ಶನಿವಾರಸಂತೆ, ಸೆ. 24: ಶನಿವಾರಸಂತೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2017-18ನೇ ಸಾಲಿನಲ್ಲಿ ಸಂಘವು ರೂ. 33.34 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಎಸ್.ಸಿ. ಶರತ್ ಶೇಖರ್ ತಿಳಿಸಿದರು. ಶನಿವಾರಸಂತೆ ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಹ್ಮದ್ ಪಾಶಾ, ದೊಡ್ಡಪ್ಪ, ಹರೀಶ್, ಚೆನ್ನರಾಜ್, ದಯಕರ, ಮಹ್ಮದ್ ಗೌಸ್, ಕೆಂಚಪ್ಪ, ಇತರರು ಗಂಭೀರವಾಗಿ ಚರ್ಚೆಯಲ್ಲಿ ತೊಡಗಿದರು. ಅಗಲಿದ ಸಂಘದ ಸದಸ್ಯರಿಗೆ ಹಾಗೂ ಜಿಲ್ಲೆಯಲ್ಲಿ ಪ್ರಕೃತಿ ವಿಕೋಪಕ್ಕೆ ಬಲಿಯಾದವರ ಬಗ್ಗೆ ಸಂತಾಪ ವ್ಯಕ್ತಪಡಿಸಿ, ಮೌನಾಚರಣೆ ಮಾಡಲಾಯಿತು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಚ್. ಈ. ದೊಡ್ಡಯ್ಯ, ಆಡಳಿತ ಮಂಡಳಿಯ ವಾರ್ಷಿಕ ವರದಿ, ವಾರ್ಷಿಕ ಮಹಾಸಭೆಯ ನಡವಳಿ ಯನ್ನು ಸಭೆಗೆ ಮಂಡಿಸಿದರು. ಸಂಘದ ಉಪಾಧ್ಯಕ್ಷ ಎಸ್.ಎ. ಜಗದೀಶ್, ನಿರ್ದೇಶಕ ರಾದ ಕೆ.ಪಿ. ಪುಷ್ಪಾ, ಸವಿತ ಸತೀಶ್, ಜೆ.ಸಿ. ಲೋಕೇಶ್, ಗಿರೀಶ್, ಡಿ. ಅರವಿಂದ್, ಆರ್.ಎಂ. ಭುವನ್, ಡಿ.ಈ. ಬಸಪ್ಪ, ಎಸ್.ಎನ್. ರಘು, ಜಿಲ್ಲಾ ಕೇಂದ್ರ ಬ್ಯಾಂಕಿನ ಪ್ರತಿನಿಧಿ ಎಸ್.ಡಿ. ಶಶಿಕುಮಾರ್, ಸಿಬ್ಬಂದಿ ಚಂದ್ರ, ಕೆ.ಜೆ. ರಾಜಪ್ಪ, ಬಿ.ಎಸ್. ಅಶೋಕ್ ಕುಮಾರ್, ಎಂ. ದೀಪಕ್, ಸಿ.ಬಿ. ಸಚಿತ, ಎ.ವಿ.ದಿವಾಕರ, ಎಸ್.ಕೆ. ಉಮಾ ಉಪಸ್ಥಿತರಿದ್ದರು. ಭುವನ್ ಸ್ವಾಗತಿಸಿ, ಅರವಿಂದ ವಂದಿಸಿದರು.