ಮಡಿಕೇರಿ, ಸೆ. 25 : ದೇಶದ ಭೂವಿಜ್ಞಾನಿಗಳ ಸಂಸ್ಥೆ ‘ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ’À (ಜಿ.ಎಸ್.ಐ.) ದಿಂದ ಕೊಡಗಿಗೆ ಆಗಮಿಸಿದ ಮೂವರು ಭೂವಿಜ್ಞಾನಿಗಳ ತಂಡ, ಜಿಲ್ಲೆಯ ಭೂಕುಸಿತ ಪ್ರದೇಶಗಳಿಗೆ ಆಗಸ್ಟ್ 27 ರಿಂದ ಸೆಪ್ಟೆಂಬರ್ 1 ರ ವರೆಗೆ ತೆರಳಿ ತಮ್ಮ ವೀಕ್ಷಣೆಗಳ ಪ್ರಾಥಮಿಕ ವರದಿಯನ್ನು ಜಿಲ್ಲಾಧಿಕಾರಿ ಶ್ರೀವಿದ್ಯಾ ಪಿ ಐ ರವರಿಗೆ ಸಲ್ಲಿಸಿದೆ. ಜಿ.ಎಸ್.ಐ.ನ ನಿರ್ದೇಶಕ ಕೆ.ವಿ ಮಾರುತಿ ಹಾಗೂ ಭೂವಿಜ್ಞಾನಿಗಳಾದ ಅಂಕುರ್ ಕುಮಾರ್ ಶ್ರೀವಾಸ್ತವ ಮತ್ತು ಸುನಂದನ್ ಬಾಸು ತಂಡ, ಜಿಲ್ಲೆಯ ಸುಮಾರು 85 ಭೂಕುಸಿತಗಳನ್ನು ವೀಕ್ಷಿಸಿ, ಸುಮಾರು 500 ಪುಟಗಳ ವರದಿ ಸಲ್ಲಿಸಿದೆ. ಈ ವರದಿಯಲ್ಲಿನ ಅಂಶಗಳ ಪ್ರಕಾರ ಕೊಡಗು ಜಿಲ್ಲೆಯಲ್ಲಿ ಸುರಿದ ಎಡೆಬಿಡದ ಮಳೆ ಮುಖ್ಯ ಕಾರಣ ಒಂದೆಡೆಯಾದರೆ ಜೊತೆಗೆ ಬೆಟ್ಟಗಳ ಇಳಿಜಾರು ಪ್ರದೇಶಗಳನ್ನು ಮಾರ್ಪಾಡು ಮಾಡಿದ ಮಾನವ ನಿರ್ಮಿತ ಕೃತಕತೆಯೂ ಭೂಕುಸಿತಕ್ಕೆ ಮುಖ್ಯ ಕಾರಣವಾಗಿದೆ ಎಂದು ತಿಳಿಸುತ್ತಾರೆ.ರಸ್ತೆ, ಮನೆ, ಹೊಟೇಲ್ ಹಾಗೂ ಹೋಂಸ್ಟೇಗಳ ನಿರ್ಮಾಣಕ್ಕೆ ಹಾಗೂ ಕಾಫಿ ತೋಟಗಳ ರಚನೆಗೆ ಬೆಟ್ಟಗಳ ಇಳಿಜಾರು ಪ್ರದೇಶಗಳನ್ನು ಮಾರ್ಪಾಡು ಮಾಡಲಾಗುತ್ತಿದ್ದು, ಇದು ಕೂಡ ಭೂಕುಸಿತಕ್ಕೆ ಮುಖ್ಯ ಕಾರಣವಾಗಿದೆ’ ಎಂದು ಈ ವಿಜ್ಞಾನಿಗಳ ವರದಿ ತಿಳಿಸುತ್ತದೆ. ಇದಲ್ಲದೆ, 20 ವರ್ಷಗಳಲ್ಲಿ ಜಿಲ್ಲೆ ಕಾಣದ ಧಾರಾಕಾರ ಮಳೆಯು ಸೇರಿದಂತೆ, ಮಾನವ ನಿರ್ಮಿತ ಕಾರಣಗಳೂ ಜೊತೆಗೂಡಿ ಭೂಕುಸಿತಕ್ಕೆ ದಾರಿ ಮಾಡಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆÉ.

ಮಡಿಕೇರಿ ಇಂದಿರಾನಗರ ಬಡಾವಣೆಯ ಉದಾಹರಣೆ ನೀಡುವದರೊಂದಿಗೆ, ಕಾಫಿ ತೋಟ ನಿರ್ಮಿಸಲು ಮಾಡುವ ಇಳಿಜಾರಿನ ಮಾರ್ಪಾಡುವಿಕೆ, ನೀರಿನ ಸಹಜ ಹರಿಯುವಿಕೆಯನ್ನು ತಡೆಗಟ್ಟುತ್ತಿದೆ. ಅಲ್ಲದೆ, ನೀರಿನ ಒತ್ತಡ ಹೆಚ್ಚಿಸಿ ಭೂಕುಸಿತಕ್ಕೆ ದಾರಿ ನೀಡಿರಬಹುದು ಎಂದು ವಿಜ್ಞಾನಿಗಳು ತಮ್ಮ ವರದಿಯಲ್ಲಿ ತಿಳಿಸುತ್ತಾರೆ.

ಅಷ್ಟೇಯಲ್ಲ, ಹೆಚ್ಚಾಗಿ ತೋಟಗಳಲ್ಲಿ ನಿರ್ಮಿಸಲ್ಪಡುತ್ತಿರುವ ಟ್ಯಾಂಕ್ ಹಾಗು ಕೊಳಗಳಲ್ಲಿನ ನೀರು ಸೋರುವಿಕೆಯಿಂದಲೂ ಭೂ ಭಾಗಗಳು ಕುಸಿದಿವೆ ಎಂದು ವರದಿ ತಿಳಿಸುತ್ತದೆ. ಇದೆಲ್ಲದರ ಜೊತೆಗೆ, ಭೂಮಿಯಲ್ಲಿನ ಮುರಿದ ದೋಷದ ವಲಯ (‘ಜಿಡಿಚಿಛಿಣuಡಿeಜ ಜಿಚಿuಟಣ zoಟಿes’) ದಿಂದಲೂ ಭೂ ಕುಸಿತವಾಗಿರಬಹುದು ಎಂದು ಪ್ರಸ್ತಾಪಿಸಿದ್ದಾರೆ.

ಆದರೆ, ಜುಲೈ 8 ರಂದು ಆದ 3.4 ಮಾಪಕದ ಭೂ ಕಂಪನಕ್ಕೂ, ಆ.15 - 17 ರ ತನಕ ಆದ ಭೂ ಕುಸಿತಕ್ಕೂ ಯಾವದೇ ಸಂಬಂಧವಿಲ್ಲವೆಂದು ಭೂ ವಿಜ್ಞಾನಿಗಳ ವರದಿ ತಿಳಿಸುತ್ತದೆ. ‘ಭೂಕುಸಿತ ಭೂಕಂಪನದಿಂದ ಸಂಭವಿಸಿದ್ದರೆ, ಭೂಕುಸಿತ ಜುಲೈ ತಿಂಗಳಿನಲ್ಲೇ ನಡೆಯಬೇಕಿತ್ತು. ಇದಲ್ಲದೆ 45 ದಿನಗಳ ನಂತರ ನಡೆಯುತ್ತಿರಲಿಲ್ಲ ಎಂದು’ ವರದಿ ಸ್ಪಷ್ಟೀಕರಿಸುತ್ತದೆ.

ಭೂವಿಜ್ಞಾನಿಗಳ ವರದಿಯಂತೆ ಕೊಡಗಿನಲ್ಲಿ ತೆಗೆದುಕೊಳ್ಳಬೇಕಾದÀ ಮುನ್ನೆಚ್ಚರಿಕೆಯ ಕ್ರಮಗಳು:

ನಿರಂತರ ಮಳೆ ಹಾಗೂ ಮಾನವ ನಿಮಿರ್ತ ಕಾರಣಗಳಿಂದ ಕೊಡಗಿನಲ್ಲಿ

(ಮೊದಲ ಪುಟದಿಂದ) ಭೂಕುಸಿತ ಸಂಭವಿಸಿದೆ ಎಂದು ತಿಳಿಸುವ ಭೂವಿಜ್ಞಾನಿಗಳು, ರಾಜ್ಯ ಸರಕಾರ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಸಮಿತಿ ಕೊಡಗಿನಲ್ಲಿ ಭೂ ನಿರ್¨ಂಧÀನೆಯ ಕಟ್ಟುನಿಟ್ಟಿನ ಮಾರ್ಗಸೂಚಿ ರಚಿಸಬೇಕು. ‘ಕೊಡಗಿನಲ್ಲಿ ಭೂಬಳಕೆಯ ಕಟ್ಟುನಿಟ್ಟಾದ ಮಾರ್ಗಸೂಚಿಗಳಿಲ್ಲ. ಇದರ ಅವಶ್ಯಕತೆ ಪಶ್ಚಿಮ ಘಟ್ಟದ ಪ್ರದೇಶಗಳಿಗೆ, ಮುಖ್ಯವಾಗಿ ಕೊಡಗಿನ ಪ್ರದೇಶಕ್ಕೆ ಇದೆ,’ ಎಂದು ವರದಿ ಸೂಚಿಸುತ್ತದೆ. ಕೊಡಗಿನಲ್ಲಿ ಚರಂಡಿಯ ವ್ಯವಸ್ಥೆ ಸರಿಯಿಲ್ಲದ ಕಾರಣ, ಇದಕ್ಕೆ ತಕ್ಷಣ ವ್ಯವಸ್ಥಿತ ಸೌಲಭ್ಯ ಕಲ್ಪಿಸಬೇಕೆಂದು ಸೂಚಿಸುತ್ತದೆ. ಭೂ ವಿಜ್ಞಾನಿಗಳು ಹಾಗೂ ರಚನಾತ್ಮಕ ಇಂಜಿನಿಯರ್‍ಗಳ ಸಹಾಯ ಪಡೆದ ನಂತರವೇ ರಸ್ತೆ ಹಾಗೂ ಪಟ್ಟಣ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳÀಬೇಕೆಂದು ಸೂಚಿಸುತ್ತದೆ.

ಇವೆಲ್ಲ ಪ್ರಾಥಮಿಕ ವರದಿಯಾಗಿದ್ದು, ಇನ್ನೂ ಸೂಕ್ಷ್ಮ ವೀಕ್ಷಣೆಗೆ ಭೂವಿಜ್ಞಾನಿಗಳು ಮತ್ತೆ ಇದೀಗ ಕೊಡಗಿಗೆ ಆಗಮಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಶ್ರೀವಿದ್ಯಾ ಮಾಹಿತಿಯಿತ್ತರು.