ಚೆಯ್ಯಂಡಾಣೆ, ಸೆ. 25: ನರಿಯಂದಡ ಕೇಂದ್ರ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಮಾರ್ಚಂಡ ಆಶಾ ಪ್ರಭು ಅವರು ಆಂಗ್ಲ ಮಾಧ್ಯಮ ಶಾಲೆಯ ಎಲ್.ಕೆ.ಜಿ.ಯಿಂದ 5ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಟೈ ಮತ್ತು ಬೆಲ್ಟನ್ನು ಉಚಿತವಾಗಿ ವಿತರಿಸಿದರು.
ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ಸುಮನ್ ಶಾನುಬೋಗ್, ಉಪಾಧ್ಯಕ್ಷ ಐತಿಚಂಡ ಭೀಮಯ್ಯ, ಕಾರ್ಯದರ್ಶಿ ಬೊವ್ವೇರಿಯಂಡ ಮೋಹನ್ ಮೊಣ್ಣಪ್ಪ, ಖಜಾಂಚಿ ಬೊವ್ವೇರಿಯಂಡ ಲವಕುಮಾರ್, ನಿರ್ದೇಶಕರಾದ ರತೀಶ್ ಕುಮಾರ್, ರಜಾಕ್ ಹಾಗೂ ಸಹ ಶಿಕ್ಷಕಿಯರು ಹಾಜರಿದ್ದರು.