ಶ್ರೀಮಂಗಲ, ಸೆ. 27: ಜಿಲ್ಲೆಯ ಬೆಳೆಗಾರರು 2 ದಶಕಗಳಿಗೂ ಹೆಚ್ಚು ಕಾಲದಿಂದ ಕಾಫಿ ದರ ಅಸ್ಥಿರತೆ, ಕಳೆದ 2 ವರ್ಷದಿಂದ ದಿಢೀರ್ ಆಗಿ ಕರಿ ಮೆಣಸು ದರ ಶೇ. 50 ಕ್ಕಿಂತ ಕುಸಿತದೊಂದಿಗೆ ಸಂಕಷ್ಟದಲ್ಲಿದ್ದಾರೆ. ಇದರೊಂದಿಗೆ ಈ ವರ್ಷ ಸುರಿದ ಮಹಾಮಳೆಯಿಂದ ಆಸ್ತಿ ಪಾಸ್ತಿ ನಷ್ಟದೊಂದಿಗೆ ತೀವ್ರ ಬೆಳೆ ನಷ್ಟಗೊಂಡಿದ್ದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಆದ್ದರಿಂದ ಸಹಕಾರ ಸಂಘ, ರಾಷ್ಟ್ರಿಕೃತ ಬ್ಯಾಂಕ್ ಮತ್ತು ಖಾಸಗಿ ಬ್ಯಾಂಕ್‍ಗಳಲ್ಲಿ ಬೆಳೆಗಾರರು ಹೊಂದಿರುವ ಸಂಪೂರ್ಣ ಸಾಲ, ಆಭರಣ ಸಾಲ ಸೇರಿದಂತೆ ಫಸಲು ಅಡಮಾನ ಸಾಲಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಮನ್ನಾ ಮಾಡುವಂತೆ ಕೊಡಗು ಬೆಳೆಗಾರರ ಒಕ್ಕೂಟ ಒತ್ತಾಯಿಸಿದೆ.

ಗೋಣಿಕೊಪ್ಪ ಸಿಲ್ವರ್ ಸ್ಕೈ ಹೊಟೇಲ್ ಸಭಾಂಗಣದಲ್ಲಿ ನಡೆದ ಒಕ್ಕೂಟದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.

ಕೊಡಗು ಅತೀವೃಷ್ಟಿ ಪೀಡಿತ ಗ್ರಾಮಗಳ ಮತ್ತು ಪ್ರಕೃತಿ ವಿಕೋಪಕ್ಕೆ ತುತ್ತಾದ ಗ್ರಾಮಗಳ ಬೆಳೆಗಾರರಿಗೆ ಕನಿಷ್ಟ 5 ವರ್ಷ ಬಡ್ಡಿ ರಹಿತ ಸಾಲ ನೀಡಬೇಕು. ಸಂತ್ರಸ್ತ ಬೆಳೆಗಾರರು ಕಳೆದುಕೊಂಡಿರುವ ಗದ್ದೆ ಹಾಗೂ ತೋಟÀಗಳÀ ಪುನರ್ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಕಲ್ಪಿಸಬೇಕು. ಈ ನಿಟ್ಟಿನಲ್ಲಿ ತಾ. 28 ರಂದು (ಇಂದು) ಮಡಿಕೇರಿಯಲ್ಲಿ ಕರ್ನಾಟಕ ಕಾಫಿ ಬೆಳೆಗಾÀರರ ಒಕ್ಕೂಟ ಹಾಗೂ ಕೂರ್ಗ್ ಪ್ಲಾಂಟರ್ಸ್ ಅಸೊಸಿಯೇಷನ್ ನೇತೃತ್ವದಲ್ಲಿ ನಡೆಯುವ ಧರಣಿ ಸತ್ಯಾಗ್ರಹಕ್ಕೆ ಕೊಡಗು ಬೆಳೆಗಾರರ ಒಕ್ಕೂಟದಿಂದ ಸಂಪೂರ್ಣ ಬೆಂಬಲ ನೀಡಲು ನಿಧರ್Àರಿಸಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷ ಕೈಬಿಲಿರ ಹರೀಶ್ ಅಪ್ಪಯ್ಯ ವಹಿಸಿದ್ದರು. ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ, ಜಂಟಿ ಕಾರ್ಯದರ್ಶಿ ಬಾಚಂಗಡ ದಾದಾ ದೇವಯ್ಯ, ಖಜಾಂಜಿ ಮಾಣೀರ ವಿಜಂiÀi ನಂಜಪ್ಪ, ಸಲಹೆಗಾರ

ಒಕ್ಕೂಟದಿಂದ ಸಂಪೂರ್ಣ ಬೆಂಬಲ ನೀಡಲು ನಿಧರ್Àರಿಸಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷ ಕೈಬಿಲಿರ ಹರೀಶ್ ಅಪ್ಪಯ್ಯ ವಹಿಸಿದ್ದರು.