ಬಾಳೆಲೆ, ಸೆ.25 : ಇತ್ತೀಚೆಗೆ ಜಿಲ್ಲೆಯಲ್ಲಿ ಸಂಭವಿಸಿದ ಪ್ರಾಕೃತಿಕ ದುರಂತದ ಸಂದರ್ಭ ಹಾನಿಗೀಡಾದ ಪ್ರದೇಶಗಳಿಗೆ ಖುದ್ದು ತೆರಳಿ ಸಂಕಷ್ಟ ಎದುರಿಸುತ್ತಿದ್ದ ಜನತೆಗೆ ಸಹಕರಿಸಿರುವ ಬಾಳೆಲೆಯವರಾದ ಇಬ್ಬರನ್ನು ಅಲ್ಲಿನ ಎ.ಪಿ.ಸಿ.ಎಂ.ಎಸ್. ವತಿಯಿಂದ ಸನ್ಮಾನಿಸಲಾಯಿತು. ಜಿ.ಪಂ. ಮಾಜಿ ಸದಸ್ಯ ಅರಮಣಮಾಡ ರಂಜನ್ ಚಂಗಪ್ಪ ಹಾಗೂ ಕಾಟಿಮಾಡ ಶರೀನ್ ಮುತ್ತಣ್ಣ ಅವರುಗಳು ವಿಕೋಪದ ಸಂದರ್ಭ ಪರಿಶ್ರಮ ತೋರಿದ್ದು ಇವರನ್ನು ಗೌರವಿಸಲಾಗಿದೆ.