ಸುಂಟಿಕೊಪ್ಪ, ಸೆ. 27: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸುಂಟಿಕೊಪ್ಪದ 59ನೇ ವಾರ್ಷಿಕ ಮಹಾಸಭೆಯಲ್ಲಿ ಪ್ರಕೃತಿ ವಿಕೋಪದಿಂದ ಮನೆ,ಮಠ ತೋಟ ಗದ್ದೆ ಕಳಕೊಂಡ ಸಂತ್ರಸ್ತರಿಗೆ ರೂ. 10 ಲಕ್ಷ ಪರಿಹಾರವನ್ನು ಡಿಸಿಸಿ ಬ್ಯಾಂಕ್ ಪ್ರಕೃತಿ ವಿಪತ್ತು ನಿಧಿಗೆ ಸಲ್ಲಿಸಲು ಒಮ್ಮತದ ತೀರ್ಮಾನವನ್ನು ಸದಸ್ಯರುಗಳು ಕೈಗೊಂಡರು.

ಇಲ್ಲಿನ ಗುಂಡುಗುಟ್ಟಿ ಮಂಜುನಾಥಯ್ಯ ಸಹಕಾರ ಭವನದಲ್ಲಿ ಸಂಘದ ಆಡಳಿತಾಧಿಕಾರಿ ಎಂ.ಎ. ಮೋಹನ ಅವರ ಅಧ್ಯಕ್ಷತೆಯಲ್ಲಿ ಮಾಜಿ ವಿಎಸ್‍ಎಸ್‍ಎನ್ ಬ್ಯಾಂಕ್ ಅಧ್ಯಕ್ಷ ಎನ್.ಸಿ. ಪೊನ್ನಪ್ಪ ಅವರ ನೇತೃತ್ವದಲ್ಲಿ ನಡೆದ ಮಹಾಸಭೆಯಲ್ಲಿ 2017-2018ನೇ ಸಾಲಿನಲ್ಲಿ 42 ಲಕ್ಷದ 5 ಸಾವಿರದ 371 ರೂ. ಲಾಭ ಸಂಘ ಗಳಿಸಿದ್ದು ಸದಸ್ಯರುಗಳಿಗೆ ಶೇ. 18 ರಷ್ಟು ಡಿವಿಡೆಂಡ್ ನೀಡಲಾಗುತ್ತಿದೆ ಎಂದು ಪೊನ್ನಪ್ಪ ಸಭೆಗೆ ತಿಳಿಸಿದರು. ಸದಸ್ಯ ಮೊಟ್ಟನ ಕರುಣ್ ಎಂ.ಎನ್. ಮೊಣ್ಣಪ್ಪ ಮಾತನಾಡಿ ಶೇ. 18 ಡೆವಿಡೆಂಡ್ ಬದಲಾಗಿ ಶೇ. 20 ಡಿವಿಡೆಂಡ್ ನೀಡಿ ಎಂದು ಆಗ್ರಹಿಸಿದರು. ಪೊನ್ನಪ್ಪ ಉತ್ತರಿಸಿ ಮುಂದಿನ ಆಡಳಿತ ಮಂಡಳಿ ಬಂದಾಗ ಡಿವಿಡೆಂಡ್ ಹೆಚ್ಚಳ ಮಾಡಲಿದೆ; ಈಗ ಸದ್ಯಕ್ಕೆ ಇಷ್ಟೇ ಸಾಕು ಎಂದು ಹೇಳಿದರು. ಶೇ. 20 ಡಿವಿಡೆಂಡ್ ನೀಡಿ ಅದನ್ನು ಕೊಡಗಿನಲ್ಲಿ ಅತಿವೃಷ್ಟಿಯಿಂದ ನೊಂದ ರೈತರಿಗೆ ಸದಸ್ಯರುಗಳು ನೀಡು ವಂತಾಗಲಿ ಎಂದು ಮೊಟ್ಟನ ಕರುಣ್ ಹೇಳಿದಾಗ ಸಭೆ ಒಪ್ಪಿಗೆ ನೀಡಿತು.

ಷೆÉೀರು ಹಣ 3 ಕೋಟಿಗೆ, ಮರಣ ನಿಧಿ 20,000 ರೂ.ಗೆ ಹೆಚ್ಚಿಸಲು ಬೈಲಾ ತಿದ್ದುಪಡಿಗೆ ಹಳೆಯ ಆಡಳಿತ ಮಂಡಳಿ ಸೂಚಿಸಿದಾಗ ಸದಸ್ಯರು ಚರ್ಚಿಸಿ ಸಹಮತ ನೀಡಿದರು. 2017-2018ನೇ ಸಾಲಿನಲ್ಲಿ ಸಂಘದ ವ್ಯಾಪ್ತಿಗೆ ಬರುವ ಸರಕಾರಿ ಪ್ರೌಢಶಾಲೆಯ 10ನೇ ತರಗತಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ತಲಾ 2 ವಿದ್ಯಾಥಿರ್üಗಳಿಗೆ ಬಹುಮಾನ ನೀಡುತ್ತಿದ್ದು, ಸಂಘದ ಸದಸ್ಯರುಗಳ ಮಕ್ಕಳು ಹೆಚ್ಚು ಅಂಕಗಳಿಸಿ ಉತ್ತೀರ್ಣ ವಾದವರಿಗೂ ಹೆಚ್ಚುವರಿಯಾಗಿ ನಗದು ಬಹುಮಾನ ನೀಡಬೇಕೆಂದು ಸದಸ್ಯ ಕರುಣ್ ಮಾಜಿ ನಿರ್ದೇಶಕ ಜಿರ್ಮಿಡಿಸೋಜ ಒತ್ತಾಯಿಸಿದರು. ಮುಂದಿನ ಸಾಲಿನಲ್ಲಿ ಇದಕ್ಕೆ ಅಸ್ತು ನೀಡಲಾಗುವದೆಂದು ಪೊನ್ನಪ್ಪ ಹೇಳಿದರು. 5 ವಾರ್ಷಿಕ ಸಭೆಯಲ್ಲಿ ಕನಿಷ್ಟ 3 ವಾರ್ಷಿಕ ಸಭೆಗೆ ಸದಸ್ಯರುಗಳು ಭಾಗವಹಿಸಬೇಕು. ಇಲ್ಲದಿದ್ದಲ್ಲಿ ಸರಕಾರದ ಸುತ್ತೋಲೆ ಪ್ರಕಾರ ಅಂತಹ ಸದಸ್ಯರು ಮತದಾನದಿಂದ ವಂಚಿತರಾಗುತ್ತಾರೆ ಎಂದು ಸಭೆಗೆ ಅಧ್ಯಕ್ಷರು ಮಾಹಿತಿ ನೀಡಿದರು. 5 ವಾರ್ಷಿಕ ಮಹಾಸಭೆ ಯಲ್ಲಿ ಭಾಗವಹಿಸಿದರೂ ತಮಗೆ ಮುಂದಿನ ಚುನಾವಣೆÉಯಲ್ಲಿ ಮತದಾನಕ್ಕೆ ಅವಕಾಶ ಇಲ್ಲದಾಗಿದೆ ಎಂದು ಕೆಲ ಸದಸ್ಯರುಗಳು ಆಕ್ಷೇಪ ವ್ಯಕ್ತಪಡಿಸಿದರು. 2016-17ನೇ ಸಾಲಿನಲ್ಲಿ ಉತ್ತಮ ಕಾರ್ಯ ನಿರ್ವಹಣೆಗಾಗಿ ಡಿಸಿಸಿ ಬ್ಯಾಂಕಿನಿಂದ ತಾಲೂಕು ಮಟ್ಟದ ಪ್ರಥಮ ಬಹುಮಾನ 15 ಸಾವಿರ ಮತ್ತು ಪ್ರಶಸ್ತಿ ಪತ್ರ ಲಭಿಸಿದೆ ಎಂದು ಪೊನ್ನಪ್ಪ ತಿಳಿಸಿದರು. ಕಳೆದ ಸಾಲಿನಲ್ಲಿ ದ್ವಿತೀಯ ಪಿಯುಸಿ 10ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾಥಿರ್üಗಳಿಗೆ ಪ್ರೋತ್ಸಾಹಕರ ಬಹುಮಾನ ನೀಡ ಲಾಯಿತು. ವೇದಿಕೆಯಲ್ಲಿ ಮಾಜಿ ಉಪಾಧ್ಯಕ್ಷ ಎಂ.ಎ. ಕುಟ್ಟಪ್ಪ, ಮಾಜಿ ನಿರ್ದೇಶಕರುಗಳಾದ ಎಸ್.ಪಿ. ನಿಂಗಪ್ಪ, ಕೆ.ಎಸ್. ಮಂಜುನಾಥ್, ಎ.ಪಿ. ಲೀಲಾವತಿ, ವೈ.ಎಲ್. ತಾರಾ ಮಣಿ, ಡಾಸಂಡ ರಮೇಶ್ ಚಂಗಪ್ಪ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎನ್.ಎಸ್. ಪ್ರತಾಪ, ಇದ್ದರು. ಪ್ರಿಯಾಂಕ ಪ್ರಾಥಿರ್üಸಿದರು. ಪೊನ್ನಪ್ಪ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಯಾಡಿದರು.