ನಾಪೋಕ್ಲು, ಸೆ. 25: ಜಿಲ್ಲೆಯಲ್ಲಿ ಸಂಭವಿಸಿದ ಅತಿವೃಷ್ಟಿ ಹಾನಿಗೆ ಕೊಡಗಿನ ಜಮ್ಮಾ ಹಾಗೂ ಬಾಣೆ ಹಿಡುವಳಿದಾರರೇ ಕಾರಣವೆಂದು ಕೆಲವು ಪರಿಸರವಾದಿಗಳು ನೀಡುತ್ತಿರುವ ಹೇಳಿಕೆಗಳನ್ನು ನಾಪೋಕ್ಲು, ಕೊಳಕೇರಿ ಸೇವ್ ಕೊಡಗು ವೇದಿಕೆ ತೀವ್ರವಾಗಿ ಖಂಡಿಸುತ್ತದೆ. ಪರಿಸರವಾದಿಗಳ ವಿರುದ್ಧ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುವದೆಂದು ವೇದಿಕೆ ಎಚ್ಚರಿಸಿದೆ.

ನಾಪೋಕ್ಲುವಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾಪೋಕ್ಲು ಕೊಳಕೇರಿ ಸೇವ್ ಕೊಡಗು ವೇದಿಕೆಯ ಸಂಚಾಲಕ ಪಟ್ರಪಂಡ ಮೋಹನ್ ಮುದ್ದಪ್ಪ, ಕೊಡಗಿನಲ್ಲಿ ಭೂಹಿಡುವಳಿದಾರರಿಂದ ಯಾವ ಪರಿಸರವು ನಾಶವಾಗಿಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಪದಾಧಿಕಾರಿಗಳಾದ ಬಿದ್ದಾಟಂಡ ಬಿ.ಸೋಮಯ್ಯ, ನಿಡುಮಂಡ ಕೃತಿ, ಬೊಪ್ಪಂಡ ಕವನ್ ಕಾಳಪ್ಪ, ಶಿವಚಾಳಿಯಂಡ ಕಿಶೋರ್ ಬೋಪಣ್ಣ ಉಪಸ್ಥಿತರಿದ್ದರು.