26 (ಇಂದು)ರಂದು ಕೇತು ವಿನೊಡನೆ ಕುಜನು 27-28/7/2018ರಲ್ಲಿ ಸಂಭವಿಸಿದ ಚಂದ್ರಗ್ರಹಣದ ಕೋನವನ್ನು ತಲಪುವದರಿಂದ ಭಾರತ ದೇಶದ ವಾಯುವ್ಯ ದಿಕ್ಕಿನಲ್ಲಿ ಭೂಮಿ ಕಂಪಿಸಬಹುದು. ಪ್ರವಾಹ ಉಕ್ಕಬಹುದು. ಮೇಘ ಸ್ಫೋಟವಾಗಬಹುದು. ಭೂಮಿ ಕುಸಿಯಬಹುದು. 26 (ಇಂದು) ರಿಂದ 30 ದಿನಗಳ ಒಳಗೆ ಈ ಸಾಧ್ಯತೆಯಿದೆ.
ಗುರು ಗ್ರಹವು ವೃಶ್ಚಿಕ ರಾಶಿಗೆ 11-10-2018ರಲ್ಲಿ ಪ್ರವೇಶಿಸುತ್ತದೆ. 9-10-2018 ಗುರು-ಶುಕ್ರ-ಬುಧರು ತುಲಾ ರಾಶಿಯಲ್ಲಿ ಸೂರ್ಯನು ಹತ್ತಿರದಲ್ಲೇ ಇರುವನು ಇದು ಅಕಾಲ ಮಳೆಗೆ ಪುಷ್ಟಿಕೊಡುವ ಲಕ್ಷಣವಾಗಿದೆ. ಇದೇ ಸಮಯದಲ್ಲಿ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿಯಬಹುದು. ಕೊಡಗಿನಲ್ಲೂ ಮಳೆಯಾಗುವ ಎಲ್ಲಾ ಸಾಧ್ಯತೆಗಳಿದೆ. ಅಕ್ಟೋಬರ್ ಕೊನೆಯವಾರ, ನವೆಂಬರ್ ತಿಂಗಳಿನಲ್ಲಿ ಭಾರೀ ಗಾಳಿಯೊಂದಿಗೆ ಕೇರಳದಲ್ಲಿ ಮಾತ್ರವಲ್ಲ ಇಡೀ ಸಹ್ಯ ಬೆಟ್ಟದ ಸಾಲುಗಳಲ್ಲಿ ಪಶ್ಚಿಮ ಘಟ್ಟ ಪ್ರದೇಶಗಳಲ್ಲೆಲ್ಲಾ ಮಳೆಯಾಗುವದು. ಆ ಸಮಯದಲ್ಲಿ ಚೆನ್ನೈನಲ್ಲಿ ಪ್ರವಾಹ ಬರಬಹುದು. ಡಿಸೆಂಬರ್ ತಿಂಗಳಲ್ಲೂ, ಕೊಡಗಿನಲ್ಲಿ ಮಳೆಯನ್ನು ಕಾಣಬಹುದು.
?ಕರೋಟಿರ ಶಶಿ ಸುಬ್ರಮಣಿ,
ವೀರಾಜಪೇಟೆ.