರಾಸರಿ ಕೊಡಗು: ಕೊಡಗಿನಲ್ಲಿ ಕಳೆದ ಏಪ್ರಿಲ್‍ನಲ್ಲಿ ಶೇ. 89 ಹಾಗೂ ಮೇ ನಲ್ಲಿ ಶೇ. 86 ಸಾಧನೆಯಾಗಿದ್ದು, ಮಳೆಗಾಲದ ಜೂನ್‍ನಲ್ಲಿ ಶೇ. 94, ಜುಲೈ ಶೇ. 91, ಆಗಸ್ಟ್ ಶೇ. 71 ಹಾಗೂ ಪ್ರಸಕ್ತ ಸೆಪ್ಟೆಂಬರ್‍ನಲ್ಲಿ ಇದುವರೆಗೆ ಶೇ. 72 ರಷ್ಟು ಮದ್ಯ ಮಾರಾಟದೊಂದಿಗೆ ಒಟ್ಟು ಶೇ. 84 ಗುರಿ ತಲಪಿದಂತಾಗಿದೆ. ಕಳೆದ ವರ್ಷ ಇದೇ ಅವಧಿಗೆ ಶೆ. 91 ರಷ್ಟು ಮದ್ಯ ಮಾರಾಟ ಗುರಿ ಸಾಧಿಸಿದ್ದಾಗಿ ಇಲಾಖೆಯ ಮೂಲಗಳಿಂದ ಗೊತ್ತಾಗಿದೆ.

ಪ್ರಸಕ್ತ ವರ್ಷದಲ್ಲಿ ಇದುವರೆಗೆ ಕೊಡಗಿನಲ್ಲಿ ಒಟ್ಟು 4,62,982 ಪೆಟ್ಟಿಗೆಯಷ್ಟು ಮದ್ಯ ಮಾರಾಟಗೊಂಡಿದ್ದು, ಕಳೆದ ಸಾಲಿನಲ್ಲಿ ಈ ವೇಳೆಗೆ 4,82,567 ಪೆಟ್ಟಿಗೆಯಷ್ಟು ಮಾರಾಟಗೊಂಡಿತ್ತು.

-ಶ್ರೀಸುತ