ಭಾಗಮಂಡಲ, ಸೆ. 25: ಪ್ರಸಕ್ತ ವರ್ಷ ಅ. 17 ರ ಬುಧವಾರ ಸಂಜೆ 6.43 ಗಂಟೆಗೆ ಮೇಷ ಲಗ್ನದಲ್ಲಿ ತಲಕಾವೇರಿಯಲ್ಲಿ ಪವಿತ್ರ ಶ್ರೀ ಕಾವೇರಿ ತೀರ್ಥೋದ್ಭವ ನಡೆಯಲಿದೆ. ದೇವಸ್ಥಾನದ ಪಂಚಾಂಗ ಶ್ರವಣ ಮುಹೂರ್ತವನ್ನು ಸಿದ್ಧಪಡಿಸಿರುವÀ ಧಾರ್ಮಿಕ ದತ್ತಿ ಇಲಾಖಾ ಹಿರಿಯ ಪಂಡಿತರು ಇಂದು ತೀರ್ಥೋದ್ಭವ ಮುಹೂರ್ತವನ್ನು ಪ್ರಕಟಿಸಿದರು.ತೀರ್ಥೋದ್ಭವದ ಪೂರ್ವಭಾವಿಯಾಗಿ ನಡೆಯುವ ತುಲಾ ಕಾವೇರಿ ಸಂಕ್ರಮಣ ಜಾತ್ರೆಯ ಧಾರ್ಮಿಕ ವಿಧಿ ವಿಧಾನಗಳ ವಿವರ ಹೀಗಿದೆ: ಸೆ. 27 ರ ಗುರುವಾರ ಬೆ. 7.17 ರ ಕನ್ಯಾಲಗ್ನದಲ್ಲಿ ಪತ್ತಾಯಕ್ಕೆ ಅಕ್ಕಿ ಹಾಕುವದು, ಅ.5 ರ ಶುಕ್ರವಾರ ಬೆ. 10.15 ರ ವೃಶ್ಚಿಕ ಲಗ್ನದಲ್ಲಿ ಆಜ್ಞಾ ಮುಹೂರ್ತ, ಅ. 15 ರ ಸೋಮವಾರ ಬೆ. 10.25 ರ ವೃಶ್ಚಿಕ ಲಗ್ನದಲ್ಲಿ ಅಕ್ಷಯ ಪಾತ್ರೆ ಇರಿಸುವದು, ಅದೇ ದಿನ ಅಪರಾಹ್ನ 3.37 ರ ಕುಂಭ ಲಗ್ನದಲ್ಲಿ ಕಾಣಿಕೆ ಡಬ್ಬಿಗಳನ್ನು ಇರಿಸುವ ಧಾರ್ಮಿಕ ಕಾರ್ಯಕ್ರಮಗಳು ವಿಧಿವತ್ತಾಗಿ ನೆರವೇರಲಿದೆ.