ಮಡಿಕೇರಿ, ಸೆ. 24: ಪ್ರಸಕ್ತ ಸಾಲಿನಲ್ಲಿ ಚೇತನಾ ಯೋಜನೆಯಡಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ಕೊಡಗು ಜಿಲ್ಲೆಗೆ 6 ಗುರಿಗಳನ್ನು ನಿಗದಿಪಡಿಸಲಾಗಿದ್ದು, ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಲೈಂಗಿಕ ವೃತ್ತಿ ನಿರತ ಸ್ವಯಂ ಉದ್ಯೋಗಕ್ಕಾಗಿ ಹಾಗೂ ಸಮಾಜದಲ್ಲಿ ಗೌರವಾನ್ವಿತ ಜೀವನವನ್ನು ನಡೆಸಲು ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ನಿಗಮವು ಯೋಜನೆಯನ್ನು ಅನುಷ್ಠಾನ ಗೊಳಿಸಿದೆ. ಈ ಯೋಜನೆಯಡಿ ಸ್ವ-ಉದ್ಯೋಗ ಕೈಗೊಳ್ಳಲು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ಪ್ರತಿ ಫಲಾನುಭವಿಗೆ ಘಟಕ ವೆಚ್ಚ ರೂ. 50 ಸಾವಿರಗಳನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ಆರ್.ಟಿ.ಜಿ.ಎಸ್. ಮೂಲಕ ಜಮೆ ಮಾಡಲಾಗುತ್ತಿದೆ. ಈ ಪೈಕಿ ರೂ. 25 ಸಾವಿರಗಳ ನೇರ ಸಾಲ ಹಾಗೂ ರೂ. 25 ಸಾವಿರಗಳನ್ನು ಸಹಾಯ ಧನವನ್ನಾಗಿ ನೀಡಲಾಗುವದು. ಸಂಬಂಧಪಟ್ಟ ದಾಖಲೆಗಳೊಂದಿಗೆ ರೂ. 50 ಛಾಪಾ ಕಾಗದವನ್ನು ಲಗತ್ತಿಸಿ ಕಚೇರಿಗೆ ಸಲ್ಲಿಸುವದು. ಆಸಕ್ತರು ಹೆಚ್ಚಿನ ಮಾಹಿತಿಗೆ ಕಚೇರಿ ವೇಳೆಯಲ್ಲಿ ಜಿಲ್ಲಾ ವ್ಯವಸ್ಥಾಪಕರ ಕಚೇರಿ/ಉಪನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಚೈನ್ ಗೇಟ್, ಮೈಸೂರು ರಸ್ತೆ, ಮಡಿಕೇರಿ ದೂ.ಸಂ: 08272-298379 ನ್ನು ಸಂಪರ್ಕಿಸಬಹುದು.