ಗೋಣಿಕೊಪ್ಪ ವರದಿ, ಸೆ. 24 : ಇಲ್ಲಿನ ಉಮಾಮಹೇಶ್ವರಿ ದೇವಸ್ಥಾನ ಸಮಿತಿ ಹಾಗೂ ಮುಳಿಯ ಪ್ರತಿಷ್ಠಾನದ ವತಿಯಿಂದ ನಡೆದ ಚಿತ್ರಕಲಾ ಸ್ಪರ್ಧೆಯಲ್ಲಿ ನೂರಾರು ಸ್ಪರ್ಧಿಗಳು ಪಾಲ್ಗೊಳ್ಳುವ ಮೂಲಕ ಗಣಪತಿ ಚಿತ್ರಕ್ಕೆ ಜೀವ ತುಂಬಿದರು. ತಾಲೂಕಿನ ವಿವಿಧ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಬಾಲ ಗಣಪ, ಮೋದಕಪ್ರಿಯ ಗಣಪ, ಸಿಂಹಾಸನರೂಢ ಗಣೇಶ, ಚಂದ್ರನಿಗೆ ಶಾಪ ನೀಡುತ್ತಿರುವ ಗಣಪ ಚಿತ್ರ ಸ್ಪರ್ಧೆ ನಡೆಯಿತು.

ಸಮಾರೋಪದಲ್ಲಿ ಹಳ್ಳಿಗಟ್ಟು ಕೂರ್ಗ್ ಇನ್ಸ್ಟಿಟ್ಯೂಟ್ ಪಿಯು ಕಾಲೇಜು ಪ್ರಾಂಶುಪಾಲ ಸಣ್ಣುವಂಡ ರೋಹಿಣಿ ತಿಮ್ಮಯ್ಯ ಬಹುಮಾನ ವಿತರಣೆ ಮಾಡಿದರು. ಪೋಷಕರು ತಮ್ಮ ಮಕ್ಕಳ ಪ್ರತಿಭೆಯನ್ನು ಗುರುತಿಸಲು ಮುಂದಾಗಬೇಕು. ಆಗ ಮಾತ್ರ ವೇದಿಕೆಗಳನ್ನು ಸದುಪಯೋಗ ಪಡೆಸಿಕೊಂಡು ಬೆಳೆಯಲು ಅವಕಾಶ ದೊರೆತಂತಾಗುತ್ತದೆ ಎಂದು ರೋಹಿಣಿ ತಿಮ್ಮಯ್ಯ ಹೇಳಿದರು.

ತೀರ್ಪುಗಾರರುಗಳಾಗಿ ಕಲಾವಿದ ಸದಾನಂದ ಪುರೋಹಿತ್ ಹಾಗೂ ಮುರುವಂಡ ಸುಮ ಕುಟ್ಟಪ್ಪ ಕಾರ್ಯನಿರ್ವಹಿಸಿದರು. ಮುಳಿಯ ವ್ಯವಸ್ಥಾಪಕ ತೀತಿಮಾಡ ಸೋಮಣ್ಣ, ಉಮಾಮಹೇಶ್ವರಿ ದೇವಸ್ಥಾನ ಸಮಿತಿ ವ್ಯವಸ್ಥಾಪಕ ಮಧು ಉಪಸ್ಥಿತರಿದ್ದರು.

ಫಲಿತಾಂಶ (ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ)

1-4 ನೇ ತರಗತಿ ವಿಭಾಗಕ್ಕೆ ನಡೆದ ಬಾಲ ಗಣಪ ಸ್ಪರ್ಧೆಯಲ್ಲಿ ಸರ್ವದೈವತಾ ಶಾಲೆಯ ವಿ. ಎಸ್. ಸುಜಯ್, ಲಯನ್ಸ್‍ನ ಎಂ. ಟಿ. ಕನ್ನಿಕಾ, ಲಯನ್ಸ್‍ನ ಎಂ. ಡಿ. ಭೀಮಯ್ಯ. 5-7 ನೇ ತರಗತಿ ವಿಭಾಗದಲ್ಲಿ ಮೋದಕಪ್ರಿಯ ಗಣಪ ಸ್ಪರ್ಧೆಯಲ್ಲಿ ಗೋಣಿಕೊಪ್ಪ ಕೂರ್ಗ್ ಪಬ್ಲಿಕ್ ಶಾಲೆಯ ಎಂ. ಎನ್. ಗೌರಿಶಂಕರ್, ಕೂರ್ಗ್ ಪಬ್ಲಿಕ್ ಶಾಲೆಯ ಮೌರ್ಯಕೃಷ್ಣಗೌಡ, ವೀರಾಜಪೇಟೆ ಕೂರ್ಗ್ ವ್ಯಾಲಿ ಶಾಲೆಯ ವಿ. ಎಸ್. ಯಶಸ್, 8-10 ನೇ ತರಗತಿ ವಿಭಾಗಕ್ಕೆ ನಡೆದ ಸಿಂಹಾಸನರೂಢ ಗಣೇಶ ಸ್ಪರ್ಧೆಯಲ್ಲಿ ವೀರಾಜಪೇಟೆ ಕಾವೇರಿ ಶಾಲೆಯ ಪಿ. ಪಿ. ಪ್ರಣವ್, ಟಿ. ಶೆಟ್ಟಿಗೇರಿ ರೂಟ್ಸ್‍ನ ಭುವನ್ ಗಣಪತಿ, ಗೋಣಿಕೊಪ್ಪ ಸಂತ ಥೋಮಸ್ ಶಾಲೆಯ ಬಿ. ಐ. ಗಾಯನ, ಕಾಲೇಜು ವಿಭಾಗಕ್ಕೆ ನಡೆದ ಚಂದ್ರನಿಗೆ ಶಾಪ ನೀಡುತ್ತಿರುವ ಗಣಪ ಚಿತ್ರ ಸ್ಪರ್ಧೆಯಲ್ಲಿ ಗೋಣಿಕೊಪ್ಪ ಕಾವೇರಿ ಕಾಲೇಕಿನ ಜಯಸೂರ್ಯ, ಗೋಣಿಕೊಪ್ಪ ವಿದ್ಯಾನಿಕೇತನದ ದಿವಿನ್ ತಿಮ್ಮಯ್ಯ, ವೀವಿರಾಜಪೇಟೆ ಕಾವೇರಿ ಕಾಲೇಜಿನ ಎನ್. ಭುವನೇಶ್ ಪಡೆದುಕೊಂಡರು.

-ವರದಿ : ಸುದ್ದಿಪುತ್ರ