ಗುಡ್ಡೆಹೊಸೂರು, ಸೆ. 27: ಇಲ್ಲಿಗೆ ಸಮೀಪದ ಬಸವನಹಳ್ಳಿಯ ಗಿರಿಜನ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಅಲ್ಲಿನ ಸಹಕಾರಿ ಸಂಘದ ಆವರಣದಲ್ಲಿ ಸಂಘದ ಅಧ್ಯಕ್ಷ ಎಸ್.ಎನ್. ರಾಜಾರಾವ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಸಣ್ಣಯ್ಯ ಮತ್ತು ನಿರ್ದೇಶಕರುಗಳಾದ ಸಿ.ಕೆ. ಉದಯಕುಮಾರ್ ಗಂಗಾಧರ, ಬಿ.ಕೆ. ಮೋಹನ್, ಜೆ.ಜೆ. ಕಾಳಿಂಗ, ಬಿ.ಸಿ. ಸುಲೋಚನ, ಸವಿತಾ, ರಾಮನಾಥ್ ಸಿದ್ದಿ, ಪ್ರತಿನಿಧಿ ಲ್ಯಾಂಪ್ಸ್ ಮಹಾಮಂಡಳಿ ಮೈಸೂರು ಇವರು ಹಾಜರಿದ್ದರು.

ಸಂಘದ ಅಧ್ಯಕ್ಷ ರಾಜ್‍ರಾವ್ ಮಾತನಾಡಿ, 6 ವರ್ಷಗಳಿಂದ ಒಟ್ಟು ರೂ. 7.99 ಕೋಟಿ ವ್ಯವಹಾರ ನಡೆಸಿ ಒಟ್ಟು ರೂ. 52 ಲಕ್ಷ ಲಾಭದಲ್ಲಿದೆ ಎಂದು ತಿಳಿಸಿದರು.

ಅಲ್ಲದೆ ಗಿರಿಜನ ಸದಸ್ಯರಿಂದ ಸೀಗೆಕಾಯಿ, ಅಂಟುವಾಳ, ಪಾಚಿ, ಜೇನು-ತುಪ್ಪ, ಸಂಗ್ರಹ ಮಾಡಿ ರೂ. 16.38 ಲಾಭ ಮಾಡಲಾಗಿದೆ ಎಂದರು. ಬಿ.ಕೆ. ಮೋಹನ್ ನಿರೂಪಿಸಿ, ಯಶವಂತ್ ಸ್ವಾಗತಿಸಿ, ಸಂಘದ ಕಾರ್ಯದರ್ಶಿ ಬಿ.ಜಿ. ಹನಿಕುಮಾರ್ ವಂದಿಸಿದರು.