ವಿಶ್ವ ಓಝೋನ್ ಪದರದ ರಕ್ಷಣೆಗೆ ಸಂಬಂಧಿಸಿದಂತೆ ವಿಶ್ವ ಓಝೋನ್ ದಿನವು ಓಝೋನ್ ಪದರದ ಮಹತ್ವ ಹಾಗೂ ಪರಿಸರ ಮತ್ತು ಮಾನವ ಜೀವನದ ಮೇಲೆ ಇದರ ಪಾತ್ರವನ್ನು ತಿಳಿಸುತ್ತದೆ. 19 ನೇ ಡಿಸೆಂಬರ್ 1994 ರಂದು ವಿಶ್ವಸಂಸ್ಥೆಯ ಮಹಾ ಸಭೆಯು ಓಝೋನ್ ಪದರದ ರಕ್ಷಣೆಗೆ ಸಂಬಂಧಿಸಿದಂತೆ ಮಾಂಟ್ರಿಯಲ್ ಪ್ರೋಟೊಕಾಲ್‍ಗೆ ಸಹಿಹಾಕಿದ ದಿನದ ನೆನಪಿಗಾಗಿ ಸೆಪ್ಟೆಂಬರ್ 16 ನ್ನು ವಿಶ್ವ ಓಝೋನ್ ದಿನವನ್ನಾಗಿ ಆಚರಿಸಲು ಕರೆ ನೀಡಿತು. ಈ ದಿನವನ್ನು 1995 ರ ಸೆಪ್ಟೆಂಬರ್ 16 ರಂದು ಮೊದಲ ಬಾರಿಗೆ ಆಚರಿಸಲಾಯಿತು.

ವಿಶ್ವ ಓಝೋನ್ ದಿನವು ಓಝೋನ್ ಪದರದ ಮಹತ್ವ, ಪರಿಸರ ಮತ್ತು ಮಾನವ ಜೀವನದ ಮೇಲೆ ಇದರ ಪಾತ್ರವನ್ನು ತಿಳಿಸುತ್ತದೆ. ಈ ದಿಸೆಯಲ್ಲಿ ಓಜೋನ್ ಪದರ ರಕ್ಷಣೆ ಕುರಿತು ಜನಜಾಗೃತಿ ಮೂಡಿಸಲಾಗುತ್ತಿದೆ.

ಓಝೋನ್ ಪದರದ ಅಪಾಯಗಳು : 1980 ಮತ್ತು 1990 ರಲ್ಲಿ ವಿಜ್ಞಾನಿಗಳು ಓಝೋನ್ ಪದರದಲ್ಲಿ ರಂಧ್ರಗಳಾಗಿರುವುದನ್ನು ಗಮನಿಸಿದರು. ನಂತರದ ದಿನಗಳಲ್ಲಿ ವಿಜ್ಞಾನಿಗಳು ಇದು ಕೇವಲ ರಂಧ್ರವಲ್ಲ ವಾಸ್ತವವಾಗಿ ಓಝೋನ್ ಸಂಪೂರ್ಣವಾಗಿ ಖಾಲಿಯಾಗಿರುವ ಓಝೋನ್ ಪದರದ ಪ್ರದೇಶ ಎಂದು ಅರಿತುಕೊಂಡರು. ಓಝೋನ್ ಪದರದ ಪ್ರದೇಶವು ಸೂರ್ಯನ ಕಿರಣವನ್ನು ಹೆಚ್ಚು ಹೀರದೆ ಅಥವಾ ಪ್ರತಿಫಲಿಸದೆ ನೇರವಾಗಿ ಭೂಮಿಗೆ ತಲುಪಿಸಿ ಭವಿಷ್ಯದಲ್ಲಿ ಮಾರಕವಾಗಿ ಪರಿಣಾಮ ಆಗಬಹುದೆನ್ನುವುದನ್ನು ಅರಿತರು.ದಕ್ಷಿಣ ಧ್ರುವ ಪ್ರದೇಶಗಳಲ್ಲಿ ಓಝೋನ್ ಪದರದ ಕ್ಷಿಪ್ರ ನಾಶಕ್ಕೆ ಕ್ಲೋರಿನ್ ಮತ್ತು ಬ್ರೋಮಿನ್‍ಗಳ ರಾಸಾಯನಿಕ ಕ್ರಿಯೆ ಕಾರಣವಾಗಿದೆ.2006 ರಿಂದ ಓಝೋನ್ ಪದರದಲ್ಲಿನ ರಂಧ್ರಗಳು ಕ್ರಮೇಣ ಕುಗ್ಗುತ್ತಿವೆ.

2009 ರ ನಂತರ ಓಝೋನ್ ಪದರದ ನಾಶಕ್ಕೆ ಕಾರಣವಾದ 98% ರಷ್ಟು ಪದಾರ್ಥಗಳನ್ನು ನಿಷೇಧಿಸುವಲ್ಲಿ ಸಫಲವಾಯಿತು. ಆಗ ಎಲ್ಲಾ ದೇಶಗಳು ಒಟ್ಟಿಗೆ ಕೈ ಜೋಡಿಸಿ ಜಾಗತಿಕ ತಾಪಮಾನವನ್ನು 2 ಡಿಗ್ರಿ ಸೆಲ್ಸಿಯಸ್‍ಗೆ ಸೀಮಿತಗೊಳಿಸಲು ಒಪ್ಪಿದಾಗ ಈ ಕಾರ್ಯ ಸಂಭವನೀಯವೆನಿಸಿತು. ಇಲ್ಲಿಂದ ‘ಗ್ರಹದ ರಕ್ಷಣೆಗೆ ಹಸಿರನ್ನು ಬೆಳೆಯಿರಿ’ ಎಂಬ ಘೋಷಣೆ ಪ್ರಚಲಿತವಾಯಿತು.

ದಿನದ ಮಹತ್ವ : ವಿಶ್ವ ಓಝೋನ್ ಪದರ ಸಂರಕ್ಷಣಾ ದಿನದಂದು ವಿಶಿಷ್ಟವಾಗಿ ಪರಿಸರ ಸಂರಕ್ಷಣೆಯಲ್ಲಿ ಓಝೋನ್ ಪದರ ಸಂರಕ್ಷಣೆಯ ಮಹತ್ವವನ್ನು ತಿಳಿಸುವ ಮೂಲಕ ಸೂರ್ಯ, ಆಕಾಶ ಅಥವಾ ಭೂಮಿಯ ನೈಸರ್ಗಿಕ ಪರಿಸರದ ಚಿತ್ರಗಳನ್ನು ಬಳಸುವ ಮೂಲಕ ವಿದ್ಯಾರ್ಥಿಗಳು ಹಾಗೂ ನಾಗರಿಕರಲ್ಲಿ ಪರಿಸರ ಜಾಗೃತಿ ಮೂಡಿಸಬೇಕಾಗಿದೆ.

ವಿಷಯ/ಉದ್ಘೋಷಣೆ : 2012 ರಲ್ಲಿ ಮಾಂಟ್ರಿಯಲ್ ಪ್ರೋಟೊಕಾಲ್ ತನ್ನ 25 ನೇ ವಾರ್ಷಿಕೋತ್ಸವವನ್ನು ಪೂರೈಸಿತು. ವಿಶ್ವ ಸಂಸ್ಥೆಯ ಪರಿಸರ ಕಾರ್ಯಕ್ರಮದಲ್ಲಿ 2012 ರ ಕೇಂದ್ರ ವಿಷಯ ‘ಮುಂದಿನ ಪೀಳಿಗೆಗಾಗಿ ನಮ್ಮ ವಾಯುಮಂಡಲ ರಕ್ಷಿಸಿ’ ಎನ್ನುವುದಾಗಿತ್ತು. ಪ್ರಸಕ್ತ ಸಾಲಿನಲ್ಲಿ ಕೇಂದ್ರ ವಿಷಯವು ‘ತಂಪಾಗಿಸಿ, ಮುಂದುವರಿಸಿ’ ಖಿheme : “ ಏeeಠಿ ಛಿooಟ, ಛಿಚಿಡಿಡಿಥಿ oಟಿ’ ಎಂಬುದಾಗಿರುತ್ತದೆ. ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮವು ರಾಷ್ಟ್ರ ಹಾಗೂ ಜನರಲ್ಲಿ ಜೀವನಮಟ್ಟವನ್ನು ಸ್ಪೂರ್ತಿದಾಯಕವಾಗಿ ಸುಧಾರಿಸಿ ಮುಂದಿನ ಪೀಳಿಗೆಗಾಗಿ ಶ್ರಮಿಸುವಲ್ಲಿ ಕಾರ್ಯ ನಿರತವಾಗಿದೆ.

ಆದ್ದರಿಂದ ನಾವು ಸಿ.ಎಫ್.ಸಿ. (ಅ.ಈ.ಅ) ರಹಿತ ರೆಫ್ರಿಜಿರೇಟರ್‍ಅನ್ನು ಉಪಯೋಗಿಸಬೇಕು. ಸೂರ್ಯನಿಂದ ಬರುವ ನೇರಳಾತೀತ ನೀಲ ಕಿರಣ(Uಟಣಡಿಚಿ ಗಿioಟeಣ ಖಚಿಥಿs) ಗಳನ್ನು ತಡೆದು ಅಪಾಯವನ್ನು ತಪ್ಪಿಸುವಂತ ಓಝೋನ್ ಪದರ (ಔzoಟಿe hoಟe) ಕ್ಕೆ ಧಕ್ಕೆ ಬರುತ್ತದೆ. ಅದಕ್ಕೆ ರಂಧ್ರವಾದರೆ ಕ್ಯಾನ್ಸರ್‍ನಂತಹ ಚರ್ಮರೋಗಗಳಿಗೆ ಕಾರಣವಾಗುತ್ತದೆ. ಆದ್ದರಿಂದ ನಾವು ಓಝೋನ್ ಪದರವನ್ನು ಸಂರಕ್ಷಿಸಬೇಕು. ಇದು ನಮ್ಮನ್ನು ರಕ್ಷಿಸುತ್ತದೆ.

ಓಝೋನ್ ಪದರಕ್ಕೆ ಯಾವುದೇ ರೀತಿಯಲ್ಲಿ ಹಾನಿಯಾಗದಂತೆ ನಾವು ಜಾಗ್ರತೆ ವಹಿಸಬೇಕಿದೆ. ಓಝೋನ್ ಪದರದ ನಾಶವನ್ನು ತಡೆಯಲು ಎಲ್ಲಾ ರಾಷ್ಟ್ರಗಳು ಸಂಘಟಿತರಾಗಿ ಪರಿಸರ ಮಾಲಿನ್ಯ ನಿಯಂತ್ರಣದೊಂದಿಗೆ ಜಾಗತಿಕ ತಾಪಮಾನ ತಡೆಗಟ್ಟುವ ಮೂಲಕ ಓಝೋನ್ ಪದರ ಸಂರಕ್ಷಿಸಬೇಕಿದೆ. ಓಝೋನ್ ಪದರದ ಕ್ಷಿಪ್ರ ನಾಶಕ್ಕೆ ಕಾರಣವಾದ ಮಾಲಿನ್ಯಕಾರಕ ಪದಾರ್ಥಗಳು ವಾಯುಮಂಡಲಕ್ಕೆ ಸೇರದಂತೆ ನಾವು ಜಾಗ್ರತೆ ವಹಿಸಬೇಕು. ಇಲ್ಲದಿದ್ದಲ್ಲಿ ಓಜೋನ್ ಪದರ ಸಂಪೂರ್ಣ ನಾಶವಾದರೆ ಇಡೀ ಜೀವ ಸಂಕುಲಕ್ಕೆ ತೊಂದರೆಯಾಗುವ ಅಪಾಯವಿದೆ. ಮುಂದಿನ ಪೀಳಿಗೆಗಾಗಿ ಪರಿಸರಕ್ಕೆ ಯಾವುದೇ ಧಕ್ಕೆಯನ್ನುಂಟುಮಾಡದೆ ನಾವು ವಾಯುಮಂಡಲ ರಕ್ಷಿಸಬೇಕಾಗಿದೆ ಪ್ರತಿಯೊಬ್ಬರೂ ತಮ್ಮನ್ನು ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳಬೇಕು. ಪರಿಸರ ಮಾಲಿನ್ಯ ತಡೆಗಟ್ಟಲು ಎಲ್ಲರೂ ಪ್ರಯತ್ನಿಸಬೇಕು ಓಜೋನ್ ಪದರದ ರಕ್ಷಣೆಯಲ್ಲಿ ನಾವು ವಹಿಸಬೇಕಾದ ಜವಾಬ್ದಾರಿ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು. ಈ ದಿಸೆಯಲ್ಲಿ ನಾವು ವಾತಾವರಣದಲ್ಲಿ ಯಾವುದೇ ಮಾಲಿನ್ಯವನ್ನುಂಟು ಮಾಡದೆ ಪರಿಸರವನ್ನು ಸಂರಕ್ಷಿಸಬೇಕಿದೆ.

ಬನ್ನಿ, ನಾವೆಲ್ಲ ಜತೆಗೂಡಿ ಮಾಲಿನ್ಯರಹಿತ ಹಾಗೂ ಹಚ್ಚ ಹಸಿರು ಪರಿಸರ ನಿರ್ಮಿಸಲು ಕೈಜೋಡಿಸೋಣ. ಆದ್ದರಿಂದ ಓಝೋನ್ ಪದರದ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ.

? ಟಿ. ಜಿ. ಪ್ರೇಮಕುಮಾರ್, ಶಿಕ್ಷಕರು,

ಸರ್ಕಾರಿ ಪ್ರೌಢಶಾಲೆ, ಸುಂಟಿಕೊಪ್ಪ,ಕೊಡಗು ಜಿಲ್ಲೆ