ಮಡಿಕೇರಿ, ಸೆ. 23: ಜಿಲ್ಲೆಯ 2014, 2015, 2016 ಮತ್ತು 2017 ನೇ ಶೈಕ್ಷಣಿಕ ವರ್ಷದಲ್ಲಿ 8 ನೇ ತರಗತಿಯಲ್ಲಿ ವ್ಯಾಸಂಗ ಮಾಡಿರುವ ಸಂದರ್ಭ ಎನ್.ಎಂ.ಎಂ.ಎಸ್ ಪರೀಕ್ಷೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ತಮ್ಮ ವಿವರವನ್ನು ಎಂಎಚ್‍ಆರ್‍ಡಿ ನವದೆಹಲಿ ಇವರು ಸಿದ್ಧಪಡಿಸಿರುವ ನ್ಯಾಷನಲ್ ಸ್ಕಾಲರ್‍ಷಿಪ್ ಪೋರ್ಟಲ್ ವೆಬ್‍ಸೈಟ್ ತಿತಿತಿ.sಛಿhoಟoಡಿshiಠಿ.gov.iಟಿ ನಲ್ಲಿ 2017 ರಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ನೋಂದಾಯಿಸಿಕೊಂಡು, ಆಧಾರ್ ಸಂಖ್ಯೆ ಮತ್ತು ಶಾಶ್ವತ ಮೊಬೈಲ್ ದೂರವಾಣಿ ಸಂಖ್ಯೆಯೊಂದಿಗೆ ಬ್ಯಾಂಕ್ ವಿವರವನ್ನು ಅಪ್‍ಲೋಡ್ ಮಾಡುವದು ಕಡ್ಡಾಯವಾಗಿದೆ. 2014, 2015, 2016 ರಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ನವೀಕರಣವನ್ನು ಇದೇ ಎನ್‍ಎಸ್‍ಪಿ2.0 ಪೋರ್ಟಲ್‍ನಲ್ಲಿ ನವೀಕರಣಗೊಳಿಸುವಂತೆ ಸರಕಾರ ಸೂಚಿಸಿದೆ. ವಿದ್ಯಾರ್ಥಿ ವ್ಯಾಸಂಗ ಮಾಡಿದ ಸಂಸ್ಥೆಯಿಂದ ಮುಖ್ಯ ಶಿಕ್ಷಕರು, ಆಯ್ಕೆಯಾದ ವಿದ್ಯಾರ್ಥಿಗಳಿಗೆ ಅಥವಾ ಪೋಷಕರಿಗೆ ಮಾಹಿತಿ ಅಪ್‍ಲೋಡ್ ಮಾಡುವಂತೆ ವಿಷಯ ಕಡ್ಡಾಯವಾಗಿರುತ್ತದೆ. ಅಕ್ಟೋಬರ್ 31 ವಿದ್ಯಾರ್ಥಿಗಳು ಮಾಹಿತಿ ಅಪ್ಲೋಡ್ ಮಾಡಲು ಕೊನೆಯ ದಿನವಾಗಿದೆ. ನಂತರ ಸಂಸ್ಥೆಯ ಮುಖ್ಯಸ್ಥರು ಪರಿಶೀಲಿಸಿ ನಂತರ ಜಿಲ್ಲಾ ಹಂತದಲ್ಲಿ ಪರಿಶೀಲಿಸಿ ರಾಜ್ಯ ಹಂತಕ್ಕೆ ಕಳುಹಿಸಲಾಗುವದು ಎಂದು ಡಯಟ್ ಕೂಡಿಗೆಯ ಪ್ರಾಂಶುಪಾಲರು ತಿಳಿಸಿದ್ದಾರೆ.