ಗೋಣಿಕೊಪ್ಪ ವರದಿ, ಸೆ. 27: ಪದವಿಪೂರ್ವ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಇಲ್ಲಿನ ಕಾಪ್ಸ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ವೀರಾಜಪೇಟೆ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಕಾಪ್ಸ್ ತಂಡ ಹಲವು ಪ್ರಶಸ್ತಿ ಪಡೆದುಕೊಂಡವು.

ಬಾಲಕರ ಟಿ.ಟಿ.ಯಲ್ಲಿ ಕಾಪ್ಸ್ ತಂಡ ಪ್ರಥಮ, ಚೆಸ್‍ನಲ್ಲಿ ಪ್ರಥಮ, ಟೆನ್ನಿಕಾಯ್ಟ್‍ನಲ್ಲಿ ದ್ವಿತೀಯ, ಬಾಲಕಿಯರಲ್ಲಿ ಶಟಲ್‍ಬ್ಯಾಡ್‍ಮಿಂಟನ್‍ನಲ್ಲಿ ಪ್ರಥಮ, ಟೆನ್ನಿಕಾಯ್ಟ್‍ನಲ್ಲಿ ಪ್ರಥಮ, ಚೆಸ್‍ನಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡರು. ಪಾಲಿಬೆಟ್ಟ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ನಡೆದ ಬಾಲಕಿಯರ ಥ್ರೋಬಾಲ್ ತಂಡ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದರು.