ಮೂರ್ನಾಡು, ಸೆ. 24 : ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ನಡೆಸಿದ 2018 ನೇ ಸಾಲಿನ ಭರತನಾಟ್ಯ ಪರೀಕ್ಷೆಯ ಜೂನಿಯರ್ ವಿಭಾಗದಲ್ಲಿ ಸಿದ್ದಾಪುರದ ಭಾರತೀಯ ಸಂಗೀತ ನೃತ್ಯ ಕಲಾ ಶಾಲೆಯ ಮೂವರು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.

ಸಿದ್ದಾಪುರ ನಿವಾಸಿ ಮಂಜುನಾಥ್ ಮತ್ತು ತಾರಾಮಣಿ ದಂಪತಿ ಪುತ್ರಿ ಎಂ. ನೇಹ ಅತ್ಯುನ್ನತ ಶ್ರೇಣಿಯಲ್ಲಿ, ನೆಲ್ಯಹುದಿಕೇರಿ ನಿವಾಸಿ ಸುಧೀರ್ ಕುಮಾರ್ ಮತ್ತು ಪವಿತ್ರ ದಂಪತಿ ಪುತ್ರಿ ಟಿ.ಎಸ್. ವಿನಂತಿ ಮತ್ತು ಸಿದ್ದಾಪುರ ನಿವಾಸಿ ಶ್ರೀಕಂಠ ಮತ್ತು ಅಶ್ವಿನಿ ದಂಪತಿ ಪುತ್ರಿ ಎಸ್. ಶರಣ್ಯ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಇವರು ಭಾರತೀಯ ಸಂಗೀತ ನೃತ್ಯ ಕಲಾ ಶಾಲೆಯ ನೃತ್ಯ ಶಿಕ್ಷಕಿ ಜಲಜ ನಾಗರಾಜ್ ಮಾರ್ಗದರ್ಶನದಲ್ಲಿ ನಾಟ್ಯಾಭ್ಯಾಸ ಮಾಡುತ್ತಿದ್ದಾರೆ.