ಮಡಿಕೇರಿ, ಸೆ. 27: ಇತ್ತೀಚಿಗೆ ಕುಶಾಲನಗರದ ಕೂಡಿಗೆ ಡಯಟ್ನಲ್ಲಿ ನಡೆದ ಜಿಲ್ಲಾಮಟ್ಟದ ವಿಜ್ಞಾನ ವಿಚಾರಗೋಷ್ಠಿಯಲ್ಲಿ ವೀರಾಜಪೇಟೆ ಕಾವೇರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಆಶಿಕಾ ರಾಯ್ ಪ್ರಥಮ ಸ್ಥಾನ ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಇವರು ಶರ್ಮಿಳಾ ಮತ್ತು ರಾಯ್ ಸಲ್ಡಾನ ದಂಪತಿಯರ ಪುತ್ರಿ. ಶಾಲಾ ಪ್ರಾಶುಂಪಾಲ ಪಿ.ಎನ್. ವಿನೋದ್, ಮುಖ್ಯ ಶಿಕ್ಷಕಿ ಚಿನ್ನಮ್ಮ, ಮಾರ್ಗದರ್ಶಿ ಶಿಕ್ಷಕಿಯರಾದ ಸಿ.ಡಿ. ಲೀನಾ ಮತ್ತು ಎ.ಪಿ. ನಿರೀಕ್ಷಾ ಚಿತ್ರದಲ್ಲಿದ್ದಾರೆ.