ಮಡಿಕೇರಿ, ಸೆ. 23: ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೇಂದ್ರ ಸರ್ಕಾರ ನಬಾರ್ಡ್‍ನ ಮೂಲಕ ಹೈನುಗಾರಿಕೆಯನ್ನು ಅಭಿವೃದ್ಧಿಪಡಿಸುವ ಸಲುವಾಗಿ ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿದ್ದು ಇದರ ಬಗ್ಗೆ ಕೊಲ್ಲೀರ ಎಂ. ಗೋಪಿಚಿಣ್ಣಪ್ಪ ಅವರ ಅಧ್ಯಕ್ಷತೆಯಲ್ಲಿ ತಾ. 25 ರಂದು ಬೆಳಿಗ್ಗೆ 10.30 ಗಂಟೆಗೆ ಹೊಸೂರು ಗ್ರಾಮ ಪಂಚಾಯಿತಿಯ ಶ್ರೀ ಮಹಾದೇಶ್ವರ ದೇವಸ್ಥಾನ ಪಕ್ಕದ ಸುವರ್ಣ ಗ್ರಾಮ ಸಮುದಾಯ ಭವನದಲ್ಲಿ ವಿಶೇಷ ಸಭೆಯನ್ನು ಕರೆಯಲಾಗಿದೆ. ಸಭೆಯಲ್ಲಿ ಹೈನುಗಾರಿಕೆಯ ಕುರಿತು ನಬಾರ್ಡ್ ವ್ಯವಸ್ಥಾಪಕ ಮುಂಡಂಡ ನಾಣಯ್ಯ, ಪಶು ವೈದ್ಯಾಧಿಕಾರಿ ಸಂತೋಷ್, ಕೆನರಾ ಬ್ಯಾಂಕ್ ವ್ಯವಸ್ಥಾಪಕರು, ವಿಮಾ ಕಂಪೆನಿಯವರು ಮುಂತಾದ ಅಧಿಕಾರಿಗಳು ಭಾಗವಹಿಸಿ ಹೈನುಗಾರಿಕೆಯ ಬಗ್ಗೆ ಸಭೆಗೆ ಮಾಹಿತಿ ನೀಡಲು ಉಪಸ್ಥಿತರಿರುವದರಿಂದ ಆಸಕ್ತ ಸಾರ್ವಜನಿಕರು ಭಾಗವಹಿಸುವ ಮೂಲಕ ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಗ್ರಾಮ ಪಂಚಾಯಿತಿ ಪ್ರಕಟಣೆಯಲ್ಲಿ ತಿಳಿಸಿದೆ.