ಶನಿವಾರಸಂತೆ, ಸೆ. 23: ಕೊಡ್ಲಿಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2017-18ನೇ ಸಾಲಿನಲ್ಲಿ ಸಂಘವು ರೂ. 63.97 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಅಧ್ಯಕ್ಷ ಎಸ್.ಡಿ. ತಿಮ್ಮಯ್ಯ ತಿಳಿಸಿದರು. ಕೊಡ್ಲಿಪೇಟೆ ಗ್ರಾಮ ಪಂಚಾಯಿತಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಂಘದಲ್ಲಿ ವರ್ಷಾಂತ್ಯಕ್ಕೆ ಕ್ಷೇಮನಿಧಿ 57.54 ಲಕ್ಷ ಮತ್ತು ಇತರೆ ನಿಧಿಗಳು 62.56 ಲಕ್ಷ ಸೇರಿ 120.10 ಲಕ್ಷ ಇದೆ. ಡಿ.ಸಿ.ಸಿ. ಬ್ಯಾಂಕಿನಿಂದ 1989.04 ಲಕ್ಷ ಕೆ.ಸಿ.ಸಿ. ಸಾಲ ಪಡೆದು, 2006-15 ಲಕ್ಷ, ಕೆ.ಸಿ.ಸಿ. ಸಾಲ ವಿತರಿಸಲಾಗಿದೆ. ಸಂಘದ ಸದಸ್ಯರುಗಳಿಗೆ 22% ಡಿವಿಡೆಂಡ್ ವಿತರಿಸಲಾಗುವದು ಎಂದರು.

ಸಭೆಯಲ್ಲಿ ಸದಸ್ಯರುಗಳಾದ ಭಗವಾನ್ ಮಂಜುನಾಥ, ಇಂದ್ರೇಶ್, ಸುಧೀಂದ್ರಕುಮಾರ್, ಜಯಪ್ಪ, ಮಳಲಿ ನಾಗೇಶ್, ಆನಂದ, ಮಹೇಶ, ಬಸಪ್ಪ, ಯೋಗವೇಂದ್ರ, ರಾಜಶೇಖರ್, ಅಮೃತ, ಅಪ್ಪಣಪ್ಪ, ಮುತ್ತೇಗೌಡ, ಅಬ್ಬಾಸ್ ಇತರರು ಚರ್ಚೆಯಲ್ಲಿ ಪಾಲ್ಗೊಂಡರು. ಹೆಚ್ಚು ಅಂಕ ಗಳಿಸಿದ ಶಾಲಾ ಮಕ್ಕಳಿಗೆ ಪ್ರೋತ್ಸಾಹ ಧನವನ್ನು ಬಹುಮಾನವಾಗಿ ವಿತರಿಸಲಾಯಿತು. ಅಗಲಿ ಸಂಘದ ಸದಸ್ಯರಿಗೆ ಹಾಗೂ ಜಿಲ್ಲೆಯಲ್ಲಿ ಪ್ರಕೃತಿ ವಿಕೋಪಕ್ಕೆ ಬಲಿಯಾದವರಿಗೆ ಸಂತಾಪ ವ್ಯಕ್ತಪಡಿಸಿ ಮೌನಾಚಾರಣೆ ಮಾಡಲಾಯಿತು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಡಿ. ನಾಗರಾಜ್, ಆಡಳಿತ ಮಂಡಳಿಯ ವಾರ್ಷಿಕ ವರದಿ, ವಾರ್ಷಿಕ ಮಹಾಸಭೆಯ ನಡಾವಳಿಕೆ ಯನ್ನು ಸಭೆಗೆ ಮಂಡಿಸಿದರು.

ಸಂಘದ ಉಪಾಧ್ಯಕ್ಷೆ ಎ.ಎನ್. ಭಾನುಮತಿ, ನಿರ್ದೇಶಕರಾದ ಬಿ.ಕೆ. ಚಿಣ್ಣಪ್ಪ, ಬಿ.ಕೆ. ಯತೀಶ್, ಕೆ.ಸಿ. ಪ್ರಸನ್ನ, ಬಿ.ಎ. ವಸಂತ, ಕೆ.ಬಿ. ಸುಬ್ರಮಣ್ಯಾಚಾರಿ, ಹೆಚ್.ಎಸ್. ನಿರ್ಮಲ, ಬಿ.ಇ. ರಾಜು, ಕೆ.ಬಿ. ಯೋಗೇಶ್, ಜಿಲ್ಲಾ ಕೇಂದ್ರ ಬ್ಯಾಂಕಿನ ಪ್ರತಿನಿಧಿ ಎಸ್.ಡಿ. ಶಶಿಕುಮಾರ್, ಸಿಬ್ಬಂದಿ ಹೆಚ್.ಎಸ್. ಸುರೇಶ್, ಬಿ.ಡಿ. ಅಮೃತ, ನಾಗೇಶ್, ಯು.ವೈ. ಮಂಜುನಾಥ, ಬಿ.ಕೆ. ಶಶಿಧರ ಉಪಸ್ಥಿತರಿದ್ದು, ಸುಬ್ರಮಣ್ಯಾಚಾರಿ ಅವರು ಸ್ವಾಗತಿಸಿ, ಯತೀಶ್ ವಂದಿಸಿದರು.