ಮಡಿಕೇರಿ, ಸೆ. 29 : ಇತ್ತೀಚೆಗೆ ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಅತಿವೃಷ್ಟಿ ಹಾನಿಗೆ ಟಿಂಬರ್ ಮಾಫಿಯವೇ ನೇರ ಹೊಣೆ ಎಂದು ಕೆಲವರು ಆರೋಪಿಸುತ್ತಿದ್ದು, “ಟಿಂಬರ್ ಮಾಫಿಯಾ” ಮಡಿಕೇರಿ, ಸೆ. 29 : ಇತ್ತೀಚೆಗೆ ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಅತಿವೃಷ್ಟಿ ಹಾನಿಗೆ ಟಿಂಬರ್ ಮಾಫಿಯವೇ ನೇರ ಹೊಣೆ ಎಂದು ಕೆಲವರು ಆರೋಪಿಸುತ್ತಿದ್ದು, “ಟಿಂಬರ್ ಮಾಫಿಯಾ” ನಿರ್ಬಂಧ ಹೇರುವದು ಸಂವಿಧಾನದಡಿ ಇರುವ ಹಕ್ಕನ್ನು ಕಸಿದುಕೊಂಡಂತೆ ಎಂದು ಸಂಘದ ಪ್ರಮುಖರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ದೇವಿಪೂಣಚ್ಚ ಅನೇಕರಿಗೆ ಉದ್ಯೋಗ ಅವಕಾಶವನ್ನು ಕಲ್ಪಿಸಿರುವ ಮರ ವ್ಯಾಪಾರಿಗಳನ್ನು ಗುರಿಯಾಗಿಸಿಕೊಂಡು “ಟಿಂಬರ್ ಮಾಫಿಯಾ” ಎಂದು ಟೀಕಿಸುವ ಮೂಲಕ ಹಕ್ಕನ್ನು ಕಸಿದು ಕೊಳ್ಳುವದಕ್ಕಾಗಿ ಅನ್ಯಾಯದ ಮಾರ್ಗವನ್ನು ಅನುಸರಿಸಲಾಗುತ್ತಿದೆ ಎಂದು ಆರೋಪಿಸಿದರು.

ಮರ ವ್ಯಾಪಾರಿಗಳು ಮರಗಳನ್ನು ಕಾಫಿ ತೋಟ ಮತ್ತು ಇತರ ಪ್ರದೇಶದ ಮಾಲೀಕರಿಂದ ಖರೀದಿ ಮಾಡುತ್ತಾರೆ. ಜಿಲ್ಲಾಧಿಕಾರಿ, ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆಯ ಎಲ್ಲಾ ನೀತಿ

(ಮೊದಲ ಪುಟದಿಂದ) ನಿಯಮಗಳನ್ನು ಪಾಲಿಸಿ, ಅಧಿಕೃತವಾಗಿ ಅನುಮತಿಯನ್ನು ಪಡೆದು, ಮರಗಳನ್ನು ಕಡಿದು ಸಾಗಾಟ ಮಾಡುತ್ತಾರೆ. ಸರಕಾರಕ್ಕೆ ಪಾವತಿಸಬೇಕಾದ ಎಲ್ಲಾ ಶುಲ್ಕಗಳನ್ನು ಮತ್ತು ತೆರಿಗೆಗಳನ್ನು ಪಾವತಿಸಿದ ನಂತರವಷ್ಟೇ ಅರಣ್ಯ ಇಲಾಖೆಯಿಂದ ಮರ ಕಡಿಯಲು ಮತ್ತು ಸಾಗಾಟ ಮಾಡಲು ಅನುಮತಿಯನ್ನು ನೀಡಲಾಗುತ್ತದೆ. ಇಲ್ಲಿ ಯಾವದೇ ಅಕ್ರಮ ವ್ಯವಹಾರ ನಡೆಯುವದಿ ಲ್ಲವೆಂದು ಅವರು ಸ್ಪಷ್ಟಪಡಿಸಿದರು.

ಅಕ್ರಮ ಮರ ಸಾಗಾಟ ಮತ್ತು ಅನುಮತಿ ಪಡೆದು ಮರ ಸಾಗಿಸುವದಕ್ಕೆ ಸಾಕಷ್ಟು ವ್ಯತ್ಯಾಸವಿದೆ. ಮರ ವ್ಯಾಪಾರಿಗಳು ಯಾರೂ ಕೂಡ ಅಕ್ರಮವಾಗಿ ಮರವನ್ನು ಕಡಿಯುತ್ತಿಲ್ಲ. ಯಾವದೇ ಮರ ವ್ಯಾಪಾರಿ ಅರಣ್ಯ ಪ್ರದೇಶದಲ್ಲಿ ಮರಗಳನ್ನು ನಾಶ ಮಾಡಲು ಮುಂದಾಗಿಲ್ಲ. ಆದರೆ ಪರಿಸರವಾದಿಗಳು ಎಂದು ಕರೆದುಕೊಳ್ಳುತ್ತಿರುವವರು ಅರಣ್ಯ ಪ್ರದೇಶದಿಂದ ಮರಗಳನ್ನು ಕತ್ತರಿಸುವ ಟಿಂಬರ್ ಲಾಬಿ ನಡೆಯುತ್ತಿದೆ ಎಂದು ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ. ಅರಣ್ಯ ಪ್ರದೇಶದಲ್ಲಿ ಮರಗಳು ನಾಶವಾಗಿದ್ದರೆ ಅದಕ್ಕೆ ಅರಣ್ಯ ಇಲಾಖೆ ಹೊಣೆಯೇ ಹೊರತು ಮರ ವ್ಯಾಪಾರಿಗಳಲ್ಲ. ಉದ್ದೇಶಪೂರ್ವಕವಾಗಿ ಮರ ವ್ಯಾಪಾರಿಗಳ ವಿರುದ್ಧ ನಿರಂತರವಾಗಿ ಹೇಳಿಕೆಗಳು ಕೇಳಿ ಬರುತ್ತಿದ್ದು, ಇದನ್ನು ಆಧಾರವಾಗಿಟ್ಟುಕೊಂಡು ಮರ ಸಾಗಾಟಕ್ಕೆ ಜಿಲ್ಲಾಧಿಕಾರಿಗಳು ನಿರ್ಬಂಧ ಹೇರಿರುವದು ಸರಿಯಾದ ಕ್ರಮವಲ್ಲವೆಂದು ದೇವಿಪೂಣಚ್ಚ ಅಭಿಪ್ರಾಯ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ಇತರ ಪ್ರಮುಖರು ಮಾತನಾಡಿ ಮರಗಳ ಸಾಗಾಟಕ್ಕೆ ಅನುಮತಿ ನೀಡದಿದ್ದರೆ ಕಡಿದು ಹಾಕಲಾಗಿರುವ ಮತ್ತು ಮಳೆಯಿಂದ ಧರೆಗುರುಳಿರುವ ಮರಗಳು ಹಾಳಾಗಿ ಮರವ್ಯಾಪಾರಿಗಳಿಗೆ ಹಾಗೂ ಭೂ ಮಾಲೀಕರಿಗೆ ಸಾಕಷ್ಟು ನಷ್ಟವಾಗಲಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಯಾವ ಭೂಮಾಲೀಕರೂ ಕೂಡ ತಮ್ಮ ಕಾಫಿ ತೋಟದಲ್ಲಿರುವ ಮರಗಳನ್ನು ಮನಬಂದಂತೆ ಕಡಿಯಲು ಇಚ್ಛಿಸುವದಿಲ್ಲ. ಪರಿಸ್ಥಿತಿ ಹೀಗಿದ್ದರೂ ಕೆಲವು ಡೋಂಗಿ ಪರಿಸರವಾದಿಗಳು ಹಿರಿಯ ಅಧಿಕಾರಿಗಳ ಮೇಲೆ ಪ್ರಭಾವ ಬೀರುವ ಮೂಲಕ, ಖಾಸಗಿ ಜಮೀನಿನಲ್ಲಿರುವ ಮರಗಳ ಕಡಿತಲೆಗೆ ಅಡ್ಡಿಯುಂಟು ಮಾಡುತ್ತಿದ್ದಾರೆ. ಟಿಂಬರ್ ವ್ಯಾಪಾರಿಗಳನ್ನು ಟಿಂಬರ್ ಮಾಫಿಯಾ ಎಂದು ಕರೆಯುವ ಈ ವರ್ಗ, ಬಹಿರಂಗವಾಗಿ ಚರ್ಚೆಗೆ ಬಂದರೆ ನಾವು ಪಾಲ್ಗೊಂಡು ಸ್ಪಷ್ಟೀಕರಣ ನೀಡಲು ಸಿದ್ಧರಿದ್ದೇವೆ ಎಂದು ಹೇಳಿದರು. ಮರ ವ್ಯಾಪಾರಿಗಳಿಂದ ಹಾಗೂ ಭೂಮಾಲೀಕರಿಂದ ಕೊಡಗಿನ ಅರಣ್ಯ ಸಂಪತ್ತು ಮತ್ತು ಪರಿಸರಕ್ಕೆ ಯಾವದೇ ರೀತಿಯಲ್ಲಿ ಹಾನಿಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಜಿಲ್ಲಾಧಿಕಾರಿಗಳು ಮರ ಸಾಗಾಟಕ್ಕೆ ನಿಯಂತ್ರಣವನ್ನು ಹೇರಿ ರಸ್ತೆಗೆ ಹಾನಿಯಾಗುತ್ತದೆ ಎನ್ನುವ ಕಾರಣವನ್ನು ನೀಡಿದ್ದಾರೆ. ಇತ್ತೀಚಿಗೆ ಸಿಲ್ವರ್ ಮರ ಸಾಗಾಟಕ್ಕೆ ನಿಯಂತ್ರಣವನ್ನು ಸಡಿಲಿಸಿದ್ದಾರೆ. ಮರ ಸಾಗಾಟ ಮತ್ತು ಇತರೇ ವಸ್ತುಗಳ ಸಾಗಾಟದಲ್ಲಿ ಯಾವದೇ ವ್ಯತ್ಯಾಸ ಇರುವದಿಲ್ಲ. ಕೊಡಗಿನ ರಸ್ತೆಗಳ ಮೂಲಕ ಪ್ರತಿನಿತ್ಯ ಪೆಟ್ರೋಲಿಯಂ ಉತ್ಪನ್ನಗಳು, ಕಬ್ಬಿಣ, ಸಿಮೆಂಟ್, ಗೃಹ ಉಪಯೋಗಿ ವಸ್ತುಗಳು ಸೇರಿದಂತೆ ಎಲ್ಲಾ ಸಾಮಗ್ರಿಗಳು ಸಾಗಾಟವಾಗುತ್ತಿವೆ. ಆದರೆÀ ಕೇವಲ ಮರಗಳ ಸಾಗಾಟಕ್ಕೆ ಮಾತ್ರ ನಿಯಂತ್ರಣ ಯಾಕೆ. ಮರ ಸಾಗಾಟದಿಂದ ರಸ್ತೆ ಹಾಳಾಗುತ್ತದೆ ಎಂದಾದರೆ ಇತರ ವಸ್ತುಗಳ ಸಾಗಾಟದಿಂದ ರಸ್ತೆ ಹಾಳಾಗುವದಿಲ್ಲವೇ ಎಂದು ಪ್ರಶ್ನಿಸಿದರು.

ನಿರ್ಬಂಧದ ಆದೇಶವನ್ನು ವೈಜ್ಞಾನಿಕವಾಗಿ ಪುನರ್ ಪರಿಶೀಲಿಸಿ ಸಿಲ್ವರ್ ಸೇರಿದಂತೆ ಜಂಗಲ್ ವುಡ್‍ಗಳ ಸಾಗಾಟಕ್ಕೆ ಜಿಲ್ಲಾಡಳಿತ ಅನುಮತಿಯನ್ನು ನೀಡಬೇಕೆಂದು ಪ್ರಮುಖರಾದ ಕೆ.ಜಿ.ಹರೀಶ್, ಎಂ.ಎಸ್.ಸಮೀರ್, ಎಂ.ಪಿ.ಬೆಳ್ಯಪ್ಪ, ಎ.ಬಿ.ಅಜೀóಜ್ó ಹಾಗೂ ಷಣ್ಮುಖ ಒತ್ತಾಯಿಸಿದರು.