ಸೋಮವಾರಪೇಟೆ, ಸೆ. 29: ಜಿಲ್ಲೆಯ ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ವಿಸ್ತರಿಸಿರುವ ಏಳ್‍ನಾಡಿನಾದ್ಯಂತ ಪ್ರಸಕ್ತ ಸಾಲಿನ ಪ್ರಾಕೃತಿಕ ವಿಕೋಪ ದಿಂದ ಭಾರೀ ಪ್ರಮಾಣದ ಆಸ್ತಿ, ಪಾಸ್ತಿ, ಜೀವ ಹಾನಿ ಸಂಭವಿಸಿದ್ದರೂ ಅಧಿಕಾರಿ ಗಳಿಂದ ಪರಿಶೀಲನೆ-ಪರಿಹಾರ ವಿತರಣೆ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಏಳ್‍ನಾಡ್ ಕೊಡವ ಸಂಘದ ಸ್ಥಾಪಕಾಧ್ಯಕ್ಷ ಮತ್ತು ಹೋರಾಟ ಸಮಿತಿ ಸಂಚಾಲಕ ಉದಿಯಂಡ ಯಂ. ಮುದ್ದಯ್ಯ ಆರೋಪಿಸಿದ್ದಾರೆ.

ಪತ್ರಿಕಾಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾರಂಗಿ ಅಣೆಕಟ್ಟೆಯ ಅವೈಜ್ಞಾನಿಕ ನಿರ್ವಹಣೆಯಿಂದಾಗಿ ಭಾರೀ ಪ್ರಮಾಣದ ಭೂಕುಸಿತ, ವಿಕೋಪಗಳು ಸಂಭವಿಸಿವೆ ಎಂದು ಅಭಿಪ್ರಾಯಿಸಿದರು. ಹಾರಂಗಿ ಅಣೆಕಟ್ಟೆಗೆ ಏಳ್‍ನಾಡು ಪ್ರದೇಶದ ಹೆಬ್ಬೆಟ್ಟಗೇರಿ, ಕಾಲೂರು, ದೇವಸ್ತೂರು, ಹಚ್ಚಿನಾಡು, ಹಮ್ಮಿಯಾಲ, ಮುಟ್ಲು, ಸೂರ್ಲಬ್ಬಿ, ಕುಂಬಾರಗಡಿಗೆ, ಮುಕ್ಕೋಡ್ಲು, ಗರ್ವಾಲೆ, ಶಿರಂಗಳ್ಳಿ, ಮೂವತ್ತೊಕ್ಲು, ಮಾದಾಪುರ, ಹಟ್ಟಿಹೊಳೆ ಮುಂತಾದ ಪ್ರದೇಶಗಳು ಒಳಪಡುತ್ತಿದ್ದು, ಈ ಭಾಗದಲ್ಲಿ ಸುರಿಯುವ ಮಳೆ, ಹರಿ ಯುವ ಜಲತೊರೆಗಳು ಮಾದಾಪುರ ಮತ್ತು ಹಟ್ಟಿಹೊಳೆ ಮೂಲಕ ಹಾರಂಗಿ ಆಣೆಕಟ್ಟು ಸೇರುತ್ತಿದೆ. ಪ್ರಸಕ್ತ ವರ್ಷ ಭಾರೀ ಮಳೆಯಾಗಿ ಸೂಕ್ತ ಸಮಯದಲ್ಲಿ ಜಲಾಶಯದಿಂದ ನೀರನ್ನು ಹೊರಬಿಡದ ಪರಿಣಾಮ ಅಂತರ್ಜಲ ಹೆಚ್ಚಾಗಿ ಬೆಟ್ಟಗುಡ್ಡ, ತೋಟ, ಮನೆ, ರಸ್ತೆಗಳು ಕುಸಿದಿವೆ ಎಂದು ಬೊಟ್ಟು ಮಾಡಿದರು.

ಅಣೆಕಟ್ಟನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸದ ಹಿನ್ನೆಲೆ ಇಷ್ಟೊಂದು ಪ್ರಮಾಣದಲ್ಲಿ ಹಾನಿಗಳು ಸಂಭವಿಸಿವೆ ಮುಕ್ಕೋಡ್ಲು, ಗರ್ವಾಲೆ, ಶಿರಂಗಳ್ಳಿ, ಮೂವತ್ತೊಕ್ಲು, ಮಾದಾಪುರ, ಹಟ್ಟಿಹೊಳೆ ಮುಂತಾದ ಪ್ರದೇಶಗಳು ಒಳಪಡುತ್ತಿದ್ದು, ಈ ಭಾಗದಲ್ಲಿ ಸುರಿಯುವ ಮಳೆ, ಹರಿ ಯುವ ಜಲತೊರೆಗಳು ಮಾದಾಪುರ ಮತ್ತು ಹಟ್ಟಿಹೊಳೆ ಮೂಲಕ ಹಾರಂಗಿ ಆಣೆಕಟ್ಟು ಸೇರುತ್ತಿದೆ. ಪ್ರಸಕ್ತ ವರ್ಷ ಭಾರೀ ಮಳೆಯಾಗಿ ಸೂಕ್ತ ಸಮಯದಲ್ಲಿ ಜಲಾಶಯದಿಂದ ನೀರನ್ನು ಹೊರಬಿಡದ ಪರಿಣಾಮ ಅಂತರ್ಜಲ ಹೆಚ್ಚಾಗಿ ಬೆಟ್ಟಗುಡ್ಡ, ತೋಟ, ಮನೆ, ರಸ್ತೆಗಳು ಕುಸಿದಿವೆ ಎಂದು ಬೊಟ್ಟು ಮಾಡಿದರು.

ಅಣೆಕಟ್ಟನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸದ ಹಿನ್ನೆಲೆ ಇಷ್ಟೊಂದು ಪ್ರಮಾಣದಲ್ಲಿ ಹಾನಿಗಳು ಸಂಭವಿಸಿವೆ ಪರಿಹಾರ ನೀಡಲಾಗಿದೆ. ಇಂತಹ ತಾರತಮ್ಯ ನಿಲ್ಲಬೇಕು. ಈ ಮಧ್ಯೆ ಕೆಲವು ರಿಯಲ್ ಎಸ್ಟೇಟ್‍ನ ದಲ್ಲಾಳಿಗಳು ಈ ಭಾಗದ ಜನರ ಬಳಿ ಬಂದು ಒಕ್ಕಲೆಬ್ಬಿಸುವ ಕುತಂತ್ರ ನಡೆಸುತ್ತಿದ್ದಾರೆ. ತಮ್ಮ ಜಮೀನುಗಳನ್ನು ಮಾರಾಟ ಮಾಡಿ ಬೇರೆಡೆ ತೆರಳುವಂತೆ ಆಮಿಷ ಒಡ್ಡುತ್ತಿದ್ದು, ಇಂತವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸ ಲಾಗುವದು ಎಂದು ಎಚ್ಚರಿಸಿದರು.

ಹಾರಂಗಿ ಹಿನ್ನೀರಿನಿಂದಾಗಿ ಅನಾಹುತ ಸಂಭವಿಸಿರುವ ಬಗ್ಗೆ ತಜ್ಞರು ಅಭಿಪ್ರಾಯಿಸಿದ್ದಾರೆ. ಈ ಹಿನ್ನೆಲೆ ಪ್ರಸಕ್ತ ಸಾಲಿನಲ್ಲಿ ಉಂಟಾದ ಪ್ರಾಕೃತಿಕ ವಿಕೋಪ, ಹಾರಂಗಿ ಹಿನ್ನೀರು ಪ್ರದೇಶಕ್ಕೆ ನೀರು ಹರಿಸುತ್ತಿರುವ ಏಳ್‍ನಾಡು ಪ್ರದೇಶದ ಭೌಗೋಳಿಕ ಸ್ಥಿತಿಗತಿಗಳ ಸಮಗ್ರ ಅಧ್ಯಯನ ನಡೆಸಿ, ಸರ್ಕಾರದಿಂದ ಹೆಚ್ಚಿನ ಪರಿಹಾರ ಒದಗಿಸುವ ನಿಟ್ಟಿನಲ್ಲಿ ತಜ್ಞರ ಸಮಿತಿಯನ್ನು ರಚಿಸಬೇಕೆಂದು ಉದಿಯಂಡ ಮುದ್ದಪ್ಪ ಸರ್ಕಾರವನ್ನು ಒತ್ತಾಯಿಸಿದರು. ಕುಂಬಾರಗಡಿಗೆ ಗ್ರಾಮ ವೊಂದರಲ್ಲೇ 5 ಮನೆಗಳು ಸಂಪೂರ್ಣ ಹಾಳಾಗಿದೆ. ಈ ಭಾಗದಲ್ಲಿ ಕೃಷಿಯೂ ನಷ್ಟವಾಗಿದೆ. ಅಧಿಕಾರಿಗಳು ಮೊಬೈಲ್ ಆ್ಯಪ್ ಮೂಲಕ ಮಾಡುತ್ತಿರುವ ಸರ್ವೆ ಸಮರ್ಪಕವಾಗಿಲ್ಲ.

ಆರ್‍ಟಿಸಿ ಯಲ್ಲಿರುವ ದೋಷದಿಂದಾಗಿ ನಾವುಗಳು ತೊಂದರೆ ಅನುಭವಿಸು ವಂತಾಗಿದೆ. ಇದನ್ನು ತಾಲೂಕು ತಹಶೀಲ್ದಾರ್ ಪರಿಹರಿಸಬೇಕು ಎಂದು ಗೋಷ್ಠಿಯಲ್ಲಿದ್ದ ಸೂರ್ಲಬ್ಬಿ ಗ್ರಾಮದ ಕನ್ನಿಗಂಡ ಜಯಂತಿ ಒತ್ತಾಯಿಸಿದರು.

ಹಾರಂಗಿ ಅಣೆಕಟ್ಟು ಹಿನ್ನೀರ ದುಷ್ಪರಿಣಾಮ ಹೋರಾಟ ಸಮಿತಿಯ ಕಾರ್ಯಾಧ್ಯಕ್ಷ ಚಾಮೇರ ಕಾರ್ಯಪ್ಪ, ಮಂಕ್ಯ ಗ್ರಾಮದ ಚಾಮೇರ ಮಂದಣ್ಣ, ಮುಕ್ಕೋಡ್ಲಿನ ಆವಂಡಿ ಗ್ರಾಮದ ಕನ್ನಿಗಂಡ ಪೂವಯ್ಯ ಅವರುಗಳು ಗೋಷ್ಠಿಯಲ್ಲಿದ್ದರು.