ಮಡಿಕೇರಿ, ಸೆ. 24: ಮಡಿಕೇರಿ ಲಯನ್ಸ್ ಸಂಸ್ಥೆ ವತಿಯಿಂದ ಶಿಕ್ಷಕರ ದಿನಾಚರಣೆ ಹಾಗೂ ವಲಯಾಧ್ಯಕ್ಷರ ಭೇಟಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವಲಯ 3ರ ವಲಯಾಧ್ಯಕ್ಷರು ಜೆ.ವಿ. ಕೋಟಿ ಲಯನ್ಸ್ ಸಂಸ್ಥೆಗಳ ಬೆಳವಣಿಗೆಗಾಗಿ ಸೂಕ್ತ ಮಾರ್ಗದರ್ಶನ ನೀಡಿದರು.

ಇದೇ ಸಂದರ್ಭ ನಿವೃತ್ತ ಶಿಕ್ಷಕಿ ವಸಂತ ಕುಮಾರಿ ಅವರನ್ನು ಶಿಕ್ಷಕರ ದಿನಾಚರಣೆ ಅಂಗವಾಗಿ ಸನ್ಮಾನಿಸಲಾಯಿತು. ಸೇವಾ ಭಾರತಿಯ ಕಾರ್ಯದರ್ಶಿಗಳಾದ ಕೆ.ಕೆ. ಮಹೇಶ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.

ಪ್ರಾರಂಭಗೊಂಡ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಲಯನ್ ಪಿ.ಪಿ. ಸೋಮಣ್ಣ, ಪ್ರೇಮ ಕೋಟಿ, ಲಯನ್ಸ್ ನಿಕಟಪೂರ್ವ ಅಧ್ಯಕ್ಷ ಲಯನ್ ಕೆ.ಎ. ಬೊಳ್ಳಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಮುಖರಾದ ಬಿ.ಸಿ. ನಂಜಪ್ಪ, ಉಳ್ಳಾಗಡ್ಡಿ, ಎಸ್.ಬಿ. ಮುರುಗೇಶ್, ನಿರಂಜನ್, ನವೀನ್, ದಿನೇಶ್ ರಾವ್, ಮಧುಕರ್, ಗೀತಾ ಮಧುಕರ್, ಸೌಮ್ಯ ನಿರಂಜನ್, ವಿಲ್ಮಾ ನಂಜಪ್ಪ, ಅನಿತಾ ಸೋಮಣ್ಣ, ಕಮಲಾ ಮುರುಗೇಶ್, ವೀರಾಜಪೇಟೆ ಹಾಗೂ ನಾಪೋಕ್ಲು ಸಂಸ್ಥೆಯ ಅಧ್ಯಕ್ಷರು ಹಾಗೂ ಸದಸ್ಯರು, ಸೇವಾ ಭಾರತಿಯ ಸದಸ್ಯರು, ಆರೋಹಣ ಸಂಸ್ಥೆಯ ಸದಸ್ಯರು ಹಾಗೂ ಇನ್ನಿತರ ಸದಸ್ಯರು ಪಾಲ್ಗೊಂಡಿದ್ದರು.

ಕುಮಾರಿ ಸ್ನೇಹ ಮತ್ತು ಸಪ್ನರ ಸುಶ್ರಾವ್ಯ ಪ್ರಾರ್ಥಿಸಿ, ಲಯನ್ಸ್ ಅಧ್ಯಕ್ಷರಾದ ಲಯನ್ ಕೆ.ಕೆ. ದಾಮೋದರ್ ಸ್ವಾಗತಿಸಿದರು.