ಮಡಿಕೇರಿ, ಸೆ. 29: ಜಿಲ್ಲಾ ಕೇಂದ್ರವಾದ ಮಡಿಕೇರಿಯ ಹೃದಯ ಭಾಗದಲ್ಲಿರುವ ಐತಿಹಾಸಿಕ ಕೋಟೆಯ ಆವರಣದಲ್ಲಿ ಇಂದು ಬೆಳಗ್ಗಿನ ಜಾವ ಪೊಲೀಸ್ ಕಾರ್ಯಾಚರಣೆ... ಸಮವಸ್ತ್ರಧರಿಸದೆ ಇದ್ದ ಸುಮಾರು 45 ಮಂದಿ ಕತ್ತಿ, ದೊಣ್ಣೆಯಂತಹ ಆಯುಧಗ ಳೊಂದಿಗೆ ಕಂಡುಬಂದರು.ಸ್ವತಃ ಡಿವೈಎಸ್ಪಿಯ ನೇತೃತ್ವ ಬೇರೆ. ಜತೆಯಲ್ಲಿ ಇಬ್ಬರು ವೃತ್ತ ನಿರೀಕ್ಷಕರು, ಇಬ್ಬರು ಉಪನಿರೀಕ್ಷ ಕರು...(!) ಇದೇನಾಯಿತಪ್ಪಾ ಎಂದು ಗಾಬರಿಯಾಗದಿರಿ... ಇದು ಅಪರಾಧದ ವಿರುದ್ಧದ ಕಾರ್ಯಾಚರಣೆಲ್ಲ... ಸ್ವಚ್ಛ ಭಾರತ ಕಲ್ಪನೆಯಂತೆ ನಡೆದ ಶ್ರಮದಾನವಿದು...ರಾಜರ ಆಳ್ವಿಕೆ ಕಾಲಘಟ್ಟದಲ್ಲಿ ಕೇಂದ್ರ ಸ್ಥಾನವಾಗಿದ್ದ ಮಡಿಕೇರಿ ಕೋಟೆ ಆವರಣದಲ್ಲಿ ಡಿವೈಎಸ್ಪಿ ಕೆ.ಎಸ್. ಸುಂದರ್ರಾಜ್ ನೇತೃತ್ವದಲ್ಲಿ ಇಬ್ಬರು ಸರ್ಕಲ್ ಇನ್ಸ್ಪೆಕ್ಟರ್, ಇಬ್ಬರು ಸಬ್ಇನ್ಸ್ಪೆಕ್ಟರ್, ಮಹಿಳಾ ಪೇದೆಗಳು ಸೇರಿದ್ದಂತೆ 45 ಕ್ಕೂ ಹೆಚ್ಚು ಪೊಲೀಸರು ಮುಂಜಾನೆ 7 ಗಂಟೆಗೆ ಸರಿಯಾಗಿ ಕತ್ತಿ, ದೊಣ್ಣೆ ಹಿಡಿದು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡರು.
ಜಿಲ್ಲಾ ಸಶಸ್ತ್ರ ಮೀಸಲು ತುಕಡಿಯ ಒಂದು ವ್ಯಾನ್, ಏಳೆಂಟು ಜೀಪು, ಐದಾರು ಬೈಕ್ನಲ್ಲಿ ಆಗಮಿಸಿದ ಪೊಲೀಸರು, ನ್ಯಾಯಾಲಯ ಕಟ್ಟಡ ಹಿಂಭಾಗದಲ್ಲಿ ಕಾರ್ಯೋನ್ಮುಖರಾಗಿದ್ದರು. ಆದರೆ, ಯಾವೊಬ್ಬ ಪೊಲೀಸ್ ಅಧಿಕಾರಿ, ಸಿಬ್ಬಂದಿಯೂ ಸಮವಸ್ತ್ರ ಧರಿಸಿರಲಿಲ್ಲ... ಕೇಂದ್ರ ಸರ್ಕಾರದ ಸ್ವಚ್ಛತಾ
ಇಬ್ಬರು ಉಪನಿರೀಕ್ಷ ಕರು...(!) ಇದೇನಾಯಿತಪ್ಪಾ ಎಂದು ಗಾಬರಿಯಾಗದಿರಿ... ಇದು ಅಪರಾಧದ ವಿರುದ್ಧದ ಕಾರ್ಯಾಚರಣೆಲ್ಲ... ಸ್ವಚ್ಛ ಭಾರತ ಕಲ್ಪನೆಯಂತೆ ನಡೆದ ಶ್ರಮದಾನವಿದು...
ರಾಜರ ಆಳ್ವಿಕೆ ಕಾಲಘಟ್ಟದಲ್ಲಿ ಕೇಂದ್ರ ಸ್ಥಾನವಾಗಿದ್ದ ಮಡಿಕೇರಿ ಕೋಟೆ ಆವರಣದಲ್ಲಿ ಡಿವೈಎಸ್ಪಿ ಕೆ.ಎಸ್. ಸುಂದರ್ರಾಜ್ ನೇತೃತ್ವದಲ್ಲಿ ಇಬ್ಬರು ಸರ್ಕಲ್ ಇನ್ಸ್ಪೆಕ್ಟರ್, ಇಬ್ಬರು ಸಬ್ಇನ್ಸ್ಪೆಕ್ಟರ್, ಮಹಿಳಾ ಪೇದೆಗಳು ಸೇರಿದ್ದಂತೆ 45 ಕ್ಕೂ ಹೆಚ್ಚು ಪೊಲೀಸರು ಮುಂಜಾನೆ 7 ಗಂಟೆಗೆ ಸರಿಯಾಗಿ ಕತ್ತಿ, ದೊಣ್ಣೆ ಹಿಡಿದು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡರು.
ಜಿಲ್ಲಾ ಸಶಸ್ತ್ರ ಮೀಸಲು ತುಕಡಿಯ ಒಂದು ವ್ಯಾನ್, ಏಳೆಂಟು ಜೀಪು, ಐದಾರು ಬೈಕ್ನಲ್ಲಿ ಆಗಮಿಸಿದ ಪೊಲೀಸರು, ನ್ಯಾಯಾಲಯ ಕಟ್ಟಡ ಹಿಂಭಾಗದಲ್ಲಿ ಕಾರ್ಯೋನ್ಮುಖರಾಗಿದ್ದರು. ಆದರೆ, ಯಾವೊಬ್ಬ ಪೊಲೀಸ್ ಅಧಿಕಾರಿ, ಸಿಬ್ಬಂದಿಯೂ ಸಮವಸ್ತ್ರ ಧರಿಸಿರಲಿಲ್ಲ... ಕೇಂದ್ರ ಸರ್ಕಾರದ ಸ್ವಚ್ಛತಾ (ಮೊದಲ ಪುಟದಿಂದ) ಗ್ರಾಮಾಂತರ, ಮಡಿಕೇರಿ ಸಂಚಾರ, ಮಡಿಕೇರಿ ಮಹಿಳಾ ಠಾಣೆಯಲ್ಲಿ ಕಾರ್ಯನಿರ್ವ ಹಿಸುತ್ತಿರುವ ಎಎಸ್ಐ, ಮುಖ್ಯಪೇದೆ, ಪೇದೆಗಳು ಉತ್ಸಾಹದಲ್ಲಿ ಪಾಲ್ಗೊಂಡಿದ್ದರು.
ಮಡಿಕೇರಿ ಕೋಟೆ ಆವರಣದಲ್ಲಿ ಗ್ರೀನ್ ಸಿಟಿ ಫೋರಂ ಮುಂದಾಳತ್ವದಲ್ಲಿ ಸ್ವಚ್ಛತಾ ಅಭಿಯಾನ ಹಮ್ಮಿಕೊಂಡಿರುವದು ಶ್ಲಾಘನೀಯ. ಇದರಲ್ಲಿ ಪೊಲೀಸರು ಭಾಗಿಯಾಗಿರುವದು ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ಪೊಲೀಸ್ ಕವಾಯತು ಮೈದಾನ, ಪೊಲೀಸ್ ವಸತಿಗೃಹ ವ್ಯಾಪ್ತಿಯಲ್ಲಿ ಶ್ರಮದಾನದ ಮೂಲಕ ಸ್ವಚ್ಛತೆ ಹಮ್ಮಿಕೊಳ್ಳಲಾಗುವದೆಂದು ಡಿವೈಎಸ್ಪಿ ಕೆ.ಎಸ್. ಸುಂದರ್ರಾಜ್ ಹೇಳಿದರು.
ಮುಂದಿನ ದಿನಗಳಲ್ಲಿ ಪೊಲೀಸ್ ವಸತಿಗೃಹ ಆವರಣದಲ್ಲಿ ಶ್ರಮದಾನ ನಡೆಸಲಾಗುವದೆಂದು ಗ್ರೀನ್ ಸಿಟಿ ಫೋರಂ ಸ್ಥಾಪಕಾಧ್ಯಕ್ಷ ಚೆಯ್ಯಂಡ ಸತ್ಯ ಹೇಳಿದರು.
ಮಡಿಕೇರಿ ಲಯನ್ಸ್ ಸಂಸ್ಥೆ ಅಧ್ಯಕ್ಷ ವ್ಯಾಂಡಮ್ ದಾಮೋದರ್ ನೇತೃತ್ವದಲ್ಲಿ ಲಯನ್ಸ್ ಸಂಸ್ಥೆ ಸದಸ್ಯರಾದ ಸೋಮಣ್ಣ, ಅನಿತಾ ಸೋಮಣ್ಣ, ನಂಜಪ್ಪ, ಜೆ.ವಿ. ಕೋಠಿ, ಮಧುಕರ್ ಶ್ರಮದಾನದಲ್ಲಿ ಪಾಲ್ಗೊಂಡಿದ್ದರು.
ಉಪನ್ಯಾಸಕ ಸಿದ್ಧರಾಜು, ಶನಿವಾರ ಕತ್ತಿ ಸಹಿತ ಆಗಮಿಸುವ ದರೊಂದಿಗೆ ಶ್ರಮದಾನದಲ್ಲಿ ಪಾಲ್ಗೊಂಡಿದ್ದರು.
ಗ್ರೀನ್ ಸಿಟಿ ಫೋರಂ ಅಧ್ಯಕ್ಷ ಅಂಬೆಕಲ್ ನವೀನ್ ಕುಶಾಲಪ್ಪ, ಪ್ರಧಾನ ಕಾರ್ಯದರ್ಶಿ ಪಿ. ಕೃಷ್ಣಮೂರ್ತಿ, ನಿರ್ದೇಶಕರಾದ ಮೋಂತಿ ಗಣೇಶ್, ಕುಕ್ಕೇರ ಜಯ ಚಿಣ್ಣಪ್ಪ, ಕಿರಿಯಮಾಡ ರತನ್ ತಮ್ಮಯ್ಯ, ಅಜ್ಜಮಾಡ ರಮೇಶ್ ಕುಟ್ಟಪ್ಪ, ಪೂಳಕಂಡ ರಾಜೇಶ್ ನಿವೃತ್ತ ಯೋಧ ತಂಬುಕುತ್ತಿರ ಸೋಮಯ್ಯ ಶ್ರಮದಾನದಲ್ಲಿ ಪಾಲ್ಗೊಂಡಿದ್ದರು.
ನಗರಸಭಾ ಮಾಜಿ ಸದಸ್ಯ ಬಿ.ಎಂ. ರಾಜೇಶ್ ಪ್ರಾಯೋಜಕ ತ್ವದಲ್ಲಿ ಯಂತ್ರದ ಮೂಲಕ ಹುಲ್ಲುಗಳನ್ನು ಕತ್ತರಿಸಲಾಯಿತು. ಗ್ರೀನ್ ಸಿಟಿ ಫೋರಂ ನಿರ್ದೇಶಕ ರಾದ ಪೂಳಕಂಡ ರಾಜೇಶ್, ಮಾದೇಟಿರ ತಿಮ್ಮಯ್ಯ ಅವರ ತೋಟದಲ್ಲಿ ಕೆಲಸ ಮಾಡುವ ಯಂತ್ರ ಬಳಸಿ ದಿನಪೂರ್ತಿ ಕೋಟೆ ಆವರಣ ದಲ್ಲಿ ಬೆಳೆದಿದ್ದ ಗಿಡಗಂಟಿಗಳನ್ನು ಕಡಿದು ಸ್ವಚ್ಛಗೊಳಿಸಲಾಯಿತು.
ಎನ್ಎಸ್ಎಸ್ ಭಾಗಿ
ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್) ಘಟಕದಲ್ಲಿರುವ 60 ಸ್ವಯಂ ಸೇವಕರು ಶನಿವಾರ ಮಧ್ಯಾಹ್ನ ಕೋಟೆ ಆವರಣದಲ್ಲಿ ಶ್ರಮದಾನದ ಮೂಲಕ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ವಿದ್ಯಾರ್ಥಿ ನಾಯಕ ಸುಂದರ್ ನಾಯಕ್ ನೇತೃತ್ವ ವಹಿಸಿದ್ದರು.