ಜಿಲ್ಲಾಮಟ್ಟಕ್ಕೆ ಆಯ್ಕೆ

ಗೋಣಿಕೊಪ್ಪ ವರದಿ: ಪದವಿಪೂರ್ವ ಶಿಕ್ಷಣ ಇಲಾಖೆ ವತಿಯಿಂದ ಪಾಲಿಬೆಟ್ಟ ಸರ್ಕಾರಿ ಪದವಿಪೂರ್ವ ಕಾಲೇಜು, ಮೈದಾನದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಗೋಣಿಕೊಪ್ಪ ಕಾವೇರಿ ಪದವಿಪೂರ್ವ ಕಾಲೇಜು ತಂಡ ಬಾಲಕ, ಬಾಲಕಿಯರ ತಂಡ ಬ್ಯಾಡ್‍ಮಿಂಟನ್ ಪಂದ್ಯಾವಳಿಗಳಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದೆ. ದೈಹಿಕ ಶಿಕ್ಷಕ ಸಂತೋಷ್ ತರಬೇತಿ ನೀಡಿದ್ದಾರೆ.

ತಾಲೂಕು ಮಟ್ಟದ ಅಥ್ಲೆಟಿಕ್ ಕ್ರೀಡಾಕೂಟ

ಕೂಡಿಗೆ: ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ತಾಲೂಕು ಮಟ್ಟದ ಅಥ್ಲೆಟಿಕ್ ಕ್ರೀಡಾಕೂಟ ಕುಶಾಲನಗರದ ಫಾತಿಮಾ ಪದವಿಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ನಡೆಯಿತು. ಅಥ್ಲೆಟಿಕ್ ಕ್ರೀಡಾಕೂಟಕ್ಕೆ ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷ ಫಿಲಿಪ್‍ವಾಸ್ ಚಾಲನೆ ನೀಡಿದರು. ಫಾತಿಮಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಜಸ್ಮಿನ್ ಮಾತನಾಡಿದರು. ಫಾತಿಮಾ ಪದವಿಪೂರ್ವ ಕಾಲೇಜಿನ ದೈಹಿಕ ಶಿಕ್ಷಕ ಸಂತೋಷ್ ಸ್ವಾಗತಿಸಿ, ವಂದಿಸಿದರು.

ರಾಜ್ಯಮಟ್ಟಕ್ಕೆ ಆಯ್ಕೆ

ಕರಿಕೆ: ಇಲ್ಲಿಗೆ ಸಮೀಪದ ಚೆತ್ತುಕಾಯ ಕಾಲೋನಿ ಸ.ಹಿ.ಪ್ರಾ. ಶಾಲೆಯ ಏಳನೆಯ ತರಗತಿ ವಿದ್ಯಾರ್ಥಿ ರಾಹುಲ್ ಕೆ.ಕೆ. ಭಾರದ ಗುಂಡು ಎಸೆತ ಹಾಗೂ ತಟ್ಟೆ ಎಸೆತ ಕ್ರೀಡಾಕೂಟದಲ್ಲಿ ಭಾಗವಹಿಸಿ ವಲಯ ಮಟ್ಟ, ತಾಲೂಕುಮಟ್ಟ, ಜಿಲ್ಲಾಮಟ್ಟದ ಹಂತಗಳಲ್ಲಿ ಜಯಗಳಿಸಿ ತುಮಕೂರಿನಲ್ಲಿ ನಡೆಯುವ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾನೆ.

ಶಾಲೆಯ ಮುಖ್ಯ ಶಿಕ್ಷಕ ಎನ್.ಎಸ್. ಕುಮಾರ್, ಸಹ ಶಿಕ್ಷಕರುಗಳಾದ ಮಹಾಲಕ್ಷ್ಮಿ, ಭರಮಪ್ಪ ಪಾಷಾಗಾರ್, ಗಣೇಶಾಚಾರ್, ಕಾವ್ಯ ಹಾಗೂ ಮದುರಾ ಕೆ. ಇವರುಗಳು ವಿಜೇತನಾಗಲು ಸಹಕರಿಸಿದ್ದಾರೆ ಎಂದು ಮುಖ್ಯ ಶಿಕ್ಷಕರು ತಿಳಿಸಿದ್ದಾರೆ.

ಕ್ರೀಡೆಯಲ್ಲಿ ಪ್ರಶಸ್ತಿ

ಗೋಣಿಕೊಪ್ಪಲು: ಇತ್ತೀಚೆಗೆ ಮೂಡಬಿದಿರೆಯಲ್ಲಿ ನಡೆದ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಗೋಣಿಕೊಪ್ಪಲು ಕಾವೇರಿ ಕಾಲೇಜಿನ ದ್ವಿತೀಯ ಬಿ.ಎ. ವಿದ್ಯಾರ್ಥಿ ಆರ್. ರಾಧಾಕೃಷ್ಣ ಲಾಂಗ್ ಜಂಪ್‍ನಲ್ಲಿ ಚಿನ್ನದ ಪದಕ ಹಾಗೂ 100 ಮೀಟರ್ ಓಟದ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದುಕೊಂಡು ಕ್ರೀಡಾಕೂಟದ ಉತ್ತಮ ಕ್ರೀಡಾಪಟು ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಇವರು ಗೋಣಿಕೊಪ್ಪಲಿನ ಅಶ್ವಿನಿ ಸ್ಪೋಟ್ಸ್ ಫೌಂಡೇಶನ್‍ನಲ್ಲಿ ತರಬೇತಿ ಪಡೆಯುತ್ತಿದ್ದು, ಇವರಿಗೆ ತರಬೇತುದಾರ ಕ್ಯಾಪ್ಟನ್ ಮುರುಳೀಧರ್ ತರಬೇತಿ ನೀಡುತ್ತಿದ್ದಾರೆ ಎಂದು ಪ್ರಾಂಶುಪಾಲೆ ಪ್ರೊ. ಎಸ್.ಆರ್. ಉಷಾಲತ ತಿಳಿಸಿದ್ದಾರೆ.ವಿಭಾಗೀಯ ಮಟ್ಟಕ್ಕೆ ಆಯ್ಕೆ

ಪೊನ್ನಂಪೇಟೆ: ಪ್ರಾಥಮಿಕ ಶಾಲಾ ಮಕ್ಕಳ ಜಿಲ್ಲಾಮಟ್ಟದ ಕ್ರೀಡಾಕೂಟದ ಬಾಲಕಿಯರ ವಾಲಿಬಾಲ್ ಪಂದ್ಯಾವಳಿಯಲ್ಲಿ ವೀರಾಜಪೇಟೆ ತಾಲೂಕು ತಂಡವನ್ನು ಪ್ರತಿನಿಧಿಸಿದ್ದ ಬೇಟೋಳಿ-ಗುಂಡಿಕೆರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ತಂಡ ಚಾಂಪಿಯನ್ ಆಗಿ ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿದೆ.

ಮಡಿಕೇರಿ ಸಮೀಪದ ಮರಗೋಡಿನ ಸರಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಇತ್ತೀಚೆಗೆ ನಡೆದ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಮಡಿಕೇರಿ ತಾಲೂಕು ತಂಡವನ್ನು ಸೋಲಿಸಿ ಫೈನಲ್ಸ್‍ಗೆ ಅರ್ಹತೆ ಪಡೆದುಕೊಂಡಿತ್ತು. ಅಂತಿಮ ಪಂದ್ಯದಲ್ಲಿ ಸೋಮವಾರಪೇಟೆ ತಂಡವನ್ನು ಮಣಿಸಿದ ವೀರಾಜಪೇಟೆ ತಾಲೂಕು ತಂಡ ಪ್ರಥಮ ಸ್ಥಾನ ಪಡೆದುಕೊಳ್ಳುವ ಮೂಲಕ ಮುಂಬರುವ ಪ್ರಾಥಮಿಕ ಶಾಲಾ ಹಂತದ ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿದೆ.

ಬೇಟೋಳಿ-ಗುಂಡಿಕೆರೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ತಂಡದ ನಾಯಕಿ ಎಂ.ಹೆಚ್. ಸಮೀಮ ನೇತೃತ್ವದ ತಂಡ ಮುಂದಿನ ತಿಂಗಳು ಚಿಕ್ಕಮಗಳೂರಿನಲ್ಲಿ ಜರುಗಲಿರುವ ವಿಭಾಗೀಯ ಮಟ್ಟದ ಕ್ರೀಡಾಕೂಟದಲ್ಲಿ ಜಿಲ್ಲಾ ತಂಡವನ್ನು ಪ್ರತಿನಿಧಿಸಲಿದೆ ಎಂದು ಶಾಲಾ ಮುಖ್ಯೋಪಾಧ್ಯಾಯಿನಿ ಹೆಚ್.ಸಿ. ಸೀತಾ ತಿಳಿಸಿದ್ದಾರೆ.

ನೆಟ್‍ಬಾಲ್ ಸ್ಪರ್ಧೆಯಲ್ಲಿ ಜಿಲ್ಲಾಮಟ್ಟಕ್ಕೆ

ವೀರಾಜಪೇಟೆ: ಪದವಿಪೂರ್ವ ಕಾಲೇಜುಗಳ ತಾಲೂಕು ಮಟ್ಟದ ನೆಟ್‍ಬಾಲ್ ಸ್ಪರ್ಧೆಯಲ್ಲಿ ಗೋಣಿಕೊಪ್ಪಲಿನ ಕಾವೇರಿ ಕಾಲೇಜು ಹಾಗೂ ಸಂತ ಅನ್ನಮ್ಮ ಕಾಲೇಜು ತಂಡಗಳು ಕ್ರಮವಾಗಿ ಬಾಲಕರ ಹಾಗೂ ಬಾಲಕಿಯರ ವಿಭಾಗದಲ್ಲಿ ಜಯಗಳಿಸಿ ಜಿಲ್ಲಾಮಟ್ಟಕ್ಕೆ ಅರ್ಹತೆ ಪಡೆದುಕೊಂಡವು.

ಸಂತ ಅನ್ನಮ್ಮ ವಿದ್ಯಾಸಂಸ್ಥೆಯ ಮೈದಾನದಲ್ಲಿ ನಡೆದ ನೆಟ್‍ಬಾಲ್ ಟೂರ್ನಿಗೆ ಸಂತ ಅನ್ನಮ್ಮ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಮದಲೈ ಮುತ್ತು ಚಾಲನೆ ನೀಡಿದರು.

ಬಾಲಕರ ವಿಭಾಗದಲ್ಲಿ ಗೋಣಿಕೊಪ್ಪಲಿನ ಕಾವೇರಿ ಕಾಲೇಜು ತಂಡ ವಿರಾಜಪೇಟೆಯ ಕಾವೇರಿ ಕಾಲೇಜು ತಂಡವನ್ನು ಮಣಿಸಿ ಜಿಲ್ಲಾಮಟ್ಟಕ್ಕೆ ಅರ್ಹತೆ ಪಡೆದುಕೊಂಡರೆ, ಬಾಲಕೀಯರ ವಿಭಾಗದಲ್ಲಿ ಸಂತ ಅನ್ನಮ್ಮ ಕಾಲೇಜು ತಂಡ ಪೊನ್ನಂಪೇಟೆಯ ಸಂತ ಅಂಥೋಣಿ ಕಾಲೇಜು ತಂಡವನ್ನು ಮಣಿಸಿ ಜಿಲ್ಲಾ ಮಟ್ಟಕ್ಕೆ ಅರ್ಹತೆ ಪಡೆದುಕೊಂಡಿತು.

ಜಿಲ್ಲಾ ಮಟ್ಟಕ್ಕೆ ಆಯ್ಕೆ

ಒಡೆಯನಪುರ: ಪ್ರೌಢಶಾಲಾ ವಿಭಾಗದ ಸೋಮವಾರಪೇಟೆ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಬಾಲಕಿಯರ ವಿಭಾಗದ ಹಾಕಿ ಪಂದ್ಯಾವಳಿಯಲ್ಲಿ ಗೌಡಳ್ಳಿ ಸರಕಾರಿ ಪ್ರೌಢಶಾಲೆಯ ಬಾಲಕಿಯರು ಪ್ರಥಮ ಸ್ಥಾನಗಳಿಸಿರುವದರ ಮೂಲಕ ಜಿಲ್ಲಾಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಗೊಂಡಿದ್ದಾರೆ ಎಂದು ಗೌಡಳ್ಳಿ ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎನ್.ಕೆ. ನಾಗೇಂದ್ರ ಮತ್ತು ದೈಹಿಕ ಶಿಕ್ಷಣ ಶಿಕ್ಷಕ ಜಿ.ಇ. ಪ್ರವೀಣ್ ತಿಳಿಸಿದ್ದಾರೆ.

ರಾಜ್ಯಮಟ್ಟಕ್ಕೆ ಆಯ್ಕೆ

ನಾಪೆÇೀಕ್ಲು: ಮರಗೋಡು ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ಜಿಲ್ಲಾಮಟ್ಟದ ಅಥ್ಲೆಟಿಕ್ಸ್‍ನಲ್ಲಿ ಕಕ್ಕಬೆ ಪ್ರೌಢಶಾಲೆಯ ವಿದ್ಯಾರ್ಥಿ ಜಮಾಲುದ್ದೀನ್ ಎ.ಎ. 400 ಮೀ. ಓಟದಲ್ಲಿ ದ್ವಿತೀಯ ಸ್ಥಾನಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಅಂತೆಯೇ ಸೌಮ್ಯ ಎ.ಆರ್. 800 ಮೀ. ಓಟದಲ್ಲಿ ತೃತೀಯ ಸ್ಥಾನ ಪಡೆದಿದ್ದಾಳೆ.ವೀರಾಜಪೇಟೆಯಲ್ಲಿ ಸ್ವಚ್ಛತಾ ಆಂದೋಲನ

ವೀರಾಜಪೇಟೆ: ಸ್ವಚ್ಛ ಭಾರತ ಅಭಿಯಾನ ಆರಂಭವಾದ ಬಳಿಕ ಸ್ವಚ್ಛತೆಯ ಬಗ್ಗೆ ಜನರಲ್ಲಿ ಅರಿವು ಮೂಡುತ್ತಿದೆ. ತಮ್ಮ ಪರಿಸರವನ್ನು ಸ್ವಚ್ಛವಾಗಿ ಇಡುವ ಮನೋಭಾವನೆ ಎಲ್ಲೆಡೆಗಳಲ್ಲಿ ಹರಡಿದೆ ಎಂದು ವೀರಾಜಪೇಟೆ ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಜಯಪ್ರಕಾಶ್ ಹೇಳಿದರು.

ತಾಲೂಕು ಆಡಳಿತ, ಅರಣ್ಯ ಇಲಾಖೆ, ವೀರಾಜಪೇಟೆ ಪಟ್ಟಣ ಪಂಚಾಯಿತಿ ಹಾಗೂ ವೀರಾಜಪೇಟೆ ತಾಲೂಕು ಕಾನೂನು ಸೇವೆಗಳ ಸಮಿತಿ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಇಲ್ಲಿನ ಗಡಿಯಾರ ಕಂಬದಿಂದ ತಾಲೂಕು ಮೈದಾನದ ವರೆಗಿನ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಜಯಪ್ರಕಾಶ್, ಹಿಂದೆ ಮಹತ್ಮಾ ಗಾಂಧಿ ಸ್ವಚ್ಛತೆಯೇ ದೈವ ಎಂದಿರುವದು ಇಂದು ಸ್ವಚ್ಛತೆಯ ಮಹತ್ವವನ್ನು ಸಾರುತ್ತದೆ.

ನಾವು ಸಾಕಷ್ಟು ಕಡೆ ನೈರ್ಮಲ್ಯ ಸಮಸ್ಯೆಯನ್ನು ಎದುರಿಸುತ್ತಿರುವದರಿಂದ ಅದು ಪರಿಸರದ ಮೇಲೆ ಪರಿಣಾಮ ಬೀರುತ್ತಿದೆ. ಇದರಿಂದ ಉತ್ತಮ ಪರಿಸರ ಸಂರಕ್ಷಣೆ ಎಲ್ಲರ ಹೊಣೆಯಾಗಿದೆ ಎಂದರು.

ತಾಲೂಕು ತಹಶೀಲ್ದಾರ್ ಗೋವಿಂದರಾಜು ಮಾತನಾಡಿ, ಇಂದು ಕೆಲವು ದೊಡ್ಡ ನಗರಗಳಲ್ಲಿ ಶುದ್ಧ ಗಾಳಿ ಇಲ್ಲದೆ ಪರಿತಪಿಸುವಂತಾಗಿದೆ. ಇದಕ್ಕಾಗಿ ನಮಗೆ ಮರ-ಗಿಡಗಳು ಅತ್ಯಗತ್ಯ. ಆದ್ದರಿಂದ ಅದನ್ನು ಉಳಿಸಿ ಬೆಳೆಸಬೇಕಾಗಿದೆ. ಅದೇ ರೀತಿ ನೈರ್ಮಲ್ಯವನ್ನು ನಿರ್ಲಕ್ಷ್ಯಿಸಿ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆಯುವ ಮೂಲಕ ಪರಿಸರವನ್ನು ಕೆಡಿಸುತ್ತಿದ್ದೇವೆ. ಇದರಿಂದ ಮನುಷ್ಯನಿಗೆ, ಪ್ರಾಣಿಗಳಿಗೆ ಅಗತ್ಯವಾಗಿ ಬೇಕಾದ ಜೀವ ಜಲಕ್ಕೆ ಧಕ್ಕೆಯಾಗಿ ಜಲ ಮಾಲಿನ್ಯವಾಗುತ್ತಿದೆ ಎಂದÀರು.

ಸ್ವಚ್ಛತಾ ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆಯ ಡಿ.ಎಫ್.ಓ. ಮರಿಯಾ ಕ್ರಿಸ್ತರಾಜು, ಪೊಲೀಸ್ ವೃತ್ತ ನಿರೀಕ್ಷಕ ಕುಮಾರ್ ಆರಾಧ್ಯ, ಗ್ರಾಮಾಂತರ ಠಾಣಾಧಿಕಾರಿ ಸುರೇಶ್ ಬೋಪಣ್ಣ , ಪ.ಪಂ. ಅಭಿಯಂತರ ಹೇಮಕುಮಾರ್, ಮುಖ್ಯಾಧಿಕಾರಿ ಶ್ರೀಧರ್, ತಾಲೂಕು ಕಚೇರಿ ಮತ್ತು ಪ.ಪಂ.ನ ಸಿಬ್ಬಂದಿಗಳು, ಕಾನೂನು ಸೇವಾ ಸಮಿತಿಯ ಸದಸ್ಯರು, ಕ್ಲಬ್ ಮಹೀಂದ್ರ ಸಂಸ್ಥೆಯವರು ಮತ್ತಿತರರು ಭಾಗವಹಿಸಿದ್ದರು. ಈ ಸಂದರ್ಭ ಗಡಿಯಾರ ಕಂಬದಿಂದ ತಾಲೂಕು ಮೈದಾನದವರೆಗೆ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.

ಸ್ವಚ್ಛತಾ ಆಂದೋಲನ

ಮಡಿಕೇರಿ: ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಹಾಗೂ ಮಡಿಕೇರಿ ಕ್ಲಬ್ ಮಹೀಂದ್ರ ವತಿಯಿಂದ ನಗರದ ಗದ್ದಿಗೆಯಿಂದ ಖಾಸಗಿ ಬಸ್ ನಿಲ್ದಾಣದವರೆಗೆ ಸ್ವಚ್ಛತಾ ಆಂದೋಲನ ಕಾರ್ಯಕ್ರಮ ಜರುಗಿತು.

ನಗರಸಭಾ ಸದಸ್ಯೆ ಅನಿತಾ ಪೂವಯ್ಯ, ಕ್ಲಬ್ ಮಹೀಂದ್ರದ ಅಭಿಜಿತ್, ನವೀನ್, ಸಿಬ್ಬಂದಿಗಳು, ಕಾಲೇಜಿನ ವಿದ್ಯಾರ್ಥಿನಿಯರು ಇತರರು ಇದ್ದರು.

ಚೆಷೈರ್ ಹೋಂ ಆವರಣದಲ್ಲಿ ಶ್ರಮದಾನ

ಗೋಣಿಕೊಪ್ಪ ವರದಿ: ಪಾಲಿಬೆಟ್ಟ ಚೆಷೈರ್ ಹೋಂ ಅಂಗವಿಕಲ ಶಾಲೆಯ ಆವರಣದಲ್ಲಿ ಗೋಣಿಕೊಪ್ಪ ಕಾವೇರಿ ಪದವಿ ಕಾಲೇಜು ಎನ್.ಎಸ್.ಎಸ್. ಸೇವಕರು ಶ್ರಮದಾನ ಮಾಡುವ ಮೂಲಕ ಸ್ವಚ್ಛಗೊಳಿಸಿದರು.

ಆವರಣದಲ್ಲಿನ ಕಸ-ಕಡ್ಡಿ ಹೆಕ್ಕಿ ಸ್ವಚ್ಛಗೊಳಿಸಿದರು. ಈ ಸಂದರ್ಭ ಕಾವೇರಿ ಎಜುಕೇಶನ್ ಸೊಸೈಟಿ ಅಧ್ಯಕ್ಷ ಡಾ. ಎ.ಸಿ. ಗಣಪತಿ, ಎನ್.ಎಸ್.ಎಸ್. ಯೋಜನಾಧಿಕಾರಿಗಳಾದ ವನಿತ್‍ಕುಮಾರ್, ರೀತಾ, ಚೆಷೈರ್ ಹೋಂ ಶಿಕ್ಷಕ ಶಿವರಾಜ್ ಉಪಸ್ಥಿತರಿದ್ದರು.

ಸ್ವಚ್ಛತಾ ಕಾರ್ಯ

ಸುಂಟಿಕೊಪ್ಪ: ಮಡಿಕೇರಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳು ಬಸವನಹಳ್ಳಿಯ ಗಿರಿಜನ ಆಶ್ರಮ ಶಾಲೆಯಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಗುಡ್ಡೆಹೊಸೂರು ಗ್ರಾ.ಪಂ. ಅಧ್ಯಕ್ಷೆ ಕೆ.ಎಸ್. ಭಾರತಿ ಮಾತನಾಡಿ, ಮನೆಯಿಂದಲೇ ಸ್ವಚ್ಛತೆಗೆ ಆದ್ಯತೆ ನೀಡಿದರೆ ಮಾತ್ರ ಗ್ರಾಮ, ಊರು, ಪಟ್ಟಣ, ರಾಜ್ಯ ಹಾಗೂ ದೇಶದ ಸ್ವಚ್ಛತಾ ಅಭಿಯಾನ ಯಶಸ್ಸುಗೊಳ್ಳಲಿದೆ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ಗುಡ್ಡೆಹೊಸೂರು ಗ್ರಾ.ಪಂ. ಪಿಡಿಓ ಶ್ಯಾಮ್ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿ ಸತ್ಯನಾರಾಯಣ ಅವರು ಪ್ರಾಸ್ತಾವಿಕವಾಗಿ ಸ್ವಚ್ಛತೆಯಿಂದ ಆರೋಗ್ಯ ಹಾಗೂ ಪರಿಸರವನ್ನು ಕಾಪಾಡಬಹುದೆಂದರು.ಅಂಗನವಾಡಿಗೆ ಕೊಡುಗೆ

ಶನಿವಾರಸಂತೆ: ಪಟ್ಟಣದ ರೋಟರಿ ಸಂಸ್ಥೆ ವತಿಯಿಂದ ಶನಿವಾರಸಂತೆ ಹೋಬಳಿಯ ಅಂಗನವಾಡಿ ಮಕ್ಕಳಿಗೆ ಬ್ಲಾಂಕೆಟ್, ಕಾರ್ಪೆಟ್, ಬೆಡ್‍ಶೀಟ್‍ಗಳನ್ನು ಕೊಡುಗೆಯಾಗಿ ನೀಡಲಾಯಿತು.

ಅಧ್ಯಕ್ಷ ಟಿ.ಆರ್. ಪುರುಷೋತ್ತಮ್, ಕಾರ್ಯದರ್ಶಿ ಎ.ಡಿ. ಮೋಹನ್, ನಿರ್ದೇಶಕರು ಈ ಸಂದರ್ಭ ಹಾಜರಿದ್ದರು.

ಉಚಿತ ಸಮವಸ್ತ್ರ ವಿತರಣೆ

ನಾಪೆÇೀಕ್ಲು: ಸ್ಥಳೀಯ ಶ್ರೀರಾಮ ಟ್ರಸ್ಟ್ ಶಾಲೆಯಲ್ಲಿ ನಿರಾಶ್ರಿತರ ಇಬ್ಬರು ಮಕ್ಕಳಿಗೆ ಉಚಿತ ಶಿಕ್ಷಣವನ್ನು ನೀಡುತ್ತಿದ್ದು ನಾಪೆÇೀಕ್ಲು ಕೊಡವ ಸಮಾಜದ ರಿಕ್ರೀಯೆಷನ್ ಕ್ಲಬ್ ವತಿಯಿಂದ ಇಬ್ಬರು ಮಕ್ಕಳಿಗೆ ಉಚಿತವಾಗಿ ಸಮವಸ್ತ್ರ ಮತ್ತು ಪುಸ್ತಕಗಳನ್ನು ನೀಡಲಾಯಿತು. ಅದರಂತೆ ನಾಪೆÇೀಕ್ಲುವಿನ ರೆಸ್ಕ್ಯೋ ಟೀಂ ವತಿಯಿಂದ ಈ ಇಬ್ಬರು ಮಕ್ಕಳ ವಸತಿ ಖರ್ಚನ್ನು ವರ್ಷದವರೆಗೆ ನೀಡಲಾಗುವದು ಎಂದು ಟೀಂ ನ ಸದಸ್ಯರು ತಿಳಿಸಿದ್ದಾರೆ. ಸಮವಸ್ತ್ರ ವಿತರಣೆ ಸಂದರ್ಭ ಕೊಡವ ಸಮಾಜದ ರಿಕ್ರೀಯೆಷನ್ ಕ್ಲಬ್ ಅಧ್ಯಕ್ಷ ಕಾಂಡಂಡ ಜೋಯಪ್ಪ, ಶಾಲೆಯ ಅಧ್ಯಕ್ಷ ಬೊಪ್ಪಂಡ ಜಾಲಿ ಬೋಪಯ್ಯ, ಕಲಿಯಾಟಂಡ ರಮೇಶ್, ಕಲಿಯಂಡ ಹ್ಯಾರಿ ಮಂದಣ್ಣ, ಶಿವಚಾಳಿಯಂಡ ಅಂಬಿ ಕಾರ್ಯಪ್ಪ, ಮಣವಟ್ಟೀರ ದಯ ಕುಟ್ಟಪ್ಪ, ನಾಯಕಂಡ ದೀಪು ಚಂಗಪ್ಪ, ಶಾಲೆಯ ಪ್ರಾಂಶುಪಾಲೆ ಕಲಿಯಾಟಂಡ ಶಾರದ ಮತ್ತಿತರರು ಇದ್ದರು.

ಶಾಲೆಗೆ ಉದಾರ ಕೊಡುಗೆ

ಮಡಿಕೇರಿ: ಗೋಣಿಕೊಪ್ಪಲು ಸಮೀಪದ ಕೈಕೇರಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಕೈಕೇರಿಯ ತಾಪನೇರ ಕಾವೇರಪ್ಪ ಅವರು ತಮ್ಮ ಪತಿ ನಂಜಪ್ಪ ಅವರ ಜ್ಞಾಪಕಾರ್ಥ ಸಂಗೀತ ಉಪಕರಣಗಳನ್ನು ಕೊಡುಗೆಯಾಗಿ ನೀಡಿದರು. ಈ ಸಂದರ್ಭ ಕೈಕೇರಿಯ ಸವಿತಾ ಸಮಾಜದವರು ಶಾಲೆಗೆ ರಾಷ್ಟ್ರ ನಾಯಕರ ಭಾವಚಿತ್ರಗಳನ್ನು, ವಿದ್ಯಾರ್ಥಿಗಳಿಗೆ ಲೇಖನಿ ಸಾಮಗ್ರಿಗಳನ್ನು ನೀಡಿದರು. ಶಾಲೆಯ ಮುಖ್ಯ ಶಿಕ್ಷಕಿ ಅನ್ನಮ್ಮ, ಸಹ ಶಿಕ್ಷಕಿ ಜಯಂತಿ ಉಪಸ್ಥಿತರಿದ್ದರು.ರಾಜ್ಯಶಾಸ್ತ್ರ ಸಂಘ ಉದ್ಘಾಟನೆ

ವೀರಾಜಪೇಟೆ: ವಿದ್ಯಾರ್ಥಿಗಳು ರಾಜ್ಯಶಾಸ್ತ್ರ ಅಧ್ಯಯನ ಮಾಡುವ ಮೂಲಕ ಮೂಲ ತತ್ವವಾದ ಸಮಾನತೆ, ಸ್ವಾತಂತ್ರ್ಯ, ನ್ಯಾಯವನ್ನು ಎತ್ತಿ ಹಿಡಿಯಬೇಕು ಎಂದು ವೀರಾಜಪೇಟೆ ಪೆÇಲೀಸ್ ವೃತ್ತ ನಿರೀಕ್ಷಕ ಕುಮಾರ್ ಆರಾಧ್ಯ ಅಭಿಪ್ರಾಯಪಟ್ಟರು.

ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ರಾಜ್ಯ ಶಾಸ್ತ್ರ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಗಿಡಕ್ಕೆ ನೀರು ಹಾಕುವ ಮೂಲಕ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪೆÇಸ್ಕೊ ಕಾಯ್ದೆ ಪ್ರಕಾರ 18 ವರ್ಷದ ಒಳಗಿನವರು ತಪ್ಪು ಮಾಡಿದರೇ ಬಾಲ ಅಪರಾಧಿಗಳಾಗುತ್ತಾರೆ. ಆದ್ದರಿಂದ ಕಾನೂನು ಅರಿತು ಭಾರತದ ಸಂವಿಧಾನಕ್ಕೆ ಅನುಗುಣವಾಗಿ ಬದುಕು ಸಾಗಿಸಬೇಕು ಎಂದು ಅಭಿಪ್ರಾಯಪಟ್ಟರು.

ಕಾಂiÀರ್iಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಟಿ.ಕೆ. ಬೋಪಯ್ಯ ಮಾತನಾಡಿ, ರಾಜ್ಯಶಾಸ್ತ್ರದಲ್ಲಿ ಅರೀಟ್ರೋಕ್ರಾಸ್ಟ್ ಪೆÇ್ರೀಟೋಕ್ರಾಸ್ಟ್ ಡೆಮೋಕ್ರಾಟ್ಟ್‍ಗಳನ್ನು ಅಧ್ಯಯನ ಮಾಡಿ ಈಗ ನಾವು ಪ್ರಜಾಪ್ರಭುತ್ವ ಕಾಲದಲ್ಲಿ ರಾಜ್ಯ-ಸರ್ಕಾರ ಕುರಿತು ಅಧ್ಯಯನ ಮಾಡುವದಲ್ಲದೆ ಜನರ ಸರ್ಕಾರದಲ್ಲಿ ನಾವು ಪ್ರಶ್ನೆ ಮಾಡುವ ಹಕ್ಕು ಪಡೆದಿದ್ದೇವೆ ಎಂದರು.

ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಆರ್. ದಿವ್ಯ ನಾಯಕರಾಗಿ ಆಯ್ಕೆಯಾದ ಉಪಾಧ್ಯಕ್ಷ ಕಾರ್ತಿಕ್, ಕಾರ್ಯದರ್ಶಿ ಮಧುರ, ಸಹ ಕಾರ್ಯದರ್ಶಿಗಳಾದ ಪ್ರಜ್ವಲ್, ಯಶಸ್ವಿನಿ, ಜಂಟಿ ಕಾರ್ಯದರ್ಶಿಗಳಾದ ಭರತ್, ಸ್ವಾತಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಉಪನ್ಯಾಸಕರಾದ ಎಂ.ಎನ್. ವನಿತ್ ಕುಮಾರ್ ಸ್ವಾಗತಿಸಿದರೆ, ವೇಣುಗೋಪಾಲ ವಂದಿಸಿದರು. ಈ ಸಂದರ್ಭ ಕಾಲೇಜಿನ ಉಪನ್ಯಾಸಕರಾದ ಪೆÇನ್ನಪ್ಪ, ಸತೀಶ್ ಹಾಗೂ ರಾಜ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಅಕ್ಷರ ದಾಸೋಹ ಕೊಠಡಿ ಉದ್ಘಾಟನೆ

ಸಿದ್ದಾಪುರ: ನೆಲ್ಲಿಹುದಿಕೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನ ಅಕ್ಷರ ದಾಸೋಹ ಅಡುಗೆ ಕೋಣೆಯನ್ನು ಜಿಲ್ಲಾ ಪಂಚಾಯಿತಿ ಸದಸ್ಯೆ ಸುನಿತಾ ಮಂಜುನಾಥ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ತಾ.ಪಂ ಸದಸ್ಯೆ ಸುಹಾದ, ಗ್ರಾ.ಪಂ ಉಪಾಧ್ಯಕ್ಷೆ ಸಫಿಯಾ, ಸದಸ್ಯರಾದ ಶಶಿ ಹಾಗೂ ಶಾಲಾ ಶಿಕ್ಷಕರು, ಶಾಲಾಭಿವೃದ್ಧಿ ಸದಸ್ಯರುಗಳು ಹಾಜರಿದ್ದರು.